ಗಂಗಾವತಿ: ತಾಲ್ಲೂಕಿನ ಹೊಸ್ಕೇರಾ ಗ್ರಾಮದ ಆಂಜನೇಯ ದೇವಸ್ಥಾಳ ಸಮೀಪ ಹಾಗೂ ಕೊಟಯ್ಯ ಕ್ಯಾಂಪ್ನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ದುಡಿಯೋಣ ಬಾ ಹಾಗೂ ಸ್ತ್ರೀ ಚೇತನ ಅಭಿಯಾನ ನಡೆಸಿ ಶುಕ್ರವಾರ ಕೂಲಿಕಾರರಿಗೆ ನರೇಗಾ ಜಾಗೃತಿ ಕರಪತ್ರ ವಿತರಿಸಲಾಯಿತು.

ತಾ.ಪಂ.ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ ಮಾತನಾಡಿ, ಬೇಸಿಗೆಯಾದ್ದರಿಂದ ದುಡಿಯೋಣ ಬಾ ಅಭಿಯಾನ ಶುರುವಾಗಿದ್ದು, ಕೂಲಿಕಾರರಿಗೆ ನಿರಂತರ ಕೆಲಸ ನೀಡಲಾಗುತ್ತಿದೆ. ಜತೆಗೆ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ ಕೈಗೊಳ್ಳಲಾಗಿದೆ. ಎಲ್ಲರೂ ಈ ಅಭಿಯಾನಗಳ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು.ಗ್ರಾಮ ಪಂಚಾಯಿತಿ ಸಿಬ್ಬಂದಿ ದಿನಕ್ಕೆ ಎರಡು ಬಾರಿ ಎನ್ಎಂಎಂಎಸ್ ಹಾಜರಿ ಕಡ್ಡಾಯ ಮತ್ತು ಪಾರದರ್ಶಕವಾಗಿ ಹಾಕಬೇಕು. ಸಾರ್ವಜನಿಕರ ಕುಂದುಕೊರತೆಗಾಗಿ ಏಕೀಕೃತ ಸಹಾಯವಾಣಿ ಸಂಖ್ಯೆ 82775 06000 ಗೆ ಕರೆ ಮಾಡಬಹುದು ಎಂದರು.

ತಾಂತ್ರಿಕ ಸಹಾಯಕ ಶರಣಯ್ಯ, ಗ್ರಾ.ಪಂ. ಕಾರ್ಯದರ್ಶಿ ವಿರುಪಾಕ್ಷಯ್ಯಸ್ವಾಮಿ,ಎನ್ಆರ್ಎಲ್ಎಂ ಸಂಜೀವಿನಿ ಯೋಜನೆ ಕೃಷಿ ತಾಲ್ಲೂಕು ವ್ಯವಸ್ಥಾಪಕ ಮುದ್ದಾನೇಶ, ನರೇಗಾ ಡಿಇಒ ಹನುಮೇಶ, ಗ್ರಾ.ಪಂ ಸಿಬ್ಬಂದಿ ದೊಡ್ಡಬಸವ, ಲಕ್ಷ್ಮಣ, ಮಲ್ಲಿಕಾರ್ಜುನ, ಬಿಎಫ್ ಟಿ ಮಂಜುನಾಥ, ವಿಆರ್ಡಬ್ಲ್ಯೂ ಮಂಜುನಾಥ, ಕಾಯಕ ಮಿತ್ರರಾದ ಮಲ್ಲಮ್ಮ, ಎಂಬಿಕೆ ದ್ರಾಕ್ಷಾಯಣಿ, ಎಲ್ಸಿಆರ್ಪಿಗಳಾದ ಅನಿತಾ, ಅನಂತ ಲಕ್ಷ್ಮಿ, ಪಶುಸಖಿ ಜ್ಯೋತಿ ಸೇರಿ ಸ್ವಸಹಾಯ ಸಂಘದ ಮಹಿಳೆಯರು, ಕೂಲಿಕಾರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.