ಯಲಬುರ್ಗಾ: ಶನಿವಾರ ಅನಾರೋಗ್ಯದಿಂದ ಮಹಾರಾಷ್ಟ್ರದ ನಾಗಪುರದಲ್ಲಿ ನಿಧನರಾದ ಸಿಆರ್ಪಿಎಫ್ ಯೋಧ, ಪಟ್ಟಣದ ಎರಡನೇ ವಾರ್ಡ್ನ ಕಂಡೇರ್ ಓಣಿಯ ನಿವಾಸಿ ಬಸವರಾಜ ಲೋಕಪ್ಪ ಗಂಗಾವತಿ (42) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಜರುಗಿತು.

ಯೋಧನ ಮೃತದೇಹ ಸೋಮವಾರ ಬೆಳಿಗ್ಗೆ ಪಟ್ಟಣ ತಲುಪಿತು. ಪಟ್ಟಣದ ಕಂಡೇರ್ ಓಣಿಯ ಕಾಮನ ಕಟ್ಟೆಯ ಬಳಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಬಂದ ಜನರು ಅಂತಿಮ ದರ್ಶನ ಪಡೆದು ಗೌರವ ಶ್ರದ್ಧಾಂಜಲಿ ಸಲ್ಲಿಸಿದರು.

ಬೆಳಿಗ್ಗೆ ಕುಕನೂರು ಮಾರ್ಗವಾಗಿ ಯಲಬುರ್ಗಾಕ್ಕೆ ಮೃತದೇಹ ಬರುವ ಸಂದರ್ಭದಲ್ಲಿ ಭಗತ್ಸಿಂಗ್ ಯುವಕ ಮಂಡಳದ ಸದಸ್ಯರು ಹಾಗೂ ಸ್ನೇಹಿತರ ಬಳಗದವರು ಬೈಕ್ ರ್ಯಾಲಿ ನಡೆಸಿದರು. ಯೋಧರ ತಂಡ ಮತ್ತು ಪೊಲೀಸ್ ಇಲಾಖೆಯವರು ವಿಶೇಷ ಗೌರವ ಸಲ್ಲಿಸಿದರು. ನಂತರ ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಬಸವಲಿಂಗೇಶ್ವರ ಮಠಕ್ಕೆ ಸೇರಿದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಮುಗಿಲು ಮುಟ್ಟಿದ ಆಕ್ರಂದನ: ಮೃತದೇಹ ಓಣಿಗೆ ಬರುತ್ತಿದ್ದಂತೆ ಗೆಳೆಯರ ಬಳಗ, ಕುಟುಂಬದ ಸದಸ್ಯರು ಹಾಗೂ ತಾಯಿಯ ಆಕ್ರಂದನ ಮುಗಿಲು ಮುಟ್ಟಿತು.

ಬಸವರಾಜ ಸುಮಾರು 22 ವರ್ಷಗಳಿಗೆ ಸಿಆರ್ಪಿಎಫ್ ಯೋಧರಾಗಿದ್ದರು. ಅವರು ಶ್ರೀನಗರ, ಮಣಿಪುರ, ಬೆಂಗಳೂರು ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ನಾಗಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಚೆಗೆ ಪಟ್ಟಣಕ್ಕೆ ಬಂದು ತಾಯಿ ಮತ್ತು ಸಹೋದರನನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿಕೊಂಡು ಹೋಗಿದ್ದರು. ಕೆಲ ತಿಂಗಳುಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು.

‘ಮಿತಭಾಷಿ ಹಾಗೂ ಸೌಮ್ಯ ಸ್ವಭಾವದ ಬಸವರಾಜ ಗಂಗಾವತಿ ಅವರ ಸ್ಮರಣಾರ್ಥ ವೃತ್ತ ನಿರ್ಮಿಸಬೇಕು ಅಥವಾ ರಸ್ತೆಗೆ ಅವರ ಹೆಸರು ನಾಮಕರಣ ಮಾಡಬೇಕು’ ಎಂದು ಭಗತ್ಸಿಂಗ್ ಯುವಕ ಮಂಡಳದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.