ಮುಳಬಾಗಿಲು: ಒಂದೇ ವೇದಿಕೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಾಮರಸ್ಯಕ್ಕೆ ಸಾಕ್ಷಿಯಾಯಿತು ನಂಗಲಿ ಗ್ರಾಮ.

ಮುಳಬಾಗಿಲು ತಾಲ್ಲೂಕಿನ ನಂಗಲಿಯ ನವ ಜವಾನ್ ಕಮಿಟಿ ಹಾಗೂ ನಂಗಲಿ ಯುವಕರ ಕಮಿಟಿ ವತಿಯಿಂದ ಏರ್ಪಡಿಸಿದ್ದ ಹಿಂದೂ ಮುಸ್ಲಿಂ ಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಐದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಎರಡು ಧರ್ಮದವರು ಒಂದೇ ವೇದಿಕೆಯಲ್ಲಿ ತಮ್ಮ ತಮ್ಮ ಸಂಪ್ರದಾಯ, ಆಚರಣೆಗಳ ಮೂಲಕ ವಿವಾಹವಾದರು. ನಂಗಲಿಯ ನವ ಜವಾನ್ ಸಮಿತಿ ನಾಲ್ಕು ವರ್ಷಗಳಿಂದ ಈದ್ ಮಿಲಾದ್ ಹಬ್ಬವಾದ ಎರಡನೇ ಸಾಮೂಹಿಕ ವಿವಾಹವನ್ನು ಆಚರಿಸುತ್ತಿದ್ದೆ. ಈ ಬಾರಿ ಮೂರು ಹಿಂದೂ ಜೋಡಿ, ಎರಡು ಮುಸ್ಲಿಂ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟ ದಂಪತಿಗಳನ್ನು ಎಲ್ಲರೂ ಆಶೀರ್ವಾದಿಸಿದರು.

ಹಿಂದೂ ಧರ್ಮದ ಅರ್ಚಕರು ಮಂತ್ರ ಹೇಳಿ ಶಾಸ್ತ್ರಗಳನ್ನು ಪೂರೈಸಿದರೆ, ಮುಸ್ಲಿಂ ಧರ್ಮಾಧಿಕಾರಿ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಸಿದರು.

ನವ ಜೋಡಿಗಳಿಗೆ ನವ ಜವಾನ್ ಸಮಿತಿಯ ವತಿಯಿಂದ ಬಂಗಾರದ ಮಾಂಗಲ್ಯ, ಮೂಗುತಿ, ಓಲೆ, ಮಂಚ, ಬೀರು, ಹಾಸಿಗೆ, ಪಾತ್ರೆ –ಸಾಮಾನು ಮನೆಗೆ ಅಗತ್ಯವಿರುವ ವಸ್ತುಗಳನ್ನು ವಿತರಿಸಿದರು.

ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಸಿ.ಶ್ರೀಧರ್ ಮಾತನಾಡಿ, ಭಾರತ ಸರ್ವಧರ್ಮ ಸಮನ್ವಯ ದೇಶವಾಗಿದ್ದು, ಕುವೆಂಪು ಅವರ ವಿಶ್ವ ಮಾನವ ಸಂದೇಶಕ್ಕೆ ಒಂದೇ ವೇದಿಕೆಯಲ್ಲಿ ನಡೆದ ಹಿಂದೂ ಮುಸ್ಲಿಂ ವಿವಾಹಗಳು ಆದರ್ಶವಾಗಿವೆ. ಎಲ್ಲರೂ ಸಹೋದರರಂತೆ ಬದುಕಬೇಕು ಎಂದು ಹೇಳಿದರು.

ಅಕ್ಮಲ್ ಬೇಗ್, ಎನ್.ಸಿ.ಶ್ರೀಧರ್, ಸತೀಶ್ ಕುಮಾರ್, ಹುಸೇನ್, ನಿರಂಜನ್, ಕೆ.ತ್ಯಾಗರಾಜ್ ಹಾಗೂ ನವ ಜವಾನ್ ಸಮಿತಿಯ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.