ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಹಾ ಪ್ರಕರಣ: ತನಿಖೆಗೆ ಮೊದಲೇ ಆರೋಪಿಗಳಿಗೆ ಸಿಎಂ ಕ್ಲೀನ್‌ಚಿಟ್: ಶಾಸಕ ದೊಡ್ಡನಗೌಡ

Published 20 ಏಪ್ರಿಲ್ 2024, 15:53 IST
Last Updated 20 ಏಪ್ರಿಲ್ 2024, 15:53 IST
ಅಕ್ಷರ ಗಾತ್ರ

ಕುಷ್ಟಗಿ: ‘ತನಿಖೆಗೂ ಮೊದಲೇ ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಆರೋಪಿಗಳಿಗೆ ಕ್ಲೀನ್‌ ಚಿಟ್‌ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಪರಮೇಶ್ವರ ಅವರು ಅಪರಾಧ ಎಸಗುವ ಮನೋಭಾವದರಲ್ಲಿ ಮತ್ತಷ್ಟು ಧೈರ್ಯ ಹೆಚ್ಚಿಸುವಂಥ ಕೆಲಸ ಮಾಡುತ್ತಿದ್ದಾರೆ’ ಎಂದು ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಬಿಜೆಪಿ ಖಂಡಿಸುತ್ತಿದೆ. ಯಾವುದೇ ಪಕ್ಷಗಳು ಇಂಥ ಸೂಕ್ಷ್ಮ ಪ್ರಕರಣಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು, ಜಾತಿ ಆಧಾರದ ಮೇಲೆ ನಿಂದಿಸುವುದು ತಪ್ಪು. ಆದರೆ ಮುಖ್ಯಮಂತ್ರಿ, ಗೃಹಸಚಿವರು ಕೊಲೆಗೆ ವೈಯಕ್ತಿಕ ಕಾರಣ ಎಂಬ ನಿಲುವಿಗೆ ಬಂದು ತನಿಖೆಯ ದಿಕ್ಕನ್ನು ತಪ್ಪಿಸಲು ಯತ್ನಿಸಿರುವುದು ಸ್ಪಷ್ಟವಾಗಿದೆ’ ಎಂದರು.

ಖಂಡನೆ: ಕಲಂ 371 (ಜೆ) ಮೀಸಲಾತಿ ಕುರಿತು ಸಚಿವ ಎಚ್‌.ಕೆ.ಪಾಟೀಲ ಪತ್ರ ಬರೆದಿದ್ದನ್ನು ಖಂಡಿಸಿದ ಶಾಸಕ ದೊಡ್ಡನಗೌಡ, ಈ ಭಾಗದ ಜನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಂವಿಧಾನಾತ್ಮಕ ಅವಕಾಶ ದೊರಕಿಸಿಕೊಡುವುದನ್ನು ಸಚಿವ ಪಾಟೀಲ ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದು ಈ ವಿಷಯದಲ್ಲಿ ಪ್ರಬಲ ಹೋರಾಟ ನಡೆಯಬೇಕಿದೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT