ಕೊಪ್ಪಳದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರ್‌ಎಸ್‌ಎಸ್ ಗಣವೇಷಧಾರಿಗಳು
‘ಹಿಂದೂಗಳ ಸದಾ ಎಚ್ಚರವಾಗಿರಬೇಕು’
ಕೊಪ್ಪಳ: ‘ಆರ್‌ಎಸ್‌ಎಸ್ ವಿಚಾರಧಾರೆಗಳು ಸದಾ ಮುಕ್ತವಾಗಿವೆ. ಸಂಘ ಬೇರೆ ಸಮಾಜ ಬೇರೆ ಎನ್ನುವ ಭಾವನೆ ಎಂದಿಗೂ ಬೇಡ. ಈ ಸಂಘಟನೆಯ ಕಾರ್ಯಚಟುವಟಿಕೆಗಳು ರಾಷ್ಟ್ರೀಯ ಆಂದೋಲನವಾಗಿ ಬದಲಾಗಿವೆ’ ಎಂದು ಜಗದೀಶ್ ಕಾರಂತ್ ಹೇಳಿದರು. ‘ಆರ್‌ಎಸ್‌ಎಸ್ ಟೆಂಗಿನಮರದ ಹಾಗೆ ತನ್ನಷ್ಟಕ್ಕೆ ತಾನು ಬೆಳೆದಿಲ್ಲ; ಆಲದ ಮರದಂತೆ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಬೆಳೆದಿದೆ. ಹಿಂದೂತ್ವವನ್ನು ಕೊಲ್ಲದೆ ಭಾರತವನ್ನು ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಇಸ್ಲಾಮಿಯರಿಗೆ ಗೊತ್ತಿದ್ದು ಅದಕ್ಕೆ ಹಿಂದೂಗಳನ್ನು ಅವಹೇಳನ ಮಾಡಲಾಗುತ್ತಿದೆ. ಇದಕ್ಕಾಗಿ ಎಡಚರರನ್ನು ಅಸ್ತ್ರಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ದೇಶವನ್ನು ಇಸ್ಲಾಮೀಕರಣ ಮಾಡುವ ಮೂಲಕ ಜಗತ್ತನ್ನೇ ಇಸ್ಲಾಮೀಕರಣ ಮಾಡುವ ದುರುದ್ದೇಶವಿದೆ. ಆದ್ದರಿಂದ ಎಲ್ಲ ಹಿಂದೂಗಳು ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.