ನಾಪೋಕ್ಲು: ಕಾಡುಪೀರೆ, ಮಡಹಾಗಲ, ಪಾವಕೆ ಎಂದೆಲ್ಲ ಹೆಸರುಗಳಿಂದ ಮಲೆನಾಡಿನಲ್ಲಿ ಜನಪ್ರಿಯವಾಗಿರುವ ಕಾಡು ತರಕಾರಿ ಸದ್ದಿಲ್ಲದೇ ಮರೆಯಾಗುತ್ತಿದೆ.

ತೋಟ ಮಾಡುವ ನೆಪದಲ್ಲಿ ಬಳ್ಳಿಗಳು ನಾಮವಶೇಷಗೊಳ್ಳುತ್ತಿವೆ. ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಕಾಡುಗುಡ್ಡಗಳನ್ನು ಸುತ್ತಿ ಮಡಹಾಗಲದ ಕಾಯಿಗಳನ್ನು ಕೊಯ್ಲು ಮಾಡಿ ತಂದು ಮಾರಾಟ ಮಾಡುತ್ತಿದ್ದರು. ಈಗ ಹಾಗಿಲ್ಲ. ಹೈಬ್ರಿಡ್ ತಳಿಯ ಮಡಹಾಗಲ ಬಳ್ಳಿಗಳು ಲಭಿಸುತ್ತಿವೆ. ರೈತರು ಅವುಗಳನ್ನು ಮನೆಯಂಗಳದಲ್ಲೇ ಬೆಳೆಸುತ್ತಿದ್ದಾರೆ. ದಪ್ಪ ಗಾತ್ರದ ಮಡಹಾಗಲ ಸಮೃದ್ದವಾಗಿ ಸಿಗುತ್ತಿವೆ. ಆದರೆ, ಕಾಡು ಮಡಹಾಗಲದಷ್ಟು ರುಚಿ, ಪೌಷ್ಟಿಕಾಂಶಗಳು ಹೈಬ್ರಿಡ್ ತಳಿಗಳಲ್ಲಿ ಇಲ್ಲ. ಆದರೂ ಮಡಹಾಗಲ ಮಳೆಗಾಲದ ಜನಪ್ರಿಯ ತರಕಾರಿಯಾಗಿದೆ.

ಮಡಹಾಗಲವನ್ನು ಒಂದು ಲಾಭದಾಯಕ ಕೃಷಿಯಾಗಿ ಮಾಡಿ ಹೆಚ್ಚಿನ ಫಸಲು ಪಡೆಯುವ ಪ್ರಯತ್ನಗಳು ಮಲೆನಾಡಿನ ಪ್ರದೇಶಗಳಲ್ಲಿ ನಡೆದಿದೆ. ಮಡಹಾಗಲ ಬೀಜಗಳಿಂದ ಫಸಲಾಗುವ ಪ್ರಮಾಣ ಕಡಿಮೆ. ಇದರ ಬಳ್ಳಿಯ ಬುಡದಲ್ಲಿ ಡೇರೆ ಹೂವಿನ ಗಡ್ಡೆಯಂತಹ ಗಡ್ಡೆ ಬೆಳೆಯುತ್ತದೆ. ಇದೇ ಗಡ್ಡೆ ನೆಲದೊಳಗಿದ್ದರೆ ಅದೇ ಪ್ರತಿವರ್ಷ ಮೊದಲ ಮಳೆಗೆ ನೆಲ ತಂಪಾದಾಗ ಚಿಗುರಿ ಬಳ್ಳಿಯಾಗಿ ಹಬ್ಬುತ್ತದೆ.

ಈಚೆಗೆ ಜಿಲ್ಲೆಯ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಸಂಶೋಧಿಸಿ ಬೆಳೆಸಲಾಗುತ್ತಿರುವ ಮಡಹಾಗಲಕಾಯಿ ಗಿಡಗಳಿಗೆ ಉತ್ತಮ ಸ್ಪಂದನೆ ಕೃಷಿಕರಿಂದ ದೊರೆತಿದೆ. ಭುವನೇಶ್ವರದ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಿಂದ ಹಲವು ವಿಧದ ಮಡಹಾಗಲ ಕಾಯಿಗಿಡಗಳನ್ನು ತಂದು ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಬೆಳೆಸಲಾಗಿತ್ತು. ಈ ಮಡಹಾಗಲಕಾಯಿಗಿಡ ಬಳ್ಳಿಯಾಗಿ ಬೆಳೆಯತೊಡಗಿ ಪರಾಗಕ್ರಿಯೆಯನ್ನು ನಡೆಸುವ ಮೂಲಕ 2 ತಿಂಗಳಲ್ಲಿ ಪ್ರತಿ ಬಳ್ಳಿಯಲ್ಲಿ 8ರಿಂದ 10 ಕೆ.ಜಿಯ ಕಾಯಿಗಳೊಂದಿಗೆ ಉತ್ತಮ ಫಸಲು ಲಭಿಸಿತ್ತು.

ಹೆಚ್ಚಿನ ಪ್ರೋಟೀನ್ ಹೊಂದಿರುವ ಮಡಹಾಗಲಕಾಯಿಗೆ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇರುವುದನ್ನು ಮನಗಂಡು ಕೃಷಿಕರಿಗೆ ಅಲ್ಪ ಅವಧಿಯಲ್ಲಿ ಹೆಚ್ಚಿನ ಆದಾಯ ನೀಡಬಲ್ಲ ಮಡಹಾಗಲ ಬಳ್ಳಿಗಳನ್ನು ಪ್ರಾಯೋಗಿಕಾ ಕೇಂದ್ರದ ಪಾಲಿಹೌಸ್ನಲ್ಲಿ ನೆಟ್ಟು ಬೆಳೆಸಲಾಗಿದ್ದು, ಬೆಳೆಗಾರರಿಗೆ ನೀಡಲಾಗುತ್ತಿದೆ.

ಇದೀಗ ಜಿಲ್ಲೆಯ ರೈತರು ಮಡಹಾಗಲಕಾಯಿ ಗಿಡಗಳನ್ನು ಕೇಂದ್ರದಿಂದ ಖರೀದಿಸಿ ತಮ್ಮ ಮನೆಯಂಗಳದಲ್ಲಿ ಬೆಳೆಯುತ್ತಿದ್ದಾರೆ. ಇಲ್ಲಿನ ಕೃಷಿಕ ರವೀಂದ್ರ ಅವರ ಮನೆಯಂಗಳದಲ್ಲಿ ಮಡಹಾಗಲ ಫಸಲು ದೊರೆಯುತ್ತಿದೆ.

ಹಿಂದೆ ಕಾಡಿನಲ್ಲಿ ಒಮ್ಮೆ ಸುತ್ತಿ ಬಂದರೆ ಸಾಕಿತ್ತು ಸಾಕಷ್ಟು ಮಡಹಾಗಲ ಕಾಯಿಗಳು ಲಭಿಸುತ್ತಿದ್ದವು. ಕಾಫಿಯ ಗಿಡಗಳಲ್ಲೂ ಬಳ್ಳಿ ಹಬ್ಬಿ ಕಾಯಿಗಳು ಸಿಗುತ್ತಿದ್ದವು. ತೋಟಗಳಲ್ಲೂ ಸಿಗುತ್ತಿದ್ದ ಮಡಹಾಗಲ ಇಂದು ಎಷ್ಟೇ ಕಾಡು ಸುತ್ತಿದರೂ ಒಂದೇ ಒಂದು ಬಳ್ಳಿ ಕಾಣಸಿಗುವುದು ಕಷ್ಟವಾಗಿದೆ.

‘ಮಡಹಾಗಲ ಬಳ್ಳಿಗಳಲ್ಲಿ ದ್ವಿಲಿಂಗಿ ಹೂಗಳು ಇಲ್ಲದಿರುವುದು ತೊಡಕಾಗಿದೆ. ನಿರಂತರವಾಗಿ ಪರಾಗಸ್ಪರ್ಶ ನಡೆಸುವುದರಿಂದ ಹೂಗಳು ಪರಾಗಸ್ಪರ್ಶ ಹೊಂದಿ ಕಾಯಿಗಳು ಹೇರಳ ಪ್ರಮಾಣದಲ್ಲಿ ಲಭಿಸುತ್ತವೆ. ಸಕಾಲದಲ್ಲಿ ಪರಾಗಸ್ಪರ್ಶ ಕ್ರಿಯೆ ನಡೆಸಿ ಕಾಯಿಗಳನ್ನು ಪಡೆಯಲು ಕೃಷಿಕರು ಉತ್ಸುಕರಾಗಿದ್ದರೆ ಮಾತ್ರ ಮಡಹಾಗಲ ಕೃಷಿಯಲ್ಲಿ ಯಶಸ್ಸು ಪಡೆಯಬಹುದು’ ಎನ್ನುತ್ತಾರೆ ರವೀಂದ್ರ.

ಏನಿದು ಮಡಹಾಗಲ?

ಮಡಹಾಗಲದ ವೈಜ್ಞಾನಿಕ ಹೆಸರು ಮೊಮೊರ್ಡಿಕಾ ಡಯೋಕಾ. ಇದು ಕ್ಯುಕುರ್ಬಿಟೇಸಿಯೆ ಕುಟುಂಬಕ್ಕೆ ಸೇರಿದೆ. ಇದು ಭಾರತದ ಅಸ್ಸಾಂ ಮತ್ತು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಈ ತರಕಾರಿ ಮಳೆಗಾಲದಲ್ಲಿ ಮಾತ್ರ ದೊರೆಯುತ್ತದೆ.

‘ಅರ್ಕ ಭರತ್’ ತಳಿಗೆ ಅಧಿಕ ಬೇಡಿಕೆ’

ಕೊಡಗಿನ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಸಂಶೋಧನಾ ಕೇಂದ್ರವೇ ಅಭಿವೃದ್ಧಿಪಡಿಸಿರುವ ಮಡಹಾಗಲದ ತಳಿ ‘ಅರ್ಕ ಭರತ್’ಗೆ ಹೊರರಾಜ್ಯಗಳಿಂದ ಅಧಿಕ ಬೇಡಿಕೆ ಇದೆ. ವರ್ಷದಲ್ಲಿ 25 ಸಾವಿರ ಗಿಡಗಳನ್ನು ಕೇಂದ್ರ ಮಾರಾಟ ಮಾಡಿದೆ. ವಿಶೇಷವಾಗಿ, ರಾಜ್ಯದಲ್ಲಿ ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆ ಭಾಗಗಳಿಂದ, ಹೊರರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಇಲ್ಲಿಗೆ ಬಂದು ಇದನ್ನು ಖರೀದಿಸುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೇಂದ್ರದ ಪ್ರಭಾರ ಮುಖ್ಯಸ್ಥ ಹಾಗೂ ಹಣ್ಣು ವಿಜ್ಞಾನಿ ಡಾ.ಮುರಳೀಧರ್, ‘ಕೇಂದ್ರ ಅಭಿವೃದ್ಧಿಪಡಿಸಿರುವ ಅರ್ಕ ಭರತ್ ತಳಿಯ ಗಿಡದಲ್ಲಿ ಇಳುವರಿ ಅಧಿಕ ಇದೆ. ಒಂದು ಗಿಡಕ್ಕೆ 6ರಿಂದ 10 ಕೆ.ಜಿ ಕಾಯಿ ಸಿಗುತ್ತದೆ. ಇದರ ಬೀಜವೂ ಮೃದುವಾಗಿರುತ್ತದೆ. ಈ ತಳಿಗೆ ಹೆಚ್ಚಿನ ಬೇಡಿಕೆ ಇದೆ’ ಎಂದು ಹೇಳಿದರು.

ಮಡ ಹಾಗಲಕಾಯಿಯ ಉಪಯೋಗಗಳು

ಮಡ ಹಾಗಲಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

ಮಡಹಾಗಲ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಕಣ್ಣನ್ನು ಸೋಂಕಿನಿಂದ ಕಾಪಾಡುತ್ತದೆ

ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.

ಮಡ ಹಾಗಲಕಾಯಿಯನ್ನು ಸಾಂಬಾರ್, ಫ್ರೈ ಮತ್ತು ಇತರ ಅಡುಗೆಗಳಲ್ಲಿ ಬಳಸುತ್ತಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.