ಮಾಲೂರು: ಪಟ್ಟಣದ ಬಹತೇಕ ವಾರ್ಡ್ಗಳಲ್ಲಿ ಒಳಚರಂಡಿ (ಯುಜಿಡಿ) ಹೊಲಸು ನೀರು ಮನೆಯಂಗಳದಲ್ಲಿ ಹರಿದಾಡಿ ಕಳೆದ ಎರಡ್ಮೂರು ವರ್ಷಗಳಿಂದ ಜನರು ಮೂಕ ವೇದನೆ ಅನುಭವಿಸುತ್ತಿದ್ದಾರೆ. ಇಲ್ಲಿನ ವಾಸಿಗಳು ಒಳಚರಂಡಿ ಹೊಲಸು ನೀರಿನಲ್ಲಿ ಕಾಲ ಕಳೆಯುವಂತಾಗಿದೆ.

ಪಟ್ಟಣದಲ್ಲಿ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಿರ್ಮಾಣ ಮಾಡಿರುವ ಯುಜಿಡಿ ಅವೈಜ್ಞಾನಿಕವಾಗಿದೆ. ಕೊಳಚೆ ನೀರು ಸಂಸ್ಕರಣ ಘಟಕ ನಿರ್ವಹಣೆ ಕೊರತೆಯಿಂದ ಸ್ಥಗಿತಗೊಂಡು ವರ್ಷ ಕಳೆದರೂ ಕಾರ್ಯ ನಿರ್ವಹಿಸದೆ ಇರುವುದರಿಂದ ಪಟ್ಟಣದಲ್ಲಿ ಕೊಳಚೆ ನೀರು ಸಮಸ್ಯೆ ನಾಗರಿಕರಿಗೆ ಕಗ್ಗಂಟಾಗಿದೆ.

ಪಟ್ಟಣದ 27 ವಾರ್ಡ್ಗಳಲ್ಲಿ ಅಳವಡಿಸಿರುವ ಒಳಚರಂಡಿ ಪೈಪ್ಗಳಿಂದ ಕೊಳಚೆ ನೀರು ರಸ್ತೆಗಳಲ್ಲಿ ಹರಿಯುವುದು ಸಾಮಾನ್ಯವಾಗಿದೆ. 2009ರಲ್ಲಿ ₹22.05ಕೋಟಿ ವೆಚ್ಚದಲ್ಲಿ ಒಳಚರಂಡಿ ಯೋಜನೆ ಅಳವಡಿಸಲಾಗಿದೆ. ಬ್ಯಾಚ್ ರಿಯಾಕ್ಟರ್ ಎಂಬ ಹೊಸ ತಂತ್ರಜ್ಞಾನ ಬಳಸಿ ಮೊದಲ ನಿರ್ಮಾಣ ಮಾಡಲಾಗಿದೆ.

ಆದರೆ, ನಿರ್ವಹಣೆ ಕೊರತೆಯಿಂದ ಪಟ್ಟಣದ ಪುರಸಭೆ ಆಡಳಿತಕ್ಕೂ ಹಾಗೂ ಪಟ್ಟಣದ ನಾಗರಿಕರಿಗೂ ಕೊಳಚೆ ನೀರು ನಿರ್ವಹಣೆ ಸಮಸ್ಯೆಯಾಗಿ ಕಾಡುತ್ತಿದೆ. ಕೊಳಚೆ ನೀರು ಕೆರೆ ಅಂಗಳಕ್ಕೆ ಸೇರುತ್ತಿರುವುದು ಈ ಭಾಗದ ರೈತರು, ಪರಿಸರವಾದಿಗಳು ಹಾಗೂ ಸಾರ್ವಜನಿಕರು ಆತಂಕಕ್ಕೆ ಕಾರಣವಾಗಿದೆ.

ಪಟ್ಟಣದಲ್ಲಿ ಯು.ಜಿ.ಡಿ ಕಾಮಗಾರಿ ಪೂರ್ಣಗೊಂಡು 12 ವರ್ಷ ಕಳೆದರೂ ಕೊಳಚೆ ನೀರಿನ ಸಮಸ್ಯೆ ನಿವಾರಣೆ ಕಂಡಿಲ್ಲ. ಪಟ್ಟಣದಲ್ಲಿ ಈಗಾಗಲೇ ಬಹತೇಕ ಎಲ್ಲ ವಾರ್ಡ್ಗಳಲ್ಲಿ ಪುರಸಭೆ ವತಿಯಿಂದ ಒಳ ಚರಂಡಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.

ಇನ್ನು ಕೆಲವು ವಾರ್ಡ್ಗಳಲ್ಲಿ ಅಕ್ರಮವಾಗಿ ಸಂಪರ್ಕ ಕಲ್ಪಿಸಿರುವುದು ಬೆಳಕಿಗೆ ಬಂದಿದೆ.

ಇದರಿಂದ ಪಟ್ಟಣದ ಬಹತೇಕ ವಾರ್ಡ್ಗಳಲ್ಲಿ ನಿರ್ಮಾಣ ಮಾಡಿರುವ ಛೇಂಬರ್ಗಳಲ್ಲಿ ಕೊಳಚೆ ನೀರು ತುಂಬಿ ರಸ್ತೆಗಳಲ್ಲಿ ಹರಿಯುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಇದೆ.

ಸ್ಥಗಿತಗೊಂಡಿರುವ ಕೊಳಚೆ ನೀರು ಸಂಸ್ಕರಣ ಘಟಕ: ಪುರಸಭೆ ವತಿಯಿಂದ 2016 ಡಿಸೆಂಬರ್ ತಿಂಗಳಿನಲ್ಲಿ ಪಟ್ಟಣದ ದೊಡ್ಡಕೆರೆ ಸಮೀಪ ಎರಡು ಎಕರೆ ಜಮೀನು ಖಾಸಗಿ ಅವರಿಂದ ಖರೀದಿಸಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀಡಿತು. ಅದರಂತೆ 4 ದಶಲಕ್ಷ ಸಾಮರ್ಥ್ಯ ಇರುವ ಶುದ್ಧೀಕರಣ ಘಟಕದ ಕಾಮಗಾರಿ ಆರಂಭವಾಗಿ ಒಂದು ವರ್ಷ ಕಾಲ ನಡೆಯಿತು.

2017ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿತು. ಆದರೆ, ಶುದ್ಧೀಕರಣ ಘಟಕ ಕಾರ್ಯ ನಿರ್ವಹಿಸಲು ಅಗತ್ಯವಿರುವ ನೀರು ಪೂರೈಕೆ ಆಗದ ಕಾರಣ ಘಟಕ ತನ್ನ ಕಾರ್ಯ ಆರಂಭ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಪಟ್ಟಣದ ಒಳಚರಂಡಿ ಕೊಳಚೆ ನೀರು ಛೇಂಬರ್ಗಳು ತುಂಬಿ ರಸ್ತೆಗಳಲ್ಲಿ ಹರಿಯುತ್ತಿತ್ತು. ನಂತರ ಎರಡ್ಮೂರು ವರ್ಷ ಸಂಸ್ಕರಣ ಘಟಕ ಕಾರ್ಯ ನಿರ್ವಹಿಸಿತು. ನಂತರ ಮತ್ತೆ ಸ್ಥಗಿತಗೊಂಡು ಆರು ತಿಂಗಳಾಗಿದೆ. ಇನ್ನು ದುರಸ್ತಿಯಾಗಿಲ್ಲ ಎಂದು ನಾಗರಿಕರು ಆರೋಪಿಸುತ್ತಾರೆ.

ಅವೈಜ್ಞಾನಿಕವಾಗಿ ಛೇಂಬರ್ ನಿರ್ಮಾಣ: ಪಟ್ಟಣದ ಯುಜಿಡಿ ಕಾಮಗಾರಿಯಲ್ಲಿ ಕೊಳಚೆ ನೀರು ಹರಿಯಲು ನಿರ್ಮಾಣ ಮಾಡಿರುವ ಛೇಂಬರ್ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸುಮಾರು 3299 ಒಳಗುಂಡಿಗಳು (ಛೇಂಬರ್) ನಿರ್ಮಾಣ ಮಾಡಲಾಗಿದೆ.

ಮಾಲೂರು ಬೆಂಗಳೂರಿಗೆ ಕೇವಲ 38 ಕಿ.ಮೀ ದೂರದಲ್ಲಿದೆ. ಬೆಂಗಳೂರಿಗೆ ರೈಲು ಸೌಕರ್ಯ ಹೆಚ್ಚಿದ್ದು ಪಟ್ಟಣ ಶರವೇಗದಲ್ಲಿ ಬೆಳೆಯುತ್ತಿದೆ. ನಾನಾ ಕಡೆಗಳಿಂದ ಜನರು ಇಲ್ಲಿ ಬಂದು ವಾಸಿಸುತ್ತಿದ್ದಾರೆ.

ಇಲ್ಲಿ ಗುಂಟೆ ಭೂಮಿ ಲಕ್ಷಗಟ್ಟಲೇ ಬೆಲೆ ಇದೆ. ನೂತನ ಬಡಾವಣೆಗಳ ನಿರ್ಮಾಣ ಹಾಗೂ ಮಾರಾಟ ಭರದಿಂದ ಸಾಗಿದೆ.

ನೂತನ ಬಡಾವಣೆಗಳಲ್ಲಿ ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಕೊಳಚೆ ನೀರು ಸಮರ್ಪಕವಾಗಿ ಪೈಪ್ಲೈನ್ ಮೂಲಕ ಹರಿಯಲು ಸಂಪರ್ಕ ಕಲ್ಪಿಸದ ಕಾರಣ ಛೇಂಬರ್ಗಳು ತುಂಬಿ ರಸ್ತೆಗಳಲ್ಲಿ ಹರಿಯುತ್ತಿವೆ. ಪಟ್ಟಣದ ದೊಡ್ಡ ಕೆರೆಗೆ ಸಂಪರ್ಕ ಕಲ್ಪಿಸುವ ರಾಜು ಕಾಲುವೆ ಮಧ್ಯ ಭಾಗದಲ್ಲಿ ಒಳಚರಂಡಿ ಛೇಂಬರ್ ನಿರ್ಮಾಣ ಮಾಡಲಾಗಿದೆ. ಇದರಿಂದ ಮಳೆ ನೀರು ಕೆರೆಗೆ ಹರಿಯುತ್ತಿಲ್ಲ.

ಒಳಚರಂಡಿ ಯೋಜನೆ ವಿಫಲ: ಶುದ್ಧೀಕರಣ ಘಟಕಕ್ಕೆ ಕೊಳಚೆ ನೀರು ಹರಿಸಲಾಗುತ್ತಿದೆ. ಪಟ್ಟಣದ ಮೇಲ್ಭಾಗ ಹನುಮಂತನಗರದಿಂದ ಒಂದನೇ ವಾರ್ಡ್, ಕುಂಬಾರಪೇಟೆ ಹಾಗೂ ಆಗ್ರಹಾರ ಬಡಾವಣೆಗಳಲ್ಲಿ ಹಾದು ಕೆರೆ ಮೂಲಕ ಶುದ್ಧೀಕರಣ ಘಟಕಕ್ಕೆ ಪೈಪ್ ಲೈನ್ ಅಳವಡಿಸಲಾಗಿದೆ. ವೈಟ್ ಗಾರ್ಡನ್, ಮಾರುತಿ ಬಡಾವಣೆ, ಆದರ್ಶ ನಗರ ಸೇರಿದಂತೆ 21ನೇ ವಾರ್ಡ್ ಮೂಲಕ ಕೆರೆಗೆ ಸಂಪರ್ಕ ಕಲ್ಪಿಸುವ ರಾಜು ಕಾಲುವೆಯಲ್ಲಿ ಪೈಪ್ಲೈನ್ ಅಳವಡಿಸಿ ಶುದ್ಧೀಕರಣ ಘಟಕಕ್ಕೆ ಸಂರ್ಪಕ ಕಲ್ಪಿಸಲಾಗಿದೆ.

ಅನುದಾನ ಕೊರತೆಯಿಂದ ವಿಳಂಬ

ಅನುದಾನ ಕೊರತೆಯಿಂದ ವಿಳಂಬವಾಗುತ್ತಿದೆ. ತಕ್ಷಣ ದುರಸ್ತಿ ಕಾಮಗಾರಿ ಆರಂಭಿಸಲಾಗುವುದು. ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖೆ ಯೋಜನೆಯನ್ನು ಪರೀಕ್ಷೆಗೆ ಒಳಪಡಿಸಬೇಕಾಗಿತ್ತು. ಪೈಪ್ಲೈನ್ನಲ್ಲಿ ನೀರು ಹರಿಸಿದ ನಂತರ ಒಳಚರಂಡಿ ಯೋಜನೆ ಸಂಪೂರ್ಣ ಚಿತ್ರಣ ಪುರಸಭೆಗೆ ಹಸ್ತಾಂತರಿಬೇಕಾಗಿತ್ತು. ಆದರೆ, ಇಲ್ಲಿವರೆಗೂ ಆ ಕೆಲಸ ನಡೆದಿಲ್ಲ. ಕೊಳಚೆ ನೀರು ಸಂಸ್ಕರಣ ವಿದ್ಯುತ್ ಘಟಕದಲ್ಲಿ ಸಮಸ್ಯೆ ಉಂಟಾಗಿದ್ದು, ದುರಸ್ತಿಗೆ ಸೂಚಿಸಲಾಗಿದೆ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್.

ಪೈಪ್ಲೈನ್ನಲ್ಲಿ ಕೊಳಚೆ ನೀರು ಹರಿದು ಛೇಂಬರ್ ಉಕ್ಕಿ ಹರಿಯುತ್ತಿವೆ. ಇದರಿಂದ ಕೆರೆಯಲ್ಲಿ ಮಲಿನ ನೀರು ಸಂಗ್ರಹವಾಗುತ್ತಿದೆ.
ಶ್ರೀನಿವಾಸ್, ಮಾಲೂರು ತಾಲ್ಲೂಕು ಕರವೇ ಅಧ್ಯಕ್ಷ

ಕೆಲವು ಭಾಗಗಳಲ್ಲಿ ಕೊಳಚೆ ನೀರಿನ ಛೇಂಬರ್ ತುಂಬಿ ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ.
ಕಬಾಬ್ ಆಂಜಿ, ಪಟ್ಟಣದ ನಿವಾಸಿ

ಸಂಬಂಧಪಟ್ಟ ಇಲಾಖೆ ಕೂಡಲೇ ಗಮನ ವಹಿಸಿ ಪೈಪ್ ಸರಿಪಡಿಸಿ ಸಂಪರ್ಕ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪುರಸಭೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು.
ದಿನೇಶ್ ಗೌಡ, ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ

ಸಕ್ಕಿಂಗ್ ಯಂತ್ರ ಹಾಳಾಗಿ ಒಂದು ವರ್ಷವಾಗಿದೆ. ಪುರಸಭೆ ಅಧಿಕಾರಿಗಳಿಗೆ ಹಲವು ಭಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ವಿ.ಮಂಜುನಾಥ್, ಪುರಸಭೆ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.