ನಿರಂತರವಾಗಿ 30 ಗಂಟೆಗಳ ಕೆಲಸ ದಸರೆಯ ಕೊನೆ ಕೊನೆಯ ದಿನಗಳಲ್ಲಿ ಹಿರಿಯ ಅಧಿಕಾರಿಗಳೂ ಸೇರಿದಂತೆ ಬಹಳಷ್ಟು ಪೊಲೀಸರು ನಿರಂತರವಾಗಿ 30 ಗಂಟೆಗಳ ಕಾಲ ದಸರೆಗಾಗಿ ಕಾರ್ಯನಿರ್ವಹಿಸಿದ್ದೇವೆ. ಕೊನೆಯ ಕ್ಷಣದಲ್ಲಿ ಇಬ್ಬರು ಪೊಲೀಸರು ಆಸ್ಪತ್ರೆ ಸೇರುವಂತಾಯಿತು. ಆದರೆ ಮಹಿಳೆಯರೂ ಸೇರಿದಂತೆ ಎಲ್ಲ ಸಾರ್ವಜನಿಕರೂ ಸುರಕ್ಷಿತವಾಗಿ ದಸರೆಯಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಪೊಲೀಸರು ಸಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದು ವಿಶೇಷ.
ಕೆ.ರಾಮರಾಜನ್ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
‘ಡಿಜೆ ಬೇಡಿಕೆ ಬಿಟ್ಟರೆ ಉಳಿದಂತೆ ಶಾಂತಿಯುತವಾಗಿ ಜರುಗಿತು’ ದಶಮಂಟಪ ಶೋಭಾಯಾತ್ರೆಯಂದು ಕೆಲವು ಯುವಕರು ಡಿಜೆ ಬೇಕು ಎಂದು ಹಠ ಹಿಡಿದು ಕುಳಿತಿದ್ದರಿಂದ ಮೆರವಣಿಗೆ ಸಾಗುವುದು ಒಂದು ಗಂಟೆ ತಡವಾಯಿತು. ಉಳಿದಂತೆ ಎಲ್ಲ ಮಂಟಪಗಳ ಅಧ್ಯಕ್ಷರು ವಾದ್ಯ ಬಳಸಿ ಉತ್ತಮ ಸಹಕಾರ ನೀಡಿದರು. ಹೀಗಾಗಿ ಎಲ್ಲವೂ ಶಾಂತಿಯುತವಾಗಿ ನಡೆಯಿತು.