7 ವರ್ಷದಿಂದ ದೈಹಿಕ ಶಿಕ್ಷಕ ಎಂ.ಟಿ.ಸತ್ಯ ಅವರು ವಾಹನದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆ ತಂದು ವಾಪಸ್ ಬಿಡುತ್ತಿದ್ದಾರೆ
ರಾಗಿಣಿ ಸಹ ಶಿಕ್ಷಕಿ.
ದೈಹಿಕ ಶಿಕ್ಷಕ ಎಂ.ಟಿ.ಸತ್ಯ ಅವರೇ ಮಕ್ಕಳನ್ನು ವಾಹನದಲ್ಲಿ ಕರೆತರಲಿಲ್ಲ ಎಂದರೆ ಮಕ್ಕಳು ಶಾಲೆಗೆ ಬರುವುದಿಲ್ಲ.
ಜಯಮ್ಮ ಮುಖ್ಯ ಶಿಕ್ಷಕಿ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ವಾಹನದ ಇಂಧನ ವೆಚ್ಚಕ್ಕೆ ಪರದಾಟ
‘ಶಾಲಾ ವಾಹನದ ಇಂಧನಕ್ಕಾಗಿ ಪ‍್ರತಿ ತಿಂಗಳು ₹ 20ರಿಂದ 22 ಸಾವಿರ ವೆಚ್ಚವಾಗುತ್ತದೆ. ಕೆಲವು ಮಕ್ಕಳ ಪೋಷಕರು ನೀಡುವ ಹಣದಿಂದ ₹ 5–6 ಸಾವಿರ ಮಾತ್ರವೇ ಆಗುತ್ತದೆ. ಇನ್ನುಳಿದ ಹಣವನ್ನು ನಾನೇ ಭರಿಸುತ್ತಿರುವೆ. ಅರಣ್ಯ ಇಲಾಖೆಯವರು ನೀಡುವ ಹಣ ವಾಹನದ ವಿಮೆಗಷ್ಟೇ ಸಾಕಾಗುತ್ತದೆ. ಇನ್ನು ವಾಹನ ನಿರ್ವಹಣಾ ವೆಚ್ಚವೂ ನಾನೇ ಭರಿಸುತ್ತಿರುವೆ’ ಎಂದು ದೈಹಿಕ ಶಿಕ್ಷಕ ಎಂ.ಟಿ.ಸತ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ಈಗ ಇವರು ಇಂಧನ ವೆಚ್ಚಕ್ಕಾಗಿ ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ಜನಪ್ರತಿನಿಧಿಗಳು ಇದರತ್ತ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.