ಮಡಿಕೇರಿ: ಮಾಣಿ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಜೋಡುಪಾಲ ಬಳಿ ರಸ್ತೆ ಬದಿ ಗುರುವಾರ ಕುಸಿದ ಮಣ್ಣನ್ನು ಸಿಬ್ಬಂದಿ ತೆರವುಗೊಳಿಸಲಾಯಿತು.

ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿಗಳಾದ ಎಂ.ಎಸ್.ರಾಹುಲ್, ರೋಜಾ, ಲಾಯಲ್ ಮೀರಾಂಡ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತರಾದ ಅನನ್ಯ ವಾಸುದೇವ್, ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಿರೀಶ್, ‘ಸ್ವಲ್ಪ ಪ್ರಮಾಣದ ಮಣ್ಣು ಕುಸಿದಿತ್ತು. ತೆರವುಗೊಳಿಸಲಾಗಿದ್ದು, ಆತಂಕವಿಲ್ಲ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಳೆದ ರಾತ್ರಿ ಇಲ್ಲಿ ಕುಸಿದ ಮಣ್ಣಿನಲ್ಲಿ ಲಾರಿಯ ಚಕ್ರಗಳು ಸಿಲುಕಿಕೊಂಡಿತ್ತು. ಮಣ್ಣು ತೆಗೆದ ನಂತರ ಲಾರಿ ಸಂಚರಿಸಿತ್ತು.

ಮಡಿಕೇರಿ ಸೇರಿ ಕೊಡಗು ಜಿಲ್ಲೆಯ ಹಲವೆಡೆ ಕಳೆದೆರಡು ದಿನಗಳಿಂದ ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಕೆಲವೆಡೆ ಬಿರುಸಿನ ಮಳೆಯಾಗುತ್ತಿದೆ.

ಗುಡ್ಡದ ಮಣ್ಣು ಕುಸಿದ ಜೋಡುಪಾಲ ಸಮೀಪದ ಸಂಪಾಜೆಯಲ್ಲಿ 4 ಸೆಂ.ಮೀ.ಗೂ ಅಧಿಕ ಮಳೆ ಸುರಿದಿದೆ. ಭಾಗಮಂಡಲದಲ್ಲಿ 4, ಶಾಂತಳ್ಳಿಯಲ್ಲಿ 3, ಮಡಿಕೇರಿ, ನಾಪೋಕ್ಲು ಹಾಗೂ ಸುಂಟಿಕೊಪ್ಪದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.