ಕಾರಟಗಿ: ‘ಸಕಾಲದಲ್ಲಿ ಮಾಡಬೇಕಾದ ಕೆಲಸ ಮಾಡಿ ಜನರ ಅಲೆದಾಟ ತಪ್ಪಿಸಿ. ಜನರ, ಸದಸ್ಯರ ಜತೆ ಅಸಹಕಾರ, ನಿರ್ಲಕ್ಷ್ಯತನ ತೋರಿದರೆ ಸಹಿಸಲಾಗದು. ದಕ್ಷತೆಯಿಂದ ಕೆಲಸ ಮಾಡುವವರು ಇಲ್ಲಿರಿ, ಉಳಿದವರು ಜಾಗೆ ಖಾಲಿ ಮಾಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ಪುರಸಭೆ ಕಚೇರಿಯ ಸಭಾಂಗಣದಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ನಿವೇಶನದ ಫಾರ್ಮ್ 3, ಮುಟೇಷನ್ ಹಾಗೂ ಕಟ್ಟಡ ಪರವಾನಗಿಯನ್ನು ತ್ವರಿತವಾಗಿ, ನೇರವಾಗಿ ಮಧ್ಯವರ್ತಿಗಳಿಲ್ಲದಂತೆ ನೀಡಿ. ದಾಖಲೆಯ ನೆಪದಲ್ಲಿ ಅಲೆದಾಟಕ್ಕೆ ಆಸ್ಪದ ನೀಡಬಾರದು. ಮುಖ್ಯಾಧಿಕಾರಿ ಸಹಿತ ಇತರ ಅಧಿಕಾರಿಗಳು ಕಟ್ಟುನಿಟ್ಟಾಗಿ ಡೈರಿ ನಿರ್ವಹಣೆ ಮಾಡಿ, ಆಯಾ ವಾರ್ಡ್ಗೆ ತೆರಳುವ ಮುಂಚೆ ಸದಸ್ಯರಿಗೆ ಮಾಹಿತಿ ನೀಡಿ’ ಎಂದು ಸಲಹೆ ನೀಡಿದ ಅವರು, ‘ಸದಸ್ಯರ ಹಾಗೂ ಜನರ ಮಧ್ಯೆ ಸಮನ್ವಯ ಸಾಧಿಸಿ ಯಾವುದೇ ಕೆಲಸವಿದ್ದರೂ ತಕ್ಷಣ ಕಾರ್ಯರೂಪಕ್ಕೆ ತನ್ನಿ. ಅಭಿವೃದ್ದಿ ಸಹಿತ ಇತರ ಕಾಮಗಾರಿಗಳ ಕೆಲಸ ಮುಗಿದಿದ್ದರೆ ಹಣ ಪಾವತಿಗೆ ಮುಂದಾಗಿ, ಕಾಲಹರಣ ಮಾಡಿದರೆ ಸಹಿಸಲಾಗದು’ ಎಂದರು ಹೇಳಿದರು.

‘ಜನರಷ್ಟೇ ಅಲ್ಲದೆ ಸದಸ್ಯರಿಂದಲೂ ವ್ಯಾಪಕ ದೂರುಗಳು ಬರುತ್ತಿವೆ. ಮುಂದೆ ಇದಕ್ಕೆ ಅವಕಾಶ ನೀಡದೇ ತಿದ್ದಿಕೊಳ್ಳಿರಿ. ಹಿಂದಿನ ಚಾಳಿ ಮುಂದುವರಿಸಿದರೆ ನಿರ್ದಾಕ್ಷಿಣ್ಯ ಕ್ರಮ ಎದುರಿಸಬೇಕಾದೀತು’ ಎಂದು ಸಚಿವರು ಎಚ್ಚರಿಸಿದರು.

‘ನಗರೋತ್ಥಾನ ಕಾಮಗಾರಿ ಕಳಪೆಯಾಗಿರುವುದರ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಸದಸ್ಯರು ಸಚಿವರ ಗಮನ ಸೆಳೆದರು.

ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ‘ಕಳಪೆ ಕಾಮಗಾರಿಗೆ ಸಂಬಂಧಿಸಿದವರಿಗೆ ಸಂಬಂಧಿಸಿದವರಿಗೆ ತುರ್ತು ನೋಟೀಸ್ ನೀಡಿ. ಅಗತ್ಯ ಬಿದ್ದರೆ ಮರು ಟೆಂಡರ್ ಕರೆಯಲು ಮುಂದಾಗಿ. ಅಭಿವೃದ್ದಿ ಕಾರ್ಯಗಳು ಕಳಪೆಯಾಗುವುದಕ್ಕೆ ಆಸ್ಪದ ನೀಡದೇ, ಸಂಬಂಧಿಸಿದ ಮಾಹಿತಿಯನ್ನು ನನಗೂ ಸಲ್ಲಿಸಿರಿ’ ಎಂದು ತಾಕೀತು ಮಾಡಿದರು.

ಪರಿಸರ ಅಭಿಯಂತರ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲ. ನನಗೆ ಬಂದಿರುವ ಮಾಹಿತಿಯಂತೆ ಅವರು ತುಂಬಾ ಸುಧಾರಿಸಿಕೊಂಡು ಕೆಲಸ ಮಾಡಬೇಕು ಇಲ್ಲವೇ ಮುಂದಿನ ಕ್ರಮಕ್ಕೆ ಸಿದ್ದರಾಗಿರಬೇಕು ಎಂದು ಸಚಿವ ತಂಗಡಗಿ ಹೇಳಿದರಲ್ಲದೇ, ಅಧಿಕಾರಿಗಳು ನಿಮ್ಮೆಲ್ಲಾ ಜವಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ದೂರುಗಳು ಬಾರದಂತೆ ನೋಡಿಕೊಳ್ಳಿ ಎಂದರು.

ಪಟ್ಟಣದ ಕನಕದಾಸ ವೃತ್ತದಲ್ಲಿ ಕನಕದಾಸರ ಪ್ರತಿಮೆ ಅಳವಡಿಸುವುದು, ಹಲವು ರಸ್ತೆಗಳಿಗೆ ಮಹನೀಯರ ನಾಮಕರಣ, ಫಾಗಿಂಗ್ ಯಂತ್ರಗಳ ಖರೀದಿ, ಸಿಬ್ಬಂದಿ ನೇಮಕಾತಿ ಸಹಿತ ಇತರ ವಿಷಯಗಳ ಬಗ್ಗೆ ಚರ್ಚಿಸಿ, ಸದಸ್ಯರ ಒಪ್ಪಿಗೆ ಪಡೆದುಕೊಳ್ಳಲಾಯಿತು.

ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ, ಎಲ್ಲಾ ವಾರ್ಡ್ಗಳ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.