ಮಡಿಕೇರಿ: ‘ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಂಗಾಲ ಸಮೀಪದ ದಟ್ಟ ಅರಣ್ಯದೊಳಗೆ ಭೂಕುಸಿತ ಸಂಭವಿಸಿದೆ’ ಎಂಬ ವಿಡಿಯೊಗಳು ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಆತಂಕ ಸೃಷ್ಟಿಸಿತ್ತು. ಆದರೆ, ‘ಇದು ದೊಡ್ಡ ಪ್ರಮಾಣದ ಭೂಕುಸಿತ ಅಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಈ ಪ್ರದೇಶ ಅರಣ್ಯ ವ್ಯಾಪ್ತಿಯ ಹೊರಗಿದ್ದು, ಅಲ್ಲಿ ಗುಡ್ಡದ ಮೇಲಿಂದ ರಭಸವಾಗಿ ನೀರು ಹರಿದು ಕೆಲವೊಂದು ಮರಗಳನ್ನು ಕೊಚ್ಚಿಕೊಂಡು ಬಂದಿದೆ’ ಎಂದು ವಿರಾಜಪೇಟೆ ವಿಭಾಗದ ಡಿಸಿಎಫ್ ಜಗನ್ನಾಥ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೇಲ್ನೋಟಕ್ಕೆ ಭೂಕುಸಿತದಂತೆ ಕಾಣುತ್ತದೆ. ಸುಮಾರು 1 ಕಿ.ಮೀ ದೂರದ ಸರ್ಕಾರಿ ಭೂಮಿಯಲ್ಲಿ ರಭಸವಾಗಿ ನೀರು ಹರಿದಿದೆ. ನೀರಿನೊಂದಿಗೆ ಮಣ್ಣು, ಕಲ್ಲು, ಮರ, ಗಿಡ ಕೊಚ್ಚಿಕೊಂಡು ಬಂದಿವೆ. ಆತಂಕಪಡುವ ಅಗತ್ಯವಿಲ್ಲ’ ಎಂದು ಸ್ಥಳಕ್ಕೆ ತೆರಳಿದ್ದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮಳೆ ಇಳಿಕೆಯಾಗಿದೆ. ಸಂಪಾಜೆಯಲ್ಲಿ 5 ಸೆಂ.ಮೀ, ಮಡಿಕೇರಿ 2.3, ಭಾಗಮಂಡಲದಲ್ಲಿ 2.2 ಸೆಂ.ಮೀನಷ್ಟು ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.