ಯಲಬುರ್ಗಾ: (ಕೊಪ್ಪಳ ಜಿಲ್ಲೆ): ಸಮೀಪದ ಗುನ್ನಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತಿನೊಂದಿಗೆ ಹೊಲಕ್ಕೆ ತೆರಳುತ್ತಿದ್ದ ಇಬ್ಬರು ರೈತರು ಹಾಗೂ ಎತ್ತಿನ ಮೇಲೆ ಓಮಿನಿ ವಾಹನ ಹರಿದು ಸ್ಥಳದಲ್ಲಿಯೇ ಮೃತರಾಗಿದ್ದಾರೆ.

ಕೃಷಿ ಕಾರ್ಯಕ್ಕೆ ಹೊಲಕ್ಕೆ ತೆರಳುತ್ತಿದ್ದಾಗ ವಿಜಯಪುರದಿಂದ ವೇಗವಾಗಿ ಬರುತ್ತಿದ್ದ ಓಮಿನಿ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತರಾಗಿದ್ದು, ಗಾಯಗೊಂಡಿದ್ದ ಎತ್ತು ಕೂಡಾ ಮೃತವಾಗಿದೆ.

ಮೃತ ರೈತರನ್ನು ಗುನ್ನಾಳ ಗ್ರಾಮದ ರಾಮಣ್ಣ ಬಸಪ್ಪ ಸೂಳೇಕೇರಿ (45) ಹಾಗೂ ಹೊಳೆಯಪ್ಪ ಹನಮಂತಪ್ಪ ತಳವಾರ (50) ಎಂದು ಗುರುತಿಸಲಾಗಿದೆ.

ಕೋಳಿಹಾಳ-ಗುನ್ನಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ರಸ್ತೆ ಮಧ್ಯೆ ದಾಟುತ್ತಿರುವ ಸಂದರ್ಭದಲ್ಲಿ ರಸ್ತೆ ಮಧ್ಯೆ ಹೋಗುತ್ತಿದ್ದ ಸ ಸಂದರ್ಭದಲ್ಲಿ ವಿಜಯಪುರದಿಂದ ಕೋಲಾರ ಜಿಲ್ಲೆಯ ಮುಳುಬಾಗಿಲಿಗೆ ಹೋಗುತ್ತಿದ್ದ ವಾಹನ ಡಿಕ್ಕಿ ಹೊಡೆದಿದೆ.

ಸ್ಥಳಕ್ಕೆ ಡಿವೈಎಸ್ಪಿ ಗೀತಾ ಬೇನಾಳ, ಸಿಪಿಐ ಎಂ.ನಾಗರೆಡ್ಡಿ, ಪಿಎಸ್ಐ ಶೀಲಾ ಮೂಗನೂರ ಭೇಟಿ ನೀಡಿ ಪರಿಶೀಲಿಸಿದರು.

ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೇವೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.