ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ: ಅಭಿವೃದ್ಧಿಗೆ ಸಹಕಾರ ನೀಡಿ- ಪ್ರೊಬೇಷನರಿ ಎಸಿ ರಜನೀಕಾಂತ ಮನವಿ

Last Updated 8 ಜೂನ್ 2021, 8:06 IST
ಅಕ್ಷರ ಗಾತ್ರ

ಕನಕಗಿರಿ: ‘ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಪಾತ್ರ ಹಿರಿದು’ ಎಂದು ಪ್ರೊಬೇಷನರಿ ಉಪವಿಭಾಗಾಧಿಕಾರಿ ರಜನೀಕಾಂತ ತಿಳಿಸಿದರು.

ಪಟ್ಟಣ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯಾಗಿ ತಹಶೀಲ್ದಾರ್ ರವಿ ಅಂಗಡಿ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿ ವಿಷಯದಲ್ಲಿ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಇರಬಾರದು. ಹೊಂದಾಣಿಕೆಯಿಂದ ಅಭಿವೃದ್ಧಿ ಮಾಡಬೇಕು ಎಂದರು.

ಸರ್ಕಾರದಿಂದ ಬಂದಿರುವ ಪ್ರತಿಯೊಂದು ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರಕಿಸಿ ಆರ್ಥಿಕವಾಗಿ ಸ್ವಾಲಂಬಿಗಳನ್ನಾಗಿಸಬೇಕು. ಇದರಿಂದ ದೇಶ ಅಭಿವೃದ್ಧಿಯಾಗುತ್ತದೆ ಎಂದು ಅವರು ತಿಳಿಸಿದರು.

ಲಾಕ್‌ಡೌನ್ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.

ತಹಶೀಲ್ದಾರ್ ರವಿ ಅಂಗಡಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರವೀಂದ್ರ ಸಜ್ಜನ್, ಉಪಾಧ್ಯಕ್ಷೆ ಸರಸ್ವತಿ ಸಣ್ಣ ಕನಕಪ್ಪ, ಸದಸ್ಯರಾದ ಶರಣಬಸಪ್ಪ ಭತ್ತದ, ಮಂಜುನಾಥ ಗಡಾದ, ರವಿ ಭಜಂತ್ರಿ, ಮುಖ್ಯಾಧಿಕಾರಿ ತಿರುಮಲಮ್ಮ ಹಾಗೂ ಸಹಕಾರ ಬ್ಯಾಂಕ್ ಅಧ್ಯಕ್ಷ ಪುರುಷೋತ್ತಮ್ಮರಡ್ಡಿ ಮಾದಿನಾಳ ಮಾತನಾಡಿದರು.

ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಹುಲಗಪ್ಪ ವಾಲೇಕಾರ, ಪಾಷಾ ಮುಲ್ಲಾರ, ಖಾಜಸಾಬ ಗುರಿಕಾರ, ಸುಭಾಸ ಕಂದಕೂರು, ಆಫೀಜ ಬೇಗ್ಂ, ಶಾಂತಮ್ಮ ಚೌಡ್ಕಿ, ಹುಸೇನಸಾಬ, ಭಾಗ್ಯಲಕ್ಷ್ಮೀ ಕನಕದಾಸ ಪೂಜಾರ ಹಾಗೂ ಕೀರ್ತಿ ಸೋನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT