ಬಂಗಾರಪೇಟೆ: ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ಚುನಾವಣೆಗೆ ಬಲಿಷ್ಠ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದರಿಂದ ಗೆಲುವು ಸಾಧಿಸಿದ್ದೇವೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಹೇಳಿದರು.

ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮೈತ್ರಿ ಮಾಡಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಬಲಿಷ್ಠರನ್ನು ಆಯ್ಕೆ ಮಾಡುವ ಮೂಲಕ ಎಂಟು ಕ್ಷೇತ್ರಗಳಲ್ಲಿ ಏಳು ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ನಮ್ಮ ಶಕ್ತಿ ತೋರಿಸಿದ್ದೇವೆ ಎಂದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಶಾಸಕರ ಜೊತೆಯಲ್ಲಿ ಇರುವವರೇ ಎನ್ಡಿಎ ಮೈತ್ರಿಕೂಟ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲುವು ತಂದು ಕೊಟ್ಟಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ 45 ರಿಂದ 50 ಸಾವಿರ ಮತಗಳ ಅಂತರದಲ್ಲಿ ಸೋಲಿಸೋದು ಗ್ಯಾರಂಟಿ ಎಂದರು.

ಈ ವೇಳೆ ಶಾಸಕ ವೆಂಕಟಮುನಿಯಪ್ಪ, ಮಾಜಿ ಸದಸ್ಯ ಕಪಾಲಿ ಶಂಕರ್, ನೂತನ ನಿರ್ದೇಶಕರಾದ ಮಾರ್ಕಂಡೇಗೌಡ, ಸೀತಾರಾಮಪ್ಪ, ಸತೀಶ್, ಎಚ್.ಆರ್.ಶ್ರೀನಿವಾಸ್, ಬಾಲಚಂದ್ರ, ರಾಮಯ್ಯ, ರಮ್ಯಾ, ತಿಪ್ಪಾರೆಡ್ಡಿ, ದೇವರಾಜ್, ಹುನಕುಂದ ವೆಂಕಟೇಶ್, ರಮೇಶ್, ಕೀಲುಕೊಪ್ಪ ಯಲ್ಲಪ್ಪ, ಗುಟ್ಟಳ್ಳಿ ಮಂಜಯ್ಯ, ಹನುಮಂತಯ್ಯ, ವೆಂಕಟೇಶ್, ಚೌಡಪ್ಪ ಮಾದೇಶ್ ಗೌಡ, ರಾಜುಗೌಡ, ಚಿನ್ನಿಕೃಷ್ಣ, ಚಂದ್ರಪ್ಪ, ಗೋವಿಂದಪ್ಪ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.