ಕೋಲಾರ: ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಮುಲ್) ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಇರುವಂತೆ ಚಟುವಟಿಕೆಗಳು ಬಿರುಸುಗೊಂಡಿದ್ದು ಆಣೆ, ಪ್ರಮಾಣ, ಪ್ರವಾಸ, ಆಮಿಷ, ಬೆದರಿಕೆ ಜೋರಾಗಿವೆ.

ಜೆಡಿಎಸ್–ಬಿಜೆಪಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ ಮುಖಂಡರು ಮತದಾರರನ್ನು ಸೆಳೆದಿಟ್ಟುಕೊಳ್ಳಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಗೋವಾ, ಕೇರಳ, ತಮಿಳುನಾಡು, ಜಿಲ್ಲೆಯ ಸುತ್ತಲಿನ ರೆಸಾರ್ಟ್ ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಜೊತೆಗೆ ಹಣಕಾಸಿನ ಆಮಿಷದ ಹೊಳೆಯೂ ಹರಿಯುತ್ತಿದೆ. ತಮಗೇ ಮತದಾನ ಮಾಡುವಂತೆ ದೇವರ ಫೋಟೊ ನೀಡಿ ಆಣೆ, ಪ್ರಮಾಣ ಕೂಡ ಮಾಡಿಸಿಕೊಳ್ಳಲಾಗುತ್ತಿದೆ.

ಕಾಂಗ್ರೆಸ್ನಲ್ಲೇ ಬಣಗಳ ಗುದ್ದಾಟ ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್–ಬಿಜೆಪಿ ಮೈತ್ರಿಕೂಟದ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿವೆ.

‘ಮಾಜಿ ಸಚಿವ, ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಮತದಾರರಿಗೆ ಅಮಿಷವೊಡ್ಡಿ, ಬೆದರಿಕೆ ಹಾಕಿ ಡೆಲಿಗೇಷನ್ ಫಾರಂಗಳನ್ನು ಕೊಂಡೊಯುತ್ತಿದ್ದಾರೆ’ ಎಂಬುದಾಗಿ ಕೋಲಾರ ಶಾಸಕ ಕಾಂಗ್ರೆಸ್ನ ಕೊತ್ತೂರು ಮಂಜುನಾಥ್ ಆರೋಪ ಮಾಡಿದ್ದಾರೆ.

‘ಹಣದ ಆಸೆ ತೋರಿಸಿ ಕೋಲಾರ ಈಶಾನ್ಯ ಹಾಗೂ ನೈರುತ್ಯ ಕ್ಷೇತ್ರದ ಮತದಾರರನ್ನು ಗೋವಾಕ್ಕೆ ಕರೆದೊಯ್ದಿದ್ದಾರೆ. ವೇಮಗಲ್ ಕ್ಷೇತ್ರದ ಮತದಾರರ ಡೆಲಿಗೇಟ್ ಫಾರಂ ಕಿತ್ತುಕೊಳ್ಳುತ್ತಿದ್ದಾರೆ. ನಾವು ಯಾರನ್ನೂ ಪ್ರವಾಸ ಕರೆದುಕೊಂಡು ಹೋಗುವುದಿಲ್ಲ. ಆಣೆ ಪ್ರಮಾಣ ಮಾಡಿಸುವುದಿಲ್ಲ. ಹಿಂದಿನ ಚುನಾವಣೆಗಳಲ್ಲಿ ಕೋಲಾರದಲ್ಲಿ ವರ್ತೂರು ಪ್ರಕಾಶ್, ಮಾಲೂರಿನಲ್ಲಿ ಮಂಜುನಾಥ್ ಗೌಡ ದೇವರ ಬಳಿ ಆಣೆ ಪ್ರಮಾಣ ಮಾಡಿಸಿದ್ದರು. ಈಗಾಗಲೇ ಅವರಿಗೆ ದೇವರು ಪಾಠ ಕಲಿಸಿದ್ದಾನೆ’ ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ನ ಎಂ.ಎಲ್.ಅನಿಲ್ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ನವರು ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂಬುದಾಗಿ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳು ಹಾಗೂ ಮುಖಂಡರು ಆರೋಪಿಸಿದ್ದಾರೆ. ಅಧಿಕಾರ ಮತ್ತು ಹಣದ ಮೂಲಕ ಮಾಲೂರು ಸೇರಿದಂತೆ ವಿವಿಧ ಕ್ಷೇತ್ರಗಳ ಮತದಾರರನ್ನು ಗೋವಾ ಪ್ರವಾಸಕ್ಕೆ ಕರೆದೊಯ್ದಿದ್ದಾರೆ ಎಂದು ದೂರಿದ್ದಾರೆ.

ಗೆಲುವಿಗೆ ಬೇಕಾದ ಸಂಖ್ಯೆಯ ಮತದಾರರನ್ನು ಸೆಳೆಯಲು ಎರಡೂ ಕಡೆಯಿಂದಲೂ ಭಾರಿ ತಂತ್ರಗಾರಿಕೆ ನಡೆಯುತ್ತಿದೆ.

ಜೂನ್ 25ರಂದು ಮತದಾನ ನಡೆಯಲಿದ್ದು, ಕೋಮುಲ್ನಲ್ಲಿ ಒಟ್ಟು 13 ನಿರ್ದೇಶಕರ ಸ್ಥಾನಗಳಿವೆ. ಈಗಾಗಲೇ ಮಾಲೂರು ಟೇಕಲ್ ಕ್ಷೇತ್ರದಿಂದ ಮಾಜಿ ಅಧ್ಯಕ್ಷ, ಶಾಸಕ ಕೆ.ವೈ. ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಇನ್ನುಳಿದ 12 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸೇರಿದಂತೆ ಒಟ್ಟು 29 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಕ್ಷೇತ್ರಗಳಲ್ಲಿ ಒಟ್ಟು 855 ಮತದಾರರು (ಡೆಲಿಗೇಟ್) ಇದ್ದಾರೆ.

12 ಕ್ಷೇತ್ರಗಳಿಗೆ 25ರಂದು ಬೆಳಿಗ್ಗೆ 9 ರಿಂದ 4 ಗಂಟೆವರೆಗೆ ಕೋಲಾರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಲಿದೆ. ಅಂದೇ ಸಂಜೆ ಫಲಿತಾಂಶ ಘೋಷಣೆಯಾಗಲಿದೆ.

12 ಕ್ಷೇತ್ರಗಳಿಗೆ ನಾಳೆ ಮತದಾನ ಗೆಲುವಿಗೆ ಬೇಕಾದ ಸಂಖ್ಯೆಯ ಮತದಾರರ ಸೆಳೆಯಲು ತಂತ್ರಗಾರಿಕೆ ಕಣದಲ್ಲಿ ಇಬ್ಬರು ಶಾಸಕರು; ನಂಜೇಗೌಡ ಅವಿರೋಧ ಆಯ್ಕೆ

ಮೈತ್ರಿಕೂಟಕ್ಕೆ 3 ಕ್ಷೇತ್ರಗಳಲ್ಲಿ ಅಭ್ಯರ್ಥಿ ಇಲ್ಲ

ಕೋಮುಲ್ ಚುನಾವಣೆಯ 13 ನಿರ್ದೇಶಕರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ ಜೆಡಿಎಸ್–ಬಿಜೆಪಿ ಮೈತ್ರಿಕೂಟ (ಎನ್ಡಿಎ) ಬೆಂಬಲಿತರು 10 ಕ್ಷೇತ್ರಗಳಲ್ಲಿ ಮಾತ್ರ ಕಣದಲ್ಲಿದ್ದಾರೆ. ಮಾಲೂರಿನ ಟೇಕಲ್ ಕ್ಷೇತ್ರ ಕೆಜಿಎಫ್ ಕ್ಷೇತ್ರ ಹಾಗೂ ಕೋಲಾರ ದಕ್ಷಿಣ ಮಹಿಳಾ ಮೀಸಲು ಕ್ಷೇತ್ರದಲ್ಲಿ ಮೈತ್ರಿಕೂಟಕ್ಕೆ ಅಭ್ಯರ್ಥಿಗಳೇ ಇಲ್ಲ.

ಮಾವಿಗೆ ಬೆಲೆ ಇಲ್ಲ; ಇವರಿಗೆ ಕೋಮುಲ್ ಮೋಹ!

‘ಕೋಲಾರ ಜಿಲ್ಲೆಯ ಜೀವನಾಡಿ ಎನಿಸಿರುವ ಮಾವು ಹಾಗೂ ಟೊಮೆಟೊಗೆ ಧಾರಣೆ ಕುಸಿದು ರೈತರು ಬೀದಿಗೆ ಬಿದ್ದಿದ್ದಾರೆ. ಈವರೆಗೆ ಬೆಂಬಲ ಬೆಲೆ ಸಿಕ್ಕಿಲ್ಲ. ಬೆಂಬಲ ಬೆಲೆ ಕೊಡಿಸುವುದನ್ನು ಬಿಟ್ಟು ಶಾಸಕರು ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಮುಖಂಡರು ಹಾಲು ಒಕ್ಕೂಟದ (ಕೋಮಲ್) ಚುನಾವಣೆಯ ಮೋಹಕ್ಕೆ ಬಿದ್ದಿದ್ದಾರೆ’ ಎಂದು ಬೆಳೆಗಾರರು ರೈತ ಮುಖಂಡರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.