ಸೋಮವಾರಪೇಟೆ: ಬೈಂದೂರಿನಿಂದ ಮಾಗಡಿಗೆ ತೆರಳುವ ರಾಜ್ಯ ಹೆದ್ದಾರಿಯ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲಕ ಹಾದು ಹೋಗುವ ಮಾರ್ಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಣ ನೀಡಿದ್ದರೂ, ಗುತ್ತಿಗೆದಾರರು, ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಕಾಮಗಾರಿ ಆರಂಭಿಕ ಹಂತದಲ್ಲೇ ಉಳಿದಿದೆ.

ಆಲೆಕಟ್ಟೆ, ಕಲ್ಕಂದೂರು ಗ್ರಾಮದ ಮೂಲಕ ಕೂತಿ ಗ್ರಾಮದವರೆಗೆ 13 ಕಿ ಮೀ ವರೆಗೆ ರಸ್ತೆ ಅಪಘಾತಕಾರಿ ಆಗಿರುವ ಬಗ್ಗೆ ಗ್ರಾಮಸ್ಥರು ಸಾಕಷ್ಟು ಭಾರಿ ಪ್ರತಿಭಟನೆ ನಡೆಸಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು. ಶಾಸಕರ ಪ್ರಯತ್ನದಿಂದ ₹30 ಕೋಟಿ ಸರ್ಕಾರಿ ಅನುದಾನ ಲಭಿಸಿತ್ತು.

ಲೋಕೋಪಯೋಗಿ ಇಲಾಖೆ ಕಾಮಗಾರಿಯ ಟೆಂಡರ್ ಮೂರು ತಿಂಗಳ ಹಿಂದೆಯೇ ಮುಗಿದಿತ್ತು. ಆದರೆ, ಗುತ್ತಿಗೆದಾರರು ಮಾತ್ರ ಕಾಮಗಾರಿಯನ್ನು ತ್ವರಿತಗೊಳಿಸುತ್ತಿಲ್ಲ. ಇನಕನಳ್ಳಿಯಲ್ಲಿ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಕಿತ್ತಿರುವುದರಿಂದ ವಾಹನಗಳ ಚಾಲಕರು ಪರದಾಡುವಂತಾಗಿದೆ.

ಏರಿಯಲ್ಲಿ ವಾಹನಗಳು ಚಲಿಸುತ್ತಿಲ್ಲ. ಮಳೆಯಿಂದ ಸಮಸ್ಯೆ ಹೆಚ್ಚಾಗಿದ್ದು, ಬಸ್ ಮತ್ತು ವಾಹನಗಳು ಅಪಘಾತಕ್ಕೆ ಈಡಾಗುತ್ತಿವೆ ಎಂದು ಕೂತಿ ಗ್ರಾಮದ ಗಿರೀಶ್, ವಿನಯ್, ಮೋಹನ್ ದೂರಿದರು.
ಕಾಮಗಾರಿಯನ್ನು ಕೆಲವು ಕಾರ್ಮಿಕರಷ್ಟೇ ಮಾಡುತ್ತಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲು ಸಮಸ್ಯೆಯಾಗಲಿದೆ ಎಂದು ಉದಯ್ ಕುಮಾರ್ ತಿಳಿಸಿದರು.

ಕಳಪೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಸೋಮವಾರಪೇಟೆ ಅಭಿವೃದ್ದಿ ಹೋರಾಟ ಸಮಿತಿಯ ಅರುಣ್ ಕೊತ್ನಳ್ಳಿ ಮಾತನಾಡಿ ಕೂತಿ ಮಾರ್ಗದ ಅಲೆಕಟ್ಟೆ - ಹರಪಳ್ಳಿ ವರೆಗೆ 8 ಕಿ.ಮೀ.ಜನವರಿ ತಿಂಗಳಿನಲ್ಲಿ ಮ್ಯಾಪಿಂಗ್ ಮಾಡಲಾಗಿದೆ. 2.3 ಕಿಮೀ ರಸ್ತೆಯಲ್ಲಿ ಮಾತ್ರ ಕೆಲಸ ನಡೆಯುತ್ತಿದೆ. ಗುತ್ತಿಗೆದಾರರಿಂದ ಕಳಪೆ ಕಾಮಗಾರಿ ಮಾಡಲಾಗುತ್ತಿದೆ ತಕ್ಷಣದಿಂದಲೇ ನಿಲ್ಲಿಸಿ ಯೋಜನಾ ವರದಿಯಂತೆ ಕಾಮಗಾರಿ ಮಾಡಬೇಕು ಎಂದು ಅಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್ ಮಾತನಾಡಿ, ರಸ್ತೆಯನ್ನು ಸರಿಯಾಗಿ ವಿಸ್ತರಣೆ ಮಾಡಿಲ್ಲ. ರಸ್ತೆಯನ್ನು ಸಮತಟ್ಟು ಮಾಡದೆ ಕಳಪೆಯ ವೆಟ್ ಮಿಕ್ಸ್ ಹಾಕಿ ಕೆಲಸ ಮಾಡಲಾಗುತ್ತಿದೆ. ಗುಣಮಟ್ಟದ ಕೆಲಸ ಮಾಡಬೇಕು. ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಎಂದಎಚ್ಚರಿಸಿದರು.

ಕಾರ್ಯಪಾಲ ಎಂಜಿನಿಯರ್ ವೆಂಕಟೇಶ್ ನಾಯಕ್ ಮಾತನಾಡಿ, ಕಾಮಗಾರಿಯನ್ನು ಪರಿಶೀಲನೆ ನಡೆಸಿ, ತಕ್ಷಣದಿಂದಲೇ ಸರಿಪಡಿಸಲು ಗುತ್ತಿಗೆದಾರರಿಗೆ ಸೂಚನೆ ನಿಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.