ಕಾರಟಗಿ: ‘ಬಳ್ಳಾರಿ ಮತ್ತಿತರೆಡೆ ಭಾರಿ ಸಂಭ್ರಮದೊಂದಿಗೆ ನಡೆಯುವ ಕೊಂತೆ ಗೌರಮ್ಮ ಉತ್ಸವ ಇದೇ ಮೊದಲ ಬಾರಿಗೆ ಪಟ್ಟಣದಲ್ಲಿ ನಡೆಯಿತು. ತರಹೇವಾರಿ ಭೋಜನ ಸವಿಯುವ ಹಬ್ಬದ ಸಡಗರ ಎಲ್ಲೆಡೆಯೂ ಹರಡಲಿ’ ಎಂಬ ಸಂದೇಶವನ್ನು ಡಾಲರ್ಸ್ ಕಾಲೊನಿ ಖ್ಯಾತಿಯ ವಸುಂಧರಾ ನಗರದ ನಾಗರಿಕರು, ಮಹಿಳೆಯರು ಸಾರಿದರು.

ಭಾನುವಾರ ಸಂಭ್ರಮದೊಂದಿಗೆ ಕೊಂತೆ ಗೌರಮ್ಮ ಉತ್ಸವ ನಡೆದು ಗಮನ ಸೆಳೆಯಿತು. ಇದಕ್ಕಾಗಿಯೇ ವಸುದೈವ ಕುಟುಂಬ ಸೇವಾ ಟ್ರಸ್ಟ್ ರಚನೆಗೊಂಡು ಅದರ ನೇತೃತ್ವದಲ್ಲೇ ಎಲ್ಲಾ ಸಂಭ್ರಮದ ಕಾರ್ಯಕ್ರಮಗಳು ನಡೆದವು. ಬೆಳದಿಂಗಳಲ್ಲೇ ಕೊಂತೆ ಗೌರಮ್ಮ ದೇವಿಗೆ ಮಹಿಳೆಯರು ಸಕ್ಕರೆ ಆರತಿ ಬೆಳಗಿದರೆ, ಮಕ್ಕಳು, ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಸುಂಧರಾ ನಗರದ ನಿವಾಸಿಗಳೆಲ್ಲರೂ ಹಾಡು, ಹರಟೆ, ನೃತ್ಯ ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಲ್ಲೀನರಾಗಿ ಹಳೆಯ ನೆನಪುಗಳನ್ನೆಲ್ಲಾ ಮೆಲುಕು ಹಾಕಿದರು. ಸೂರ್ಯಾಸ್ತದ ಸುಂದರ ಕ್ಷಣಗಳನ್ನು ಸವಿದ ಮಹಿಳೆಯರು, ನಾಗರಿಕರು, ಮಕ್ಕಳು ಕೊಂತೆ ಗೌರಮ್ಮದೇವಿ ಮೂರ್ತಿಗೆ ಕಳಸ ಬೆಳಗಿ ಒಂದೆಡೆಯೇ ಕುಳಿತು ಭೋಜನ ಸವಿದರು.

ಪುರಸಭೆ ಸದಸ್ಯ ಹಿರೇಬಸಪ್ಪ ಸಜ್ಜನ್, ಟ್ರಸ್ಟ್ ಅಧ್ಯಕ್ಷ ಎನ್. ಕಾಳಿಂಗಪ್ಪ, ಪದಾಧಿಕಾರಿಗಳಾದ ಕಲ್ಲಪ್ಪ ಅಂಗಡಿ, ದೇವಿಪ್ರಸಾದ, ಶರಣಬಸವ ಹೂಗಾರ, ಎಚ್.ಎಂ. ಶಿವಕುಮಾರ, ಶರಣಬಸವ ಪಗಡದಿನ್ನಿ, ರಘುರಾಮ್ ಎನ್, ಪ್ರಮುಖರಾದ ವಿಜಯಪಾಟೀಲ್, ಸೂರ್ಯರಾವ್ ಡಿ,ಪಿ. ಚಂದ್ರಕಾಂತ, ಹನುಮಂತಪ್ಪ, ವಿಶ್ವನಾಥರೆಡ್ಡಿ, ರಮೇಶ, ಶಂಕ್ರಮ್ಮ, ವಿಜಯಲಕ್ಷ್ಮಿ, ನಂದಿನಿ, ಶ್ರೀದೇವಿ, ಲತಾ, ಪೂಜಾ ಹಿಟ್ನಾಳ, ಯಶೋಧಸುನಂದಾ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

ಕೊಂತೆ ಗೌರಮ್ಮಳ ಬೆಂಳದಿಂಗಳ ಊಟವನ್ನು ವರ್ಷಕ್ಕೊಮ್ಮೆಯಾದರೂ ಸವಿದರೆ ಸಾರ್ಥಕ. ಈ ಸಂಪ್ರದಾಯ ನಮ್ಮ ಭಾಗದಲ್ಲೂ ಹರಡಲಿ ಎಂದೇ ಮೊದಲ ಬಾರಿಗೆ ಆಯೋಜಿಸಿದ್ದೇವೆ.
ಮಲ್ಲಿಕಾರ್ಜುನ ಕೊಟಗಿ, ಟ್ರಸ್ಟ್ ಗೌರವಾಧ್ಯಕ್ಷ

ಒಂದೆಡೆಯೇ ಎಲ್ಲರೂ ಬೆಳದಿಂಗಳ ಊಟದಂತಹ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಸಮಸ್ಯೆಗಳು ಮರೆಯಾಗುತ್ತವೆ. ಬೇರೆಡೆ ನಡೆಯುವ ಉತ್ಸವಕ್ಕೆ ನಮ್ಮ ಭಾಗದಲ್ಲಿ ಚಾಲನೆ ನೀಡಿ ಸಂಭ್ರಮಿಸಿದ್ದೇವೆ -
ಸಾವಿತ್ರಿ ಹಿರೇಬಸಪ್ಪ ಸಜ್ಜನ್, ವಸುಂಧರಾನಗರದ ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.