ಕೊಪ್ಪಳ: ವಿವಾಹವಾದರೂ ಒಂದುಗೂಡಿ ಬಾಳುವ ಗೊಡವೆಯೇ ಬೇಡವೆಂದು ಹತ್ತು ವರ್ಷಗಳಿಂದ ಪ್ರತ್ಯೇಕವಾಗಿ ಬದುಕಿದ್ದ ದಂಪತಿಯನ್ನು ಜಿಲ್ಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಒಂದು ಮಾಡಲಾಯಿತು.

ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಒಟ್ಟು ಹತ್ತು ದಂಪತಿ ಮನಸ್ತಾಪ ಬಿಟ್ಟು ಮಧ್ಯಸ್ಥಿಕೆದಾರರು, ವಕೀಲರು ಹಾಗೂ ನ್ಯಾಯಾಧೀಶರ ಮಾರ್ಗದರ್ಶನದಿಂದ ಒಟ್ಟಿಗೆ ಬಾಳು ನಡೆಸಲು ಒಪ್ಪಿಕೊಂಡರು. ಅದರಲ್ಲಿ ದಶಕದ ಬಳಿಕ ’ಒಲವೇ ನಮ್ಮ ಬದುಕು’ ಎಂದು ಅಪ್ಪಿಕೊಂಡ ಜೋಡಿ ಗಮನ ಸೆಳೆಯಿತು.

6764 ಪ್ರಕರಣಗಳು ಪರಿಹಾರ: ವಿಮೆ. ನೀರಿನ ಶುಲ್ಕ ಬಾಕಿ, ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್ ಪ್ರಕರಣಗಳು, ಜನನ ಮರಣ, ಸಿವಿಲ್, ಕ್ರಿಮಿನಲ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತ, ಎಂಎಂಆರ್ಡಿ ಪ್ರಕರಣಗಳು ಸೇರಿದಂತೆ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿದ್ದ ಒಟ್ಟು 8,613 ಪ್ರಕರಣಗಳ ಪೈಕಿ 6,764 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು. ಒಂದೇ ಬಾರಿಗೆ ಇಷ್ಟೊಂದು ಪ್ರಕರಣಗಳನ್ನು ಇಲ್ಲಿ ಪರಿಹರಿಸಿದ್ದು ಗರಿಷ್ಠ.

ವಿಮೆ, ನೀರಿನ ಕರ, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ಪ್ರಕರಣಗಳು ಸೇರಿ ಪೂರ್ವದಾವೆಯ 79,305 ಪ್ರಕರಣಗಳ ಪೈಕಿ 72,591 ಪ್ರಕರಣಗಳನ್ನು ಪರಿಹರಿಸಲಾಗಿದ್ದು, ಇದರ ಒಟ್ಟು ಮೌಲ್ಯ ₹13.52 ಕೋಟಿ. ಒಂದೇ ದಿನದಲ್ಲಿ ಒಟ್ಟು 87,918 ಪ್ರಕರಣಗಳ ಪೈಕಿ 79,355 ಪ್ರಕರಣ ಪರಿಹಾರವಾಗಿವೆ. ಇವುಗಳ ಮೌಲ್ಯ ₹93.98 ಕೋಟಿಯಾಗಿದೆ.