ಮಹಮ್ಮದ್ ಪೈಗಂಬರ್ ಅವರ ಸಿದ್ಧಾಂತ ಪಾಲಿಸಿದರೆ ಮಾತ್ರ ಅವರಿಗೆ ನಿಜವಾಗಿಯೂ ಗೌರವ ಸಲ್ಲಿಸಿದಂತೆ ಆಗುತ್ತದೆ. ಎಲ್ಲರೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು.
– ಅಮರೇಗೌಡ ಬಯ್ಯಾಪುರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಎಲ್ಲ ಧರ್ಮಗಳು ಒಂದೇ ಸಾರ ಹೇಳುತ್ತವೆ. ಪ್ರೀತಿ ಹಂಚಬೇಕು ಎನ್ನುವ ಸಂದೇಶ ನೀಡಿವೆ. ನಮ್ಮಲ್ಲಿನ ಪ್ರೀತಿಯನ್ನು ಎಲ್ಲರಿಗೂ ಹಂಚುವ ಕೆಲಸ ಮಾಡಬೇಕು.
– ಜಿ.ಎಸ್. ಪಾಟೀಲ, ಶಾಸಕ
ಕೊಪ್ಪಳ ಜಿಲ್ಲೆ ಭಾವೈಕ್ಯದ ತಾಣ. ಕೋವಿಡ್ ಸಂದರ್ಭದಲ್ಲಿ ಹಿಂದೂ ಸಮಾಜದವರು ಮೃತಪಟ್ಟಾಗ ಮುಸ್ಲಿಮರು ಹಿಂದೂಗಳ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಮಾಡಿ ಭಾವೈಕ್ಯ ಮೆರೆದಿದ್ದಾರೆ.
– ಎಚ್.ಆರ್. ಶ್ರೀನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ
ಅದ್ದೂರಿ ಮೆರವಣಿಗೆ: ಭವ್ಯ ಸ್ವಾಗತ
ಒಂದೆಡೆ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದರೆ ಮತ್ತೊಂದು ಕಡೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಗಡಿಯಾರ ಕಂಬದಿಂದ ಅಶೋಕ ವೃತ್ತದ ತನಕ ನಡೆದ ಮೆರವಣಿಗೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಯುವಜನತೆ ಪಾಲ್ಗೊಂಡಿದ್ದರು. ಕಲಬುರಗಿಯ ಕೆಬಿಎನ್ ದರ್ಗಾದ ಸಜ್ಜಾದೆ ನಶೀನ್ ಹಾಗೂ ರಾಜ್ಯ ವಕ್ಫ್ ಮಂಡಳಿ ರಾಜ್ಯ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್. ಅಪ್ಪ ಅವರು ವೇದಿಕೆ ಬರುತ್ತಿದ್ದಂತೆಯೇ ಜನರ ಸಂಭ್ರಮ ಇಮ್ಮಡಿಕೊಂಡಿತು. ಜನ ಚಪ್ಪಾಳೆ ಹೊಡೆದು ಹೂಮಳೆಗೆರೆದು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.