ಗುರುವಾರ , ಮೇ 19, 2022
21 °C
ತಾಲ್ಲೂಕಿನಾದ್ಯಂತ ಮಾಸ್ಕ್ ದಿನಾಚರಣೆ

ಕೋವಿಡ್ ಜಾಗೃತಿ ಜಾಥಾ: ಮಾರ್ಗಸೂಚಿ ಪಾಲಿಸೋಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಕನೂರು: ‘ಕೋವಿಡ್ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಚರಿಸುತ್ತಿರುವ ಮಾಸ್ಕ್ ದಿನಾಚರಣೆಯು ಬದಲಾದ ಕಾಲಮಾನದ ಮತ್ತು ಅವಶ್ಯಕತೆಯ ಸಂಕೇತ. ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೊರೊನಾ ತಡೆಯೋಣ’ ಎಂದು ಪಟ್ಟಣ ಪಂಚಾಯಿತಿ ಸಿಬ್ಬಂದಿ ಬಸಯ್ಯ ಪೊಲೀಸ್ ಪಾಟೀಲ ಹೇಳಿದರು.

ಪಟ್ಟಣ ಪಂಚಾಯಿತಿ ವತಿಯಿಂದ ಶುಕ್ರವಾರ ಇಲ್ಲಿ ನಡೆದ ಮಾಸ್ಕ್ ದಿನಾಚರಣೆಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನರು ಎಲ್ಲೆಂದರಲ್ಲಿ, ಕಟ್ಟೆಗಳ ಮೇಲೆ ಗುಂಪಾಗಿ ಕುಳಿತು ಚರ್ಚಿಸುವುದು, ಒಟ್ಟಾಗಿ ಕುಳಿತುಕೊಳ್ಳುವುದು ಮಾಡುತ್ತಿದ್ದಾರೆ. ಈ ರೀತಿ ನಡೆದುಕೊಳ್ಳುವುದು ಅವರ ಜೀವಕ್ಕೆ ಅಪಾಯ ಎನ್ನುವ ಸಂದೇಶವನ್ನು ಅವರಿಗೆ ತಲುಪಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಜೀವನ ನಿರ್ವಹಿಸಬೇಕು ಎಂದು ತಿಳಿಸಬೇಕು ಎಂದರು.

ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡು, ಆಗಾಗ್ಗೆ ಕೈತೊಳೆದುಕೊಳ್ಳುವ ಮೂಲಕ ಕೊರೊನಾ ಸೋಂಕಿನ ವಿರುದ್ಧ ಜಯ ಸಾಧಿಸಬಹುದು ಎನ್ನುವ ಸಂದೇಶವನ್ನು ತಲುಪಿಸುವುದೇ ಮಾಸ್ಕ್ ದಿನಾಚರಣೆಯ ಉದ್ದೇಶ ಎಂದು ತಿಳಿಸಿದರು.

ಪ್ರಕಾಶ್ ಬಂಡಿ , ಶ್ರೀಕಾಂತ್ ಬಾರಿಗಿಡದ, ವೇದಾವತಿ, ಎಂ.ಡಿ ರಾಜೇಶ್ವರಿ ಜಗದೀಶ ಚಲವಾದಿ, ಮಂಜುನಾಥ್ ಪೊಲೀಸ್ ಪಾಟೀಲ, ಮನೋಹರ ಹಾಗೂ ಪೌರ ಕಾರ್ಮಿಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು