ಯಲಬುರ್ಗಾ: ಮೀಸಲಾತಿ ರದ್ಧತಿ ಮಾಡುವ ಬಗ್ಗೆ ಹೇಳಿಕೆ ನೀಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಧೋರಣೆಯು ಸಂವಿಧಾನ ವಿರೋಧಿಯಾಗಿದೆ. ಇದೊಂದು ಅಪ್ರಬುದ್ಧ ಹೇಳಿಕೆಯಾಗಿದೆ ಎಂದು ಟೀಕಿಸಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.

ಪಟ್ಟಣದ ವಿವಿಧ ಬೀದಿಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ವಿವಿಧ ಘೋಷಣೆ ಕೂಗಿದರು. ದೇಶದ ಜನರಲ್ಲಿ ಕ್ಷಮೆ ಯಾಚಿಸಬೇಕು. ಅಲ್ಲದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಭಾಧ್ಯಕ್ಷರು ಸಂಸತ್ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಸಮಾನತೆ ತರುವ ಸಲುವಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೀಸಲಾತಿಯ ಕಲ್ಪಿಸಿದ್ದಾರೆ. ಸಂವಿಧಾನಬದ್ಧವಾದ ಮೀಸಲಾತಿಯನ್ನು ತೆಗೆದುಹಾಕುವ ಮೂಲಕ ದಲಿತರಿಗೆ ಹಿಂದುಳಿದ ಸಮುದಾಯಕ್ಕೆ ಹಾಗೂ ಮೀಸಲಾತಿ ಪಡೆದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಸಾಧಿಸುವ ವಿವಿಧ ಸಮುದಾಯಗಳಿಗೆ ದ್ರೋಹ ಮಾಡಿದಂತಿದೆ. ಈ ನಿಟ್ಟಿನಲ್ಲಿ ಮೀಸಲಾತಿ ಪಡೆಯುವ ಪ್ರತಿ ಸಮುದಾಯಗಳಿಗೆ ಅವಮಾನಿಸಿದಂತಾಗಿದೆ. ಕೇವಲ ಮತಗಳಿಕೆಗಾಗಿ ದಲಿತರು, ಅಲ್ಪಸಂಖ್ಯಾತರ ಹಿತಕ್ಕೆ ಬದ್ಧ ಎಂದು ಪ್ರಚಾರ ಗಿಟ್ಟಿಸಿಕೊಳ್ಳುವ ಕಾಂಗ್ರೆಸ್ ಪಕ್ಷದಲ್ಲಿನ ಧೋರಣೆಯನ್ನು ರಾಹುಲ್ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನ ಕಾಂಗ್ರೆಸ್ ಪಕ್ಷದ ಒಳಮರ್ಮವನ್ನು ತಿಳಿದುಕೊಳ್ಳಲು ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.

ಮುಖಂಡ ಬಸವಲಿಂಗಪ್ಪ ಭೂತೆ ಮಾತನಾಡಿ, ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ, ಆರ್ಥಿಕವಾಗಿ ಹಿಂದುಳಿದವರನ್ನು ಉದ್ದಾರ ಮಾಡುತ್ತೇವೆ ಎಂದು ಹೇಳಿಕೊಂಡು ಮತ ಪಡೆದುಕೊಳ್ಳುತ್ತದೆ. ನಂತರ ಸಂಪೂರ್ಣ ನಿರ್ಲಕ್ಷಿಸುವ ಮೂಲಕ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ವಕ್ತಾರ ವೀರಣ್ಣ ಹುಬ್ಬಳ್ಳಿ, ಸಿದ್ದು ಮಣ್ಣಿನವರ್, ಮಲ್ಲನಗೌಡ ಕೊನನಗೌಡ್ರ, ಶಂಕ್ರಪ್ಪ ಸುರಪುರ, ಮಾರುತಿ ಹೊಸಮನಿ, ಅರವಿಂದಗೌಡ ಪಾಟೀಲ್, ಶಿವಶಂಕರ ದೇಸಾಯಿ ಮಾತನಾಡಿದರು.

ತಹಶೀಲ್ದಾರ್ ಬಸವರಾಜ ತೆನ್ನಳ್ಳಿ ಮನವಿ ಸ್ವೀಕರಿಸಿದರು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಪ್ರತಿಕೃತಿ ದಹಿಸಿದರು.

ಬಿಜೆಪಿ ಮುಖಂಡರಾದ ಅಂದಯ್ಯ ಕಳ್ಳಿಮಠ, ಅಮರೇಶ ಹುಬ್ಬಳ್ಳಿ, ಅಯ್ಯನಗೌಡ ಕೆಂಚಮ್ಮನವರ್, ಕಳಕಪ್ಪ ತಳವಾರ, ಶಿವಪ್ಪ ವಾದಿ, ಬಸವರಾಜ ಗುಳಗುಳ್ಳಿ, ವಸಂತಕುಮಾರ ಭಾವಿಮನಿ, ಅಶೋಕ ಅರಕೇರಿ, ದ್ಯಾಮಣ್ಣ ಉಚ್ಚಲಕುಂಟಾ, ಹಂಚ್ಯಾಳಪ್ಪ ತಳವಾರ, ಶರಣಪ್ಪ ರಾಂಪುರ, ಸಂತೋಷಿಯಾ ಜೋಷಿ, ಕಲ್ಲಪ್ಪ ಕರಮುಡಿ, ರುದ್ರಪ್ಪ ನಡುಲಮನಿ, ರುದ್ರಯ್ಯ ಬಿಳಗಿಮಠ, ಹನಮಂತಪ್ಪ ರಾಠೋಡ, ಶಿವಪ್ಪ ವಾದಿ, ಶಿವಕುಮಾರ ನಾಗಲಾಪುರಮಠ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.