ಮಡಿಕೇರಿ: ‘ಬೆಳಕಿನ ದಸರೆ’ಯಲ್ಲಿ ಹಣತೆಗಳಂತೆ ತೇಲುವ ಮಂಟಪಗಳಲ್ಲಿ ಸೂಜಿಗಲ್ಲಿನಂತೆ ಸೆಳೆಯುವ ಕಲಾಕೃತಿಗಳ ಹಿಂದೆ ಅನೇಕ ಕಲಾವಿದರ ಬೆವರು ಅಡಗಿದೆ. ಮೈಸೂರು ತಾಲ್ಲೂಕಿನ ಉದ್ಬೂರು ಗ್ರಾಮದ ಎಂ.ನಾಗರಾಜ್ ಅವರ ಪರಿಶ್ರಮ ಇದರ ಹಿಂದಿದೆ.

ಇಲ್ಲಿ ನಡೆಯುವ 10 ಮಂಟಪಗಳಲ್ಲಿ ಪ್ರದರ್ಶನಗೊಳ್ಳುವ ಕಲಾಕೃತಿಗಳನ್ನು ನಾಗರಾಜ್ ರೂಪಿಸುತ್ತಾರೆ. ದಸರೆ ಇನ್ನೂ 3ರಿಂದ 4 ತಿಂಗಳು ಇರುವಂತೆಯೇ ಇವರ ಕಲಾಕೃತಿಗಳ ತಯಾರಿ ಆರಂಭವಾಗುತ್ತದೆ. ಸುಮಾರು 8 ಮಂದಿ ಕಾರ್ಮಿಕರು ನಿತ್ಯವೂ ಕೆಲಸ ಮಾಡಿ ಕಲಾಕೃತಿಗಳನ್ನು ತಯಾರಿಸಿ ಮಡಿಕೇರಿಗೆ ರವಾನಿಸುತ್ತಾರೆ.

ಪ್ರತಿ ವರ್ಷವೂ ಇವರು ಹೊಸ ಹೊಸ ಕಲಾಕೃತಿಗಳನ್ನೇ ತಯಾರಿಸುತ್ತಾರೆ. ಯಾವುದೇ ಕಾರಣಕ್ಕೂ ಒಮ್ಮೆ ಮಾಡಿಕೊಟ್ಟ ಕಲಾಕೃತಿಗಳನ್ನು ವಾಪಸ್ ಪಡೆಯುವುದಿಲ್ಲ. ಪ್ರತಿ ವರ್ಷ ಹೊಸ ಹೊಸ ಗೊಂಬೆಗಳು ಇವರ ಕೈಯಿಂದ ಒಡಮೂಡುತ್ತವೆ.

ಯಾವುದೇ ಕಲಾಕೃತಿ ಅಥವಾ ಬೊಂಬೆಗಳನ್ನೇ ಆಗಲಿ ಇವರು ಮೊದಲು ಮಣ್ಣಿನಿಂದ ಮಾಡಿ ನಂತರ ಅದಕ್ಕೆ ಫೈಬರ್ ಹಾಗೂ ಇತರೆ ವಸ್ತುಗಳನ್ನು ಹಾಕಿ, ಸುಂದರಗೊಳಿಸುತ್ತಾರೆ. ಇವರು ಮಾಡಿಕೊಟ್ಟ ಬೊಂಬೆಗಳು ತೀರಾ ಹಗುರವಾಗಿರುತ್ತವೆ. ನಂತರ, ಚಲನೆಗಾಗಿ ಇಲ್ಲಿ ಅವುಗಳ ಭಾರ ಹೆಚ್ಚಿಸಲಾಗುತ್ತದೆ.

ಈ ಕುರಿತು ‘ಪ್ರಜಾವಾಣಿ’ ಎಂ.ನಾಗರಾಜ್ ಅವರನ್ನು ಸಂಪರ್ಕಿಸಿದಾಗ ಅವರು, ‘ಕಳೆದ 25 ವರ್ಷಗಳಿಂದಲೂ ಕಲಾಕೃತಿಗಳನ್ನು ರೂಪಿಸುತ್ತಿದ್ದೇನೆ. ಇದುವರೆಗೂ ಸಾವಿರಕ್ಕೂ ಅಧಿಕ ಕಲಾಕೃತಿಗಳನ್ನು ಬೇರೆ ಬೇರೆ ಊರುಗಳಿಗೆ ಮಾಡಿಕೊಟ್ಟಿರುವೆ. ಕನಿಷ್ಠ ಎಂದರೂ ಒಂದು ವರ್ಷಕ್ಕೆ 100 ಬೊಂಬೆಗಳನ್ನು ತಯಾರಿಸುವೆ’ ಎಂದು ಹೇಳಿದರು.

‘ತಂದೆ ಮಹದೇವಶೆಟ್ಟಿ ಅವರೇ ನನಗೆ ಸ್ಪೂರ್ತಿ. ಮೈಸೂರಿನ ಚಾಮರಾಜ ದೃಶ್ಯಕಲಾ ಅಕಾಡೆಮಿಯಲ್ಲಿ 3 ವರ್ಷ ಕ್ಲೇ ವರ್ಕ್ ಕಲಿತೆ. ಈಗ ಕೇವಲ ಬೊಂಬೆಗಳನ್ನು ತಯಾರಿಸಿ ಕೊಡುವುದಲ್ಲದೇ ವಿವಿಧ ದೃಶ್ಯಕಲಾ ಕಾಲೇಜುಗಳಿಗೆ ಹಾಗೂ ಶಾಲೆಗಳಿಗೆ ತೆರಳಿ ಕ್ಲೇ ವರ್ಕ್ ಕುರಿತು ಹೇಳಿಕೊಡುತ್ತಿರುವೆ’ ಎಂದು ಹೇಳಿದರು.

ಮೊದಲು ತಯಾರಿಸಿದ ಕಾಳಿ ಕಲಾಕೃತಿಯನ್ನು ಈಗಲೂ ನೆನೆಯುವ ಅವರು ₹ 10 ಸಾವಿರದಿಂದ ₹ 1 ಲಕ್ಷದವರೆಗೂ ಕಲಾಕೃತಿ ಗಾತ್ರ, ಎತ್ತರಕ್ಕೆ ಅನುಗುಣವಾಗಿ ದರ ನಿಗದಿಯಾಗುತ್ತದೆ ಎಂದು ಹೇಳುತ್ತಾರೆ.

ಇವರು ಮಾತ್ರವಲ್ಲ, ಈಚೆಗೆ ಇನ್ನೂ ಕೆಲವೆಡೆ ಇಂತಹ ಕಲಾಕೃತಿಗಳನ್ನು ತಯಾರಿಸಲಾಗುತ್ತಿದ್ದು, ಅಲ್ಲಿಂದಲೂ ಕೆಲವು ಮಂಟಪ ಸಮಿತಿಯವರು ಖರೀದಿಸುತ್ತಾರೆ.

ಕೇವಲ ಇವರಷ್ಟೇ ಅಲ್ಲ, ಕಲಾಕೃತಿಗಳಿಗೆ ಚಲನವಲನ ನೀಡುವವರ ಶ್ರಮವೂ ಅಗಾಧ. ಒಂದಿಷ್ಟು ಲೋಪವಾಗದ ಹಾಗೇ ಕಲಾಕೃತಿಗಳನ್ನು ಮೇಲಕೆತ್ತಿ, ಕಥೆಗೆ ಅನುಗುಣವಾಗಿ ಅವುಗಳನ್ನು ತಿರುಗಿಸುವ ಮೂಲಕ ನೋಡುಗರನ್ನು ಹೊಸದೊಂದು ಲೋಕಕ್ಕೆ ಇವರು ಕರೆದೊಯ್ಯುತ್ತಾರೆ. ಇವರೊಂದಿಗೆ ಮಂಟಪ ಹೊತ್ತು ತರುವ ವಾಹನದ ಚಾಲಕರು, ಮಂಟಪ ರೂಪಿಸುವವರು, ದೀಪಾಲಂಕಾರ ಮಾಡುವವರ ಶ್ರಮ ಹೀಗೆ ಹೇಳುತ್ತಾ ಹೋದರೆ ಮಡಿಕೇರಿ ದಸರೆಯ ಹಿಂದೆ ಕಾಣದ ಸಾವಿರಾರು ಮಂದಿಯ ಶ್ರಮ ಅಡಗಿದೆ. ಇವರು ಯಾರೂ ಸಹ ಯಾವ ವೇದಿಕೆಯಲ್ಲೂ ಕಾಣಿಸಿಕೊಳ್ಳದೇ ಮುಗುಮ್ಮಾಗಿ ತಮ್ಮ ಕೆಲಸ ಮಾಡಿ, ದಸರೆಯ ಯಶಸ್ಸಿಗೆ ಕಾರಣರಾಗಿ, ತಮ್ಮ ಕೆಲಸದಲ್ಲಿ ತಾವು ತೊಡಗಿಕೊಳ್ಳುತ್ತಾರೆ.

ಸ್ತಬ್ದಚಿತ್ರ, ದಶಮಂಟಪ ತಯಾರಕರ ಶ್ರಮ

ಜೆ.ಸೋಮಣ್ಣ

ಗೋಣಿಕೊಪ್ಪಲು: ಇಲ್ಲಿನ ದಸರಾ ಯಶಸ್ಸಿನ ಹಿಂದೆ ಸ್ತಬ್ಧ ಚಿತ್ರಕ್ಕಾಗಿ ದುಡಿದ ಯುವಪಡೆಯ ಶ್ರಮ ಬಹಳಷ್ಟಿದೆ. ವಿವಿಧ ವರ್ಕ್ ಶಾಪ್ಗಳಲ್ಲಿ ದುಡಿಯುವ ಇವರು ಸ್ತಬ್ಧಚಿತ್ರ ತಯಾರಿಸುವುದನ್ನು ಹವ್ಯಾಸವಾಗಿಸಿದ್ದಾರೆ. ಎಷ್ಟೇ ಖರ್ಚಾದರೂ ಕಾಡಿಬೇಡಿ ಹಣ ಸಂಗ್ರಹಿಸಿ, ಸ್ತಬ್ಧ ಚಿತ್ರ ತಯಾರು ಮಾಡಲು ಅವರಿಗೆ ಕನಿಷ್ಠ 3 ತಿಂಗಳಾದರೂ ಬೇಕಾಗುತ್ತದೆ.

ತಮ್ಮ ದೈನಂದಿನ ಕೆಲಸಗಳ ಜೊತೆಗೆ ರಾತ್ರಿ 12 ಗಂಟೆಯವರೆಗೆ ಶ್ರಮಿಸಿ ಸ್ತಬ್ಧಚಿತ್ರ ತಯಾರಿಸುತ್ತಾರೆ. ಇವುಗಳನ್ನು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಲ್ಲಿ ಅಥವಾ ತಮಗೆ ಬೇಕಾದ ಆಕೃತಿಯ ಕಬ್ಬಿಣ, ಮರದ ಸಲಕರಣೆಗಳ ಮೂಲಕ ಸ್ಥಳೀಯ ಯುವಕರೇ ನೈಪುಣ್ಯದಿಂದ ತಯಾರಿಸುತ್ತಾರೆ. ಈ ಬಾರಿಯ 10 ಸ್ತಬ್ಧ ಚಿತ್ರಗಳೂ ಹೀಗೆ ತಯಾರಾಗಿವೆ.

ರಾತ್ರಿ ಆನಡೆಯುವ ದಶಮಂಟಪ ಶೋಭಾಯಾತ್ರೆಯ ಮಂಟಪಗಳನ್ನೂ ವಿಶಿಷ್ಟ ಬೊಂಬೆಗಳ ಮೂಲಕ ತಯಾರು ಮಾಡಿದ್ದರು. ಕೇರಳದ ವಯನಾಡು, ಮಾನಂದವಾಡಿಯ ಕಲಾವಿದರು ಕೆಲವು ಮಂಟಪಗಳ ಚಲನಶೀಲ ಆಕೃತಿಗಳನ್ನು ತಯಾರಿಸಿದ್ದರು. ವಿದ್ಯುತ್ ದೀಪಗಳ ಅಲಂಕಾರವನ್ನು ಕೂಡ ಸ್ಥಳೀಯರೊಂದಿಗೆ ಕೇರಳದ ಬಹುಪಾಲು ಎಲೆಕ್ಟ್ರಿಷಿಯನ್ಗಳು ಮಾಡಿದ್ದುದು ವಿಶೇಷವಾಗಿತ್ತು. ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನ ಶಿಲ್ಪಿಗಳನ್ನು ಕೂಡ ಕರೆಯಿಸಿಕೊಂಡು ಸ್ಥಳೀಯ ಕಲಾವಿದರೊಂದಿಗೆ ಬೊಂಬೆಗಳನ್ನು ತಯಾರಿಸಲಾಗಿತ್ತು. ಒಂದು ತಿಂಗಳು ಮೊದಲೇ ಗೋಣಿಕೊಪ್ಪಲಿನಲ್ಲಿ ಉಳಿದು ಈ ಆಕೃತಿಗಳನ್ನು ನೈಜ ಎಂಬಂತೆ ಈ ಸೃಷ್ಟಿಸಿದ್ದರು. ದಸರಾ, ಸ್ತಬ್ದಚಿತ್ರ ಮತ್ತು ದಶಮಂಟಪಗಳ ಶೋಭಾಯಾತ್ರೆಗಳೊಂದಿಗೆ ಉತ್ಸವದ ಯಶಸ್ಸಿಗೆ ಯುವಕರು ಹಗಲು ರಾತ್ರಿ ಶ್ರಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.