ಬುಧವಾರ, ಅಕ್ಟೋಬರ್ 20, 2021
24 °C

ಪೌರ ಕಾರ್ಮಿಕರ ದಿನಾಚರಣೆ: ಕ್ರೀಡಾಕೂಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಗಿರಿ: ಪೌರ ಕಾರ್ಮಿಕರ ದಿನಾಚರಣೆಯ ನಿಮಿತ್ತ ಪಟ್ಟಣ ಪಂಚಾಯಿತಿ ವತಿಯಿಂದ ಪೌರ ಕಾರ್ಮಿಕರಿಗೆ ಗುರುವಾರ ಪಿಯು ಕಾಲೇಜು ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಗುಂಡು ಎಸೆಯುವ ಮೂಲಕ ಮುಖ್ಯಾಧಿಕಾರಿ ರೆಡ್ಡಿರಾಯನಗೌಡ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ವರ್ಷದ ಎಲ್ಲಾ ದಿನಗಳಲ್ಲಿಯೂ ಪೌರ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಪಟ್ಟಣದ ಸುಂದರೀಕರಣಕ್ಕೆ ಹಗಲಿರುಳು ಎನ್ನದೆ ದುಡಿಯುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಮಿಕರ ದಿನಾಚರಣೆ ನಿಮಿತ್ತ ವಿವಿಧ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ಕ್ರೀಡೆಗಳಲ್ಲಿ ವಿಜೇತರಾದವರಿಗೆ ಸೆ. 29ರಂದು ಬಹುಮಾನ ವಿತರಿಸಲಾಗುವುದು ಎಂದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಶಾಮೀದಸಾಬ ಲೈನದಾರ, ಶಂಕ್ರಪ್ಪ ಸೋಮನಕಟ್ಟಿ, ಪೌರ ಕಾರ್ಮಿಕರ ಸಂಘಟನೆಯ ಪ್ರಮುಖರಾದ ಶರಣಪ್ಪ ಕೋಲ್ಕಾರ, ಹುಲಗಪ್ಪ, ಯಮನೂರಪ್ಪ, ಮುತ್ತಮ್ಮ, ಪಾರ್ವತೆಮ್ಮ, ಹುಸೇನಪ್ಪ, ಪ್ರಕಾಶ ಮಹಿಪತಿ, ಪಾಮಣ್ಣ ಬಡಿಗೇರ, ಪುರುಷೋತ್ತಮ್ಮ, ಮಂಜುನಾಥ ನಾಯಕ, ಬಸವರಾಜ, ಪರಶುರಾಮ ಇದ್ದರು.

ಫಲಿತಾಂಶ: ಮಹಿಳೆಯರಿಗಾಗಿ ನಡೆದ ಬಿಸ್ಕೀಟ್ ತಿನ್ನುವ ಸ್ಪರ್ಧೆಯಲ್ಲಿ ಭಾರತಿ (ಪ್ರಥಮ), ಯಲ್ಲಮ್ಮ ( ದ್ವಿತೀಯ) ಹಾಗೂ ವಿಜಯಲಕ್ಷ್ಮೀ ( ತೃತೀಯ).

ಪುರುಷರ ಬಿಸ್ಕೀಟ್ ತಿನ್ನುವ ಸ್ಪರ್ಧೆಯಲ್ಲಿ ತಿಮ್ಮಣ್ಣ ( ಪ್ರಥಮ), ಕೃಷ್ಣ (ದ್ವಿತೀಯ) ಹಾಗೂ ಪ್ರಕಾಶ ( ತೃತೀಯ),
ಮಹಿಳೆಯರಿಗಾಗಿ ಗುಂಡು ಎಸೆತ ಕಾಂತಮ್ಮ (ಪ್ರಥಮ), ಹುಲಿಗೆಮ್ಮ ( ದ್ವಿತೀಯ) ಹಾಗೂ ದೇವಮ್ಮ ( ತೃತೀಯ).

ಪುರುಷರ ಗುಂಡು ಎಸೆತದಲ್ಲಿ ಹುಸೇನಭಾಷ (ಪ್ರಥಮ), ಬಸವರಾಜ (ದ್ವಿತೀಯ) ಹಾಗೂ ಹುಲಗಪ್ಪ (ತೃತೀಯ).

ಮ್ಯೂಜಿಕಲ್ ಚೇರ್ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ನಜೀರಸಾಬ (ಪ್ರಥಮ), ಕಲ್ಯಾಣಪ್ಪ ( ದ್ವಿತೀಯ),
ಮಹಿಳೆಯರ ಮ್ಯೂಜಿಕಲ್ ಚೇರ್ ಸ್ಪರ್ಧೆಯಲ್ಲಿ ದೇವಮ್ಮ ( ಪ್ರಥಮ), ಕಾಂತಮ್ಮ (ದ್ವಿತೀಯ),
ಮಹಿಳೆಯರ ಲಿಂಬು ಸ್ಪೂನ್ ಸ್ಪರ್ಧೆಯಲ್ಲಿ ನಾಗಮ್ಮ (ಪ್ರಥಮ), ರತ್ನಮ್ಮ (ದ್ವಿತೀಯ), ಯಲ್ಲಮ್ಮ ತೃತೀಯ ಸ್ಥಾನ ಪಡೆದುಕೊಂಡರು. ಇವುಗಳ ಜೊತೆಗೆ ವಿವಿಧ ಗುಂಪು ಆಟಗಳು ನಡೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.