ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಅಕಾಲಿಕ ಮಳೆಯಿಂದ ಕಂಗಾಲಾದ ಕಾಫಿ ಬೆಳೆಗಾರರು: ಕೊಯ್ಲಿಗೂ ಮುನ್ನವೇ ಅರಳಿದ ಹೂಗಳು!

Published : 14 ಜನವರಿ 2024, 7:29 IST
Last Updated : 14 ಜನವರಿ 2024, 7:29 IST
ಫಾಲೋ ಮಾಡಿ
Comments
ನಾಪೋಕ್ಲು  ಸಮೀಪದ ನೆಲಜಿ ಗ್ರಾಮದಲ್ಲಿ ಕಾಫಿಯ ಗಿಡಗಳಲ್ಲಿ ಹೂಗಳು ಅರಳಿವೆ.. 
ನಾಪೋಕ್ಲು  ಸಮೀಪದ ನೆಲಜಿ ಗ್ರಾಮದಲ್ಲಿ ಕಾಫಿಯ ಗಿಡಗಳಲ್ಲಿ ಹೂಗಳು ಅರಳಿವೆ.. 
ಶನಿವಾರಸಂತೆ ಮಾರುಕಟ್ಟೆಯ ಜಾಗದಲ್ಲಿ ಕಾಫಿ ಒಣಗಿಸುತ್ತಿರುವ ದೃಶ್ಯ ಶನಿವಾರ ಕಂಡು ಬಂತು
ಶನಿವಾರಸಂತೆ ಮಾರುಕಟ್ಟೆಯ ಜಾಗದಲ್ಲಿ ಕಾಫಿ ಒಣಗಿಸುತ್ತಿರುವ ದೃಶ್ಯ ಶನಿವಾರ ಕಂಡು ಬಂತು
ಪ್ರತಿ ವರ್ಷ ಫೆಬ್ರುವರಿ, ಮಾರ್ಚ್‌ನಲ್ಲಿ ಅರಳುತ್ತಿದ್ದ ಕಾಫಿ ಹೂ ಜನವರಿ ಮೊದಲ ವಾರದಲ್ಲಿ ಸುರಿದ ಮಳೆ ಕಾಫಿ ಹಣ್ಣಿನ ಮಧ್ಯೆಯೆ ಹೂಗಳ ರಾಶಿ
ಈ ವರ್ಷದ ಮಳೆಯಿಂದ ಕಾಫಿ ಬೆಳೆಗಾರರು ಅತಂತ್ರ ಸ್ಥಿತಿಗೆ ಒಳಗಾಗಿದ್ದಾರೆ. ಕಳೆದ 3 ವರ್ಷಗಳಿಂದ ಬರುತ್ತಿರುವ ಅಕಾಲಿಕ ಮಳೆಯಿಂದಾಗಿ ಕಾಫಿ ಕೊಯ್ಲು ಮಾಡಲಾಗದೆ ತೋಟಗಳಲ್ಲೇ ಕಾಫಿ ನಾಶವಾಗುತ್ತಿದೆ
-ಎ.ಎಂ.ಆನಂದ್ ಅಪ್ಪಶೆಟ್ಟಳ್ಳಿ ಶನಿವಾರಸಂತೆ
ಗೊಂದಲಕ್ಕೆ ಸಿಲುಕಿದ ಕಾಫಿ ಬೆಳೆಗಾರರು
ಎಚ್.ಎಸ್.ಶರಣ್ ಶನಿವಾರಸಂತೆ: ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದ ಹೋಬಳಿಯ ಬಹುತೇಕ ಭಾಗಗಳ ಕಾಫಿ ತೋಟಗಳಲ್ಲಿ ಕಾಫಿ ಹೂಗಳು ಅರಳಿವೆ. ಈ ವರ್ಷದ ಕಾಫಿ ಪಸಲನ್ನು ಇನ್ನು ಹಲವು ರೈತರು ಕೊಯ್ಲು ಮಾಡಿಲ್ಲ. ಈ ಹಂತದಲ್ಲೇ ಹೂ ಅರಳಿರುವುದರಿಂದ ಕಾಫಿ ಬೆಳೆಗಾರರು ಗೊಂದಲಕ್ಕೆ ಒಳಗಾಗಿದ್ದಾರೆ. ಈಗ ಬಿಟ್ಟಿರುವ ಕಾಫಿ ಹೂವಿನಿಂದ ಮುಂದಿನ ವರ್ಷದ ಫಸಲು ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿ ಕಾಫಿ ಬೆಳಗಾರರು ಇದ್ದಾರೆ. ಕಳೆದ ವರ್ಷ ಅಕಾಲಿಕ ಮಳೆ ಬಂದಿದ್ದರೂ ಇಷ್ಟರಮಟ್ಟಿಗೆ ಹೂವು ಅರಳಿರಲಿಲ್ಲ. ನಂತರ ಫೆಬ್ರುವರಿ ಮಾರ್ಚ್ ತಿಂಗಳಿನಲ್ಲಿ ಬಂದಂತ ಅಲ್ಪ ಪ್ರಮಾಣದ ಮಳೆಯಿಂದ ಕಾಫಿ ಹೂವು ಅರಳಿ ಈ ವರ್ಷದ ಕಾಫಿ ಪಸಲು ಯಥಾ ಸ್ಥಿತಿಯಲ್ಲಿ ಇತ್ತು. ಈಗ ಬಂದಿರುವ ಅಕಾಲಿಕ ಮಳೆಯಿಂದಾಗಿ ಕಾಫಿ ಬೆಳೆಗಾರರು ಕಾಫಿ ಗಿಡದಲ್ಲಿ ಬಿಟ್ಟಿರುವ ಫಸಲನ್ನು ತೆಗೆಯಲಾಗದೆ ಮುಂದಿನ ವರ್ಷದ ಫಸಲನ್ನು ಉಳಿಸಿಕೊಳ್ಳಲೂ ಆಗದೇ ಚಿಂತೆಗೀಡಾಗಿದ್ದಾರೆ. ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ಭಾಗದ ಕಾಫಿ ಬೆಳೆಗಾರರು ರೊಬೊಸ್ಟಾ ಕಾಫಿ ಪಸಲು ಪಡೆದ ಕೆಲವೇ ದಿನಗಳ ಬಿಡುವಿನ ನಂತರ ತಮ್ಮ ತೋಟಗಳಿಗೆ ತುಂತುರು ನೀರಾವರಿಯ ಮೂಲಕ ನೀರು ಸಂಪಡಿಸಿ ಕಾಫಿ ಹೂ ಅರಳಿಸಲು ಮುಂದಾಗುತ್ತಿದ್ದರು. ಅರೇಬಿಕ ಕಾಫಿಗಿಡಕ್ಕೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಮಳೆಯ ಆಶ್ರಯದಿಂದಲೇ ಕಾಫಿ ಹೂ ಮಾಡಲು ಬಯಸುತ್ತಿದ್ದರು. ಆದರೆ ಈ ವರ್ಷದ ಜನವರಿ ಮೊದಲನೇ ವಾರದಲ್ಲೇ ಬಂದಿರುವ ಅಕಾಲಿಕ ಮಳೆಯಿಂದ ಬೆಳೆಗಾರರ ಗೊಂದಲಕ್ಕೆ ಒಳಗಾಗಿದ್ದಾರೆ. ಈಗ ಬಂದಿರುವ ಹೂವಿನಿಂದ ಈ ವರ್ಷದ ಮುಂಗಾರು ಮಳೆಯ ಅವಧಿಯಲ್ಲೇ ಕಾಫಿ ಹಣ್ಣು ಬರುವ ಸಾಧ್ಯತೆ ಇದೆ ಎಂಬ ಭೀತಿಯೂ ಬೆಳೆಗಾರರನ್ನೂ ಕಾಡುತ್ತಿದೆ. ಈ ಗೊಂದಲದ ಪರಿಹಾರಕ್ಕಾಗಿ ಪರಿಣಿತ ಅಧಿಕಾರಿಗಳು ವೈಜ್ಞಾನಿಕವಾಗಿ ಕಾಫಿ ಬೆಳಗಾರರಿಗೆ ಸೂಕ್ತವಾದ ಮಾಹಿತಿ ನೀಡುವ ಅಗತ್ಯತೆ ಇದೆ. ಮತ್ತೊಂದೆಡೆ ಕೆಲವು ಬೆಳೆಗಾರರು ಕಾಫಿ ಕೊಯ್ಲು ಮಾಡಲು ವ್ಯಾಪಾರಿಗಳಿಂದ ಮುಂಗಡ ಹಣ ಪಡೆದಿದ್ದಾರೆ. ಹಣ ನೀಡಿದವರು ಒಣಗಿದ ಕಾಫಿ ಬೀಜಗಳನ್ನು ಮಾರಾಟ ಕೇಂದ್ರಕ್ಕೆ ತರುವಂತೆ ಒತ್ತಡವನ್ನೂ ಹಾಕುತ್ತಿದ್ದಾರೆ. ಹೂ ಅರಳಿರುವುದರಿಂದ ಕೊಯ್ಲು ಮಾಡಲಾಗದೇ ಬೆಳೆಗಾರರು ಪರಿತಪಿಸುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT