ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಕೊಪ್ಪಳ | ಬಲ್ದೋಟ ಉಕ್ಕಿನ ಕಾರ್ಖಾನೆ: ಸಂಘರ್ಷಕ್ಕೆ ತಿರುಗಿದ ಹೋರಾಟ

Published : 26 ಜುಲೈ 2025, 7:24 IST
Last Updated : 26 ಜುಲೈ 2025, 7:24 IST
ಫಾಲೋ ಮಾಡಿ
Comments
ಕೊಪ್ಪಳದ ಜಿಲ್ಲಾಸ್ಪತ್ರೆ ಆವರಣದಲ್ಲಿ ಭದ್ರತಾ ಸಿಬ್ಬಂದಿ ಹೋರಾಟಗಾರರು ನಡುವೆ ನಡೆದ ಜಟಾಪಟಿ
ಕೊಪ್ಪಳದ ಜಿಲ್ಲಾಸ್ಪತ್ರೆ ಆವರಣದಲ್ಲಿ ಭದ್ರತಾ ಸಿಬ್ಬಂದಿ ಹೋರಾಟಗಾರರು ನಡುವೆ ನಡೆದ ಜಟಾಪಟಿ
ನಮ್ಮ ಮೇಲೆ ಎಷ್ಟೇ ಪ್ರಕರಣ ದಾಖಲಿಸಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕೊಪ್ಪಳದಿಂದ ಬಲ್ಡೋಟಾ ಕಂಪನಿ ವಾಪಸ್ ಹೋಗುವ ತನಕ ಹೋರಾಟ ನಿರಂತರ.
ಅಲ್ಲಮಪ್ರಭು ಬೆಟ್ಟದೂರು ಹೋರಾಟಗಾರರು
9 ಜನ ಜನರ ವಿರುದ್ಧ ಎಫ್‌ಐಆರ್‌
ಕೊಪ್ಪಳ: ಮೂರು ದಿನಗಳ ಹಿಂದೆ ಬಲ್ಡೋಟಾ ಕಂಪನಿಯ ಆವರಣದಲ್ಲಿ ಜಾನುವಾರು ನುಗ್ಗಿಸಿದ ಕಾರಣಕ್ಕಾಗಿ ಒಂಬತ್ತು ಜನ ಹೋರಾಟಗಾರರ ಮೇಲೆ ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ. ಹೋರಾಟಗಾರರಾದ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹನುಮಂತಪ್ಪ ಕಲ್ಕೇರಿ ಮಂಗಳೇಶ್ ರಾಥೋಡ್‌ ಮುದುಕಪ್ಪ ಹೊಸಮನಿ ಕೆ.ಬಿ. ಗೋನಾಳ್‌ ಯಮನೂರಪ್ಪ ಪೂಜಾರ ಮಂಜುನಾಥ ಗೊಂಡಬಾಳ ಭೀಮೇಶ ಕಲಕೇರಿ ಮತ್ತು ಎ.ಗಫಾರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.  
ಮತ್ತೆ ದೂರು ಪ್ರತಿದೂರು ದಾಖಲು
ಕೊಪ್ಪಳ: ಬಲ್ಡೋಟಾ ಕಂಪನಿ ಮುಂಭಾಗದಲ್ಲಿ ಶುಕ್ರವಾರ ನಡೆದ ಗಲಾಟೆಗೆ ಸಂಬಂಧಿಸಿದಂತೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ. ಗಾಯಗೊಂಡ ಕುರಿಗಾಯಿ ನೀಡಿದ ದೂರಿನಲ್ಲಿ ‘ಕುರಿಗಳಿಗೆ ನೀರು ಕುಡಿಸಲು ಒಳಗಡೆ ಹೋಗಲು ಬಿಡದೆ ಬಲ್ಡೋಟಾ ಕಂಪನಿಯ ಭದ್ರತಾ ಸಿಬ್ಬಂದಿ ಸುರೇಶ ಬಾದಾಮಿ ಬಸವರಾಜ ಪಟ್ಟಣಶೆಟ್ಟಿ ವ್ಯವಸ್ಥಾಪಕ ಎಂ. ಮಹೇಶ ವಿಠ್ಠಲರಾಜ ಕಂಪನಿ ವ್ಯವಸ್ಥಾಪಕರಾದ ಪ್ರಭು ಪ್ರವೀಣ ಸೇರಿದಂತೆ 25 ಜನ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.  ಪ್ರತಿದೂರು ದಾಖಲಿಸಿರುವ ಕಂಪನಿಯ ಭದ್ರತಾ ಸಿಬ್ಬಂದಿ ‘ದನ ಹಾಗೂ ಕುರಿಗಳನ್ನು ಬಲವಂತವಾಗಿ ಕಂಪನಿಯ ಆವರಣದಲ್ಲಿ ನುಗ್ಗಿಸಿದ್ದನ್ನು ತಡೆಯಲು ಹೋದ ನಮ್ಮ ಸಿಬ್ಬಂದಿ ಮಂಜುನಾಥ ರೆಡ್ಡೇರ ಮೇಲೆ ಹಲ್ಲೆ ಮಾಡಲಾಗಿದೆ. ದೇವಪ್ಪ ಹಾಲಳ್ಳಿ ಮಲ್ಲಪ್ಪ ವೆಂಕಟೇಶ ಲಿಂಗದಳ್ಳಿ ಮತ್ತು ಇತರೆ 25 ಜನ ಅವಾಚ್ಯವಾಗಿ ಬೈಯ್ದು ಹೊಡೆದು ಜೀವಬೆದರಿಕೆ ಒಡ್ಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT