ಗೋಣಿಕೊಪ್ಪಲು: ಶಿಸ್ತು, ಕಾನೂನು ಪಾಲನೆಗಾಗಿ ಸದಾ ಸಮವಸ್ತ್ರ ಧರಿಸಿ, ಕೈಯಲ್ಲಿ ಬೆತ್ತ ಹಿಡಿದು ಗಂಭೀರ ವದನದಲ್ಲಿ ತಿರುಗುತ್ತಿದ್ದ ಪೊಲೀಸರು ಭಾನುವಾರ ನವಿಲಿನಂತೆ ನರ್ತಿಸಿದರು.

ಬಣ್ಣ ಬಣ್ಣದ ವೇಷಧರಿಸಿ ನಟಿಸಿದರು, ‘ಏಯ್’ ಎಂದು ಗದರಿಸುತ್ತಿದ್ದ ಒರಟು ಧ್ವನಿಯ ಬದಲು ನವಿರಾದ ಧ್ವನಿಯಲ್ಲಿ ತಿಳಿಹಾಸ್ಯಮಾಡಿ ಸಭಿಕರನ್ನು ರಂಜಿಸಿದರು. ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷರಿಗೆ ಮುದ ನೀಡಿದರು. ಇದು ನಡೆದದ್ದು ಗೋಣಿಕೊಪ್ಪಲಿನ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ.

ಮೊದಲ ಬಾರಿಗೆ ಎನ್ನುವಂತೆ ಪೋಲಿಸರಿಗಾಗಿಯೇ ಮೀಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ ವತಿಯಿಂದ ಎರಡುವರೆ ಗಂಟೆಗೂ ಹೆಚ್ಚು ಸಮಯ ಹಾಡು, ನೃತ್ಯ, ನಾಟಕ, ಹಾಸ್ಯದ ಮೂಲಕ ಕರ್ತವ್ಯದ ಜಂಜಾಟ ಮರೆತು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ‘ಎಲೆಗಳು ನೂರಾರು’ ಎಂಬ ಭಾವೈಕ್ಯತೆ ಮೂಡಿಸುವ ಭಾವಗೀತೆಯನ್ನು ಪುರುಷ ಮತ್ತು ಮಹಿಳಾ ಪೊಲೀಸ್ ತಂಡ ಸುಶ್ರಾವ್ಯವಾಗಿ ಹಾಡಿದರೆ, ಡಿಆರ್ ಪವರ್ ಸ್ಕ್ವಾಡ್ ತಂಡದ ಸಿಬ್ಬಂದಿ ಹಾಸ್ಯ ಮತ್ತು ನೃತ್ಯದ ಮೂಲಕ ರಂಜಿಸಿದರು.

ಮಡಿಕೇರಿ ಉಪ ವಿಭಾಗ ಪೊಲೀಸರಿಂದ 112 ನಂಬರಿನ ವಾಹನದ ಸೌಲಭ್ಯ, ಕರೆಮಾಡುವ ವಿಧಾನ ಹಾಗೂ ಅದರಿಂದ ಅಪರಾಧ ಪ್ರಕರಣವನ್ನು ಭೇದಿಸುವ ಕ್ರಮ ಮೊದಲಾದವುಗಳನ್ನು ನಟನೆ, ಅಭಿನಯ, ಸಂಭಾಷಣೆ ಮತ್ತು ಹಾಡಿನ ಮೂಲಕ ಮನ ಮುಟ್ಟುವಂತೆ ಸಾರ್ವಜನಿಕರಿಗೆ ತಿಳಿಯಪಡಿಸಿದರು.

ಪೊಲೀಸ್ ಇಲಾಖೆಯ ಕೆಲವು ಕಾನೂನು ಮತ್ತು ನಿಯಮಗಳನ್ನು ತಿಳಿಯಪಡಿಸಲು ಸಾವಿರಾರು ಜನರು ಸೇರುವ ದಸರಾ ಸಾಂಸ್ಕೃತಿಕ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡ ರೀತಿ ಮೆಚ್ಚುಗೆ ಪಡೆಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಸಿಬ್ಬಂದಿಗಳಲ್ಲಿರುವ ಪ್ರತಿಭೆ ಮತ್ತು ಇಲಾಖೆಯ ಕಾನೂನು ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸುವಲ್ಲಿ ಸಫಲರಾದರು.

ವಿರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಆಪರೇಷನ್ ಸಿಂಧೂರ ನೃತ್ಯ ಮತ್ತು ನಟನೆ ದೇಶಪ್ರೇಮಕ್ಕೆ ಸಾಕ್ಷಿಯಾಗಿತ್ತು. ಸ್ವತಃ ಮಹೇಶ್ಕುಮಾರ್ ಅವರೇ ಸೈನ್ಯದ ಕಮಾಂಡರ್ ಪಾತ್ರ ವಹಿಸಿದ್ದರು.

ಮಡಿಕೇರಿ ಸಿಪಿಐ ಪಿ.ಕೆ.ರಾಜು ನಿರೂಪಣೆ ಮೂಲಕ ಇಡೀ ಕಾರ್ಯಕ್ರಮವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರು.

ನಾಟಕ ನೃತ್ಯ: ಸಾರ್ವಜನಿಕರ ಸಂಭ್ರಮ

ಸದಾ ಗತ್ತು ಗಮ್ಮತ್ತಿನಲ್ಲಿರುತ್ತಿದ್ದ ಪೊಲೀಸರು ವೇದಿಕೆಯಲ್ಲಿ ಮುಕ್ತವಾಗಿ ಬೆರೆತು ಸಾಂಸ್ಕೃತಿಕ ವೇದಿಕೆಯಲ್ಲಿ ತೊಡಗಿಸಿಕೊಂಡದ್ದನ್ನು ಕಂಡ ಸಾರ್ವಜನಿಕರು ಸಿಳ್ಳು ಚಪ್ಪಾಳೆ ತಟ್ಟಿ ಸಂಭ್ರಮಿಸುವ ಮೂಲಕ ಪೊಲೀಸರನ್ನು ಪ್ರೋತ್ಸಾಹಿಸಿದರು. ಮಹಿಳಾ ಪೊಲೀಸರು ಕೂಡ ನಾಟಕ ನೃತ್ಯ ಹಾಡುಗಳ ಮೂಲಕ ಸಭಿಕರ ಮನ ಸೆಳೆದರು. ಭಕ್ತಿಗೀತೆ ದೇವರನಾಮ ಹಾಗೂ ಕೆಲವು ಕನ್ನಡ ಗೀತೆಗಳಿಗೆ ಸಾಮೂಹಿಕ ನೃತ್ಯ ಮಾಡಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಬಾಲ್ಯವಿವಾಹ ಪೋಕ್ಸೊ ಪ್ರಕರಣ ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ಕುರಿತು ಅರಿವು ಮತ್ತು ಜಾಗೃತಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗಳು 1098 ನಂಬರ್ನ ಮಕ್ಕಳ ಸಹಾಯವಾಣಿ ಮೊದಲಾವುಗಳ ಬಗ್ಗೆ ನಾಟಕ ಮತ್ತು ಸಂಭಾಷಣೆಗಳ ಮೂಲಕ ಪರಿಣಾಮಕಾರಿಯಾಗಿ ತಿಳಿಯಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.