ಸೋಮವಾರ, 22 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೋಲಾರ | ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಘಾಟು!

ಕಾರ್ಮಿಕರಿಗೆ, ಸ್ಥಳೀಯರಿಗೆ ಮಾದಕ ವಸ್ತು ಮಾರಾಟ– ಹೊರರಾಜ್ಯದ ಕೆಲ ಕಾರ್ಮಿಕರ ಕೃತ್ಯ
Published : 22 ಸೆಪ್ಟೆಂಬರ್ 2025, 5:48 IST
Last Updated : 22 ಸೆಪ್ಟೆಂಬರ್ 2025, 5:48 IST
ಫಾಲೋ ಮಾಡಿ
Comments
ನಿಖಿಲ್‌ ಬಿ.
ನಿಖಿಲ್‌ ಬಿ.
ಗಾಂಜಾ ಮಾರಾಟ ಹೇಗೆ ಗೊತ್ತೇ?
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯದ ಕಾರ್ಮಿಕರು ತಮ್ಮ ಊರುಗಳಿಂದ ಖಾಸಗಿ ಟ್ರಾವೆಲ್ಸ್‌ಗಳ ಮೂಲಕ ಗಾಂಜಾ ಪಾರ್ಸೆಲ್‌ ತರಿಸಿಕೊಳ್ಳುತ್ತಾರೆ. ಫೋನ್‌ ಪೇ ಮೂಲಕ ಹಣ ಪಾವತಿಸುತ್ತಾರೆ. ಫ್ಲಿಪ್‌ಕಾರ್ಟ್‌ ಅಮೆಜಾನ್‌ನಲ್ಲಿ ಬರುವ ಪೊಟ್ಟಣಗಳ ಮಾದರಿಯಲ್ಲಿ ಆ ಪೊಟ್ಟಣ ಇರುತ್ತದೆ. ಹೀಗಾಗಿ ಯಾರಿಗೂ ಅನುಮಾನ ಬರುವುದಿಲ್ಲ. ಉತ್ತರ ಭಾರತದ ಕಾರ್ಮಿಕರು ನರಸಾಪುರ ಕೋಲಾರ ಸುತ್ತಮುತ್ತ ಬಾಡಿಗೆ ಮನೆ ಪಡೆದುಕೊಂಡಿದ್ದಾರೆ. ಮನೆಯಲ್ಲಿ ಗಾಂಜಾ ತುಂಬಿ ಬೂಂದಿ ಪಾಕೆಟ್‌ ರೀತಿ ಮಾಡುತ್ತಾರೆ. ನಂತರ ಮಾರಾಟ ಮಾಡುತ್ತಾರೆ. ಕಾರ್ಮಿಕರು ಕಾರ್ಖಾನೆ ಕಂಪನಿಗಳಿಂದ ಬಿಡುವಿನ ಅವಧಿ ಅಥವಾ ಕೆಲಸ ಮುಗಿದ ಮೇಲೆ ಚಹಾ ಕಾಫಿ ಕುಡಿಯಲು ಸುತ್ತಮುತ್ತಲಿನ ಚಹಾದಂಗಡಿ ಬೀಡಾ ಅಂಗಡಿ ಇನ್ನಿತರ ಸಣ್ಣಪುಟ್ಟ ಅಂಗಡಿಗಳಿಗೆ ಬರುತ್ತಾರೆ. ಆಗ ಅಲ್ಲಿ ಗಾಂಜಾ ತುಂಬಿರುವ 10 ಗ್ರಾಂ ಪೊಟ್ಟಣಗಳನ್ನು ₹ 500ಕ್ಕೆ ಒಂದರಂತೆ ಮಾರುತ್ತಾರೆ. ಅಬಕಾರಿ ಇಲಾಖೆ ಸಿಬ್ಬಂದಿಗೆ ಈಚೆಗೆ ಈ ಪ್ರದೇಶದ ಬಾಡಿಗೆ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಅಂಥ 192 ಪೊಟ್ಟಣ ಪತ್ತೆಯಾಗಿವೆ. ಅಲ್ಲದೆ ಒಡಿಶಾದ ಆರೋಪಿಯೊಬ್ಬ ಹೇಗೆಲ್ಲಾ ಮಾರಾಟ ಮಾಡಲಾಗುತ್ತದೆ ಎಂಬುದನ್ನು ಬಾಯಿ ಬಿಟ್ಟಿದ್ದಾನೆ. ಬೀಡಾ ಅಥವಾ ಸಣ್ಣಪುಟ್ಟ ಅಂಗಡಿಗಳಲ್ಲಿ ಚಾಕೊಲೇಟ್‌ ರೂಪದಲ್ಲಿ ಮಾರಾಟ ಮಾಡಿದ್ದ ಪ್ರಕರಣ ನರಸಾಪುರದಲ್ಲಿ ವರ್ಷಗಳ ಹಿಂದೆ ಪತ್ತೆಯಾಗಿತ್ತು. ಕೈಗಾರಿಕಾ ಪ್ರದೇಶದ ಕಾರ್ಮಿಕರು ಸ್ಥಳೀಯರು ಕಾಲೇಜುಗಳ ವಿದ್ಯಾರ್ಥಿಗಳೇ ಇವರ ಟಾರ್ಗೆಟ್‌.
ಸಾಗಾಟ ಮಾರಾಟ ಬಳಕೆದಾರರ ಮೇಲೆ ನಿಗಾ
ಮೊದಲು ಮಾದಕ ವಸ್ತುಗಳ ಸಾಗಾಟ ತಡೆಯುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ನಮ್ಮ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಗಡಿಭಾಗವಾಗಿರುವ ಕಾರಣ ಹೆಚ್ಚು ನಿಗಾ ಇಟ್ಟಿದ್ದೇವೆ. ಕೆಲ ದಿನಗಳ ಹಿಂದೆ ನಮ್ಮ ಪೊಲೀಸರು ಹರಿಯಾಣ ರಾಜಸ್ಥಾನದ ಎಂಟು ಮಂದಿಯನ್ನು ಆಂಧ್ರದ ಮದನಪಲ್ಲಿಯ ವ್ಯಕ್ತಿಯನ್ನು ಬಂಧಿಸಿದೆ. ಮಾರಾಟಗಾರರನ್ನು ಪತ್ತೆ ಹಚ್ಚುವುದಲ್ಲದೇ ಮಾದಕ ವಸ್ತು ಖರೀದಿಸಿ ಬಳಕೆ ಮಾಡುವವರ ಮೇಲೂ ನಿಗಾ ಇಡಲಾಗಿದೆ. ಈಚೆಗೆ ವೇಮಗಲ್‌ ಮಾಲೂರಿನಲ್ಲಿ ಎಂಟು ಮಂದಿಯನ್ನು ಬಂಧಿಸಿದ್ದೇವೆ. ಕೈಗಾರಿಕಾ ಪ್ರದೇಶದ ಮೇಲೂ ನಿಗಾ ಇಟ್ಟಿದ್ದೇವೆ. ಮತ್ತಷ್ಟು ಶೋಧ ಕಾರ್ಯ ನಡೆಸುತ್ತೇವೆ ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಈಚೆಗೆ ಹೊರರಾಜ್ಯದ ಕಾರ್ಮಿಕನ ಕೊಲೆ!
ನರಸಾಪುರ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಕಾರ್ಮಿಕ ಅರ್ನಾಬ್‌ ಮನ್ನಾ (25) ಎಂಬುವರನ್ನು ಈಚೆಗೆ ಮಾಲೂರು ತಾಲ್ಲೂಕಿನ ಮುತ್ತಕದಹಳ್ಳಿ ಬಳಿ ಕೊಲೆ ಮಾಡಲಾಗಿತ್ತು. ಕೆಲಸ ಮುಗಿಸಿ ರಾತ್ರಿ ವೇಳೆ ಮನೆಗೆ ಹೋಗುವಾಗ ಈ ಕೃತ್ಯ ನಡೆದಿತ್ತು. ಕೊಲೆಗೆ ಕಾರಣ ಪತ್ತೆ ಹೆಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT