ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಿಜೆಪಿ ಗೆದ್ದರೆ ಪ್ರತಿ ಊರಲ್ಲೂ ಮೋದಿ ದೇವಾಲಯ’

ಸಚಿವ ಶಿವರಾಜ ತಂಗಡಗಿ ವ್ಯಂಗ್ಯ
Published 26 ಮೇ 2024, 3:19 IST
Last Updated 26 ಮೇ 2024, 3:19 IST
ಅಕ್ಷರ ಗಾತ್ರ

ಕಾರಟಗಿ: ಪ್ರಧಾನಿ ನರೇಂದ್ರ ಮೋದಿ ತಾವೇ ದೇವರು ಎಂಬ ಭ್ರಮೆಯಲ್ಲಿದ್ದಾರೆ. ಮತ್ತೇ ಅವರು ಅಧಿಕಾರಕ್ಕೆ ಬರುವುದಿಲ್ಲ. ಬಂದರೆ ಪ್ರತಿ ಗ್ರಾಮಗಳಲ್ಲೂ ಮೋದಿ ದೇವಾಲಯಗಳು ನಿರ್ಮಾಣವಾದರೂ ಆಶ್ಚರ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ವಿಧಾನ‌ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಯ ನಿಮಿತ್ತ ಶನಿವಾರ ನಡೆದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೋದಿ ತಾವೇ ದೇವರು, ಪ್ರತಿಷ್ಠಿತ ದೇವರುಗಳ ಭಕ್ತರು ಎಂಬ ಹುಚ್ಚಿನಲ್ಲಿದ್ದಾರೆ. ಬಿಜೆಪಿ ಜನಪ್ರತಿನಿಧಿಗಳು ಮೋದಿ ದೇವಾಲಯ ನಿರ್ಮಿಸಿ, ಜಪ, ತಪದಲ್ಲಿ ಮಗ್ನರಾಗಿರಬೇಕಾಗುತ್ತದೆ. ಅಂದರೆ ಜನಪ್ರತಿನಿಧಿಗಳಿಗೆ ಬೆಲೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ ಎಂದು ಹೇಳಿದರು.

‘ನವಲಿ ಬಳಿಯ ಸಮನಾಂತರ ಜಲಾಶಯ ನಿರ್ಮಾಣವು ಆಂಧ್ರ, ತೆಲಂಗಾಣ, ಕರ್ನಾಟಕದ ನಡುವಿನ ವಿಷಯ. ಬರೀ ಬಜೆಟ್‌ನಲ್ಲಿ ಅನುದಾನ ಘೋಷಿಸಿದರೆ ಸಾಲದು. ಕಾರ್ಯರೂಪಕ್ಕೆ ಬರಲು ಮೊದಲು ನಡೆಸಬೇಕಾದ ಕಾರ್ಯವೇ ನಡೆದಿಲ್ಲ. ಹಿಂದಿನ ಶಾಸಕರಿಗೆ ಇದರ ಬಗ್ಗೆ ಕಾಳಜಿಯೇ ಇರಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 18 ರಿಂದ 20 ಸ್ಥಾನದಲ್ಲಿ ಕಾಂಗ್ರೆಸ್‌ ಗೆಲ್ಲುವುದು ಖಚಿತ. ಕನಕಗಿರಿ, ಕಾರಟಗಿ ಭಾಗಕ್ಕೆ ದಿನದ 24 ಗಂಟೆಯೂ ನದಿಯ ಸಂಪರ್ಕದ ಮಾರ್ಗದಿಂದ ನೀರು ಪೂರೈಸುವ ಯೋಜನೆಗೆ ಶೀಘ್ರವೇ ಚಾಲನೆ ದೊರೆಯಲಿದೆ’ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT