ಕೋಲಾರ: ನಿವೇಶನಕ್ಕೆ ಇ–ಖಾತೆ ಮಾಡಿಕೊಡಲು ಹಣ ಪಡೆಯುತ್ತಿದ್ದ ಮುಳಬಾಗಿಲು ನಗರಸಭೆ ಕಚೇರಿ ನೌಕರರೊಬ್ಬರು ಸೋಮವಾರ ಜಿಲ್ಲಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಎಸ್ಡಿಎ ಪ್ರಶಾಂತ್ ಟ್ರ್ಯಾಪ್ ಆದ ನೌಕರ. ಇವರ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

‘ನೆರ್ನಹಳ್ಳಿಯ ಜಯರಾಂ ಎಂಬುವರು ದೂರು ನೀಡಿದ್ದರು. 30x40 ಅಳತೆಯ ನಿವೇಶನದ ದಿಕ್ಕನ್ನು ಬದಲು ಮಾಡಲು ನೌಕರ ₹6 ಸಾವಿರ ಲಂಚ ಕೇಳಿದ್ದರು. ಅದರಂತೆ ₹5 ಸಾವಿರ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ’ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.

ಜಿಲ್ಲಾ ಲೋಕಾಯುಕ್ತ ನೂತನ ಎಸ್ಪಿ ಆಂಥೋಣಿ ಜಾನ್ ಹಾಗೂ ಡಿವೈಎಸ್ಪಿ ಸುಧೀರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಆಂಜನಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸಿಬ್ಬಂದಿ ವಾಸುದೇವ್, ಅಜಯ್, ದೇವ್, ಮಂಜಪ್ಪ, ನಾಗವೇಣಿ, ಶೋಭಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.