ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಡ ಸಮಾಜದಿಂದ ವಿಜೃಂಭಣೆಯ ಹುತ್ತರಿ

Last Updated 8 ಡಿಸೆಂಬರ್ 2022, 8:37 IST
ಅಕ್ಷರ ಗಾತ್ರ

ಕುಶಾಲನಗರ: ಪಟ್ಟಣದ ಗೌಡ ಸಮಾಜ ಹಾಗೂ ಸಮಾಜದ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ರಾತ್ರಿ ವಿಜೃಂಭಣೆಯಿಂದ ಹುತ್ತರಿ ಹಬ್ಬ ಆಚರಿಸಲಾಯಿತು.

ಸಮಾಜದ ಅಂಗಸಂಸ್ಥೆಗಳಾದ ಪದ್ಮಾವತಿ ಮಹಿಳಾ ಒಕ್ಕೂಟ, ಯುವಕ ಸಂಘ,ಸ್ವಸಹಾಯ ಸಂಘ,ಸಾಂಸ್ಕೃತಿಕ ವೇದಿಕೆ ಹಾಗೂ ಯುವ ಅರೆಭಾಷೆ ಯೂತ್ಸ್ ಹಾಗೂ ಸಮಾಜದ ಎಲ್ಲಾ ಗೌಡ ಸಮಾಜದ ಬಾಂಧವ್ಯರು ಸಂಜೆ 7.30 ಗಂಟೆಗೆ ಗೌಡ ಸಮಾಜ ಸಭಾಂಗಣದಲ್ಲಿ ಒಟ್ಟಿಗೆ ಸೇರಿದರು.

ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ನೇತೃತ್ವದಲ್ಲಿ ರಾತ್ರಿ 7.50ಕ್ಕೆ ನೆರೆಕಟ್ಟಿ, ಇಗ್ಗುತ್ತಪ್ಪ, ಕಾವೇರಮ್ಮ ಹಾಗೂ ಗುರು ಹಿರಿಯರಿಗೆ ಪೂಜೆ ಸಲ್ಲಿಸಿದರು. ಸಮಾಜದ ಮುಖಂಡ ಪಟ್ಟೆದಾರ ಕುಲ್ಲಚೆಟ್ಟಿ ಕಾಶಿ ಪೂವಯ್ಯ ಅವರು ಕದಿರುಗುತ್ತಿಯನ್ನು ಹೊತ್ತು ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ಮೂಲಕ ಕಾರ್ಯಪ್ಪ ವೃತ್ತದಲ್ಲಿರುವ ಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಗೌಡ ಯುವಕ ಸಂಘದ ಆವರಣದ ಭತ್ತದ ಗದ್ದೆಗೆ ತೆರಳಿ ಧಾನ್ಯಲಕ್ಷ್ಮಿಗೆ ಕಾಶಿಪೂವಯ್ಯ ಪೂಜೆ ಸಲ್ಲಿಸಿದರು. ಸರಿಯಾಗಿ 8.50ಕ್ಕೆ ಕದಿರು ತೆಗೆಯಲು ಚಾಲನೆ ನೀಡಿದರು. ಇದೇ ಸಂದರ್ಭ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಕುಶಲತೋಪು ಸಿಡಿಸಿ ಶುಭ ಹಾರೈಸಿದರು.

ಈ ಸಂದರ್ಭ ಗೌಡ ಸಮಾಜದ ಉಪಾಧ್ಯಕ್ಷರಾದ ಸೆಟ್ಟೆಜನ ದೊರೆ ಗಣಪತಿ, ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಬಲ್ಲಾಡ್ಕ ವಿಜಯಕುಮಾರ್, ನಿಕಟಪೂರ್ವ ಅಧ್ಯಕ್ಷ ಕೂರನ ಪ್ರಕಾಶ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ,ಕಾರ್ಯದರ್ಶಿ ಹೇಮಂತ್,ಖಜಾಂಚಿ ವಿವೇಕ್,
ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಕುಲ್ಲಚನ ಭಾಗೀರಥಿ, ಪದ್ಮವತಿ ಮಹಿಳಾ ಸಂಘದ ಅಧ್ಯಕ್ಷೆ ಲತಾ ಧರ್ಮಕುಮಾರ್,
ಮುಖಂಡರಾದ ಮೊನ್ನಚ್ಚನ ಮೋಹನ್, ಕರಂದ್ಲಾಜೆ ಆನಂದ್, ಸೂಳ್ಯಕೊಡಿ ಮಾದಪ್ಪ, ಕುಶಾಲಪ್ಪ, ಪಟ್ಟಂದಿ ಬೀನಾ ಸೀತಾರಾಮ್, ಎಂ.ಕೆ. ಗಣೇಶ್, ಸೆಟ್ನೇಜನ ಗಣಪತಿ, ಕಡ್ಯದ ಅಶೋಕ್, ಎಸ್.ಎಸ್. ಗೋಪಾಲ್, ಯುವಕ ಸಂಘದ ತುಂತಜೆ ದಯಾನ್ ಹಾಗೂ ಅಚ್ಚಂಡಿರ ಲತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT