ಕೊಪ್ಪಳ: ‘ಕೊಳವೆ ಮಾರ್ಗದ ಮೂಲಕ ಮನೆ ಮನೆಗೆ ನೈಸರ್ಗಿಕ ಅಡುಗೆ ಅನಿಲ (ಪಿಎನ್ಜಿ) ಪೂರೈಸುವ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡುವ ಕೆಲಸ ಕೊನೆಯ ಹಂತದಲ್ಲಿದ್ದು, ಇದೇ ವರ್ಷದ ಡಿಸೆಂಬರ್ನಲ್ಲಿ 1,500 ಮನೆಗಳಿಗೆ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ’ ಎಂದು ಗುತ್ತಿಗೆ ಪಡೆದಿರುವ ಎಜಿ ಅಂಡ್ ಪಿ ಥಿಂಕ್ ಗ್ಯಾಸ್ ಕಂಪನಿ ತಿಳಿಸಿದೆ.

ಕಂಪನಿಯ ವಿಭಾಗೀಯ ಮುಖ್ಯಸ್ಥ ಜಗದೀಶ್ ಪುರ್ಲಿ ಬುಧವಾರ ಮಾಧ್ಯಮದವರಿಗೆ ಈ ಕುರಿತು ಮಾಹಿತಿ ನೀಡಿ,‘ಕೊಪ್ಪಳ ಜಿಲ್ಲೆಗೆ ಪಿಎನ್ಜಿ ಸಂಪರ್ಕ ಕಲ್ಪಿಸಲು 2022ರಿಂದ ಕೆಲಸ ಮಾಡಲಾಗುತ್ತಿದೆ. ಕೊಪ್ಪಳದ ಬಿ.ಟಿ.ಪಾಟೀಲ ನಗರ ಮತ್ತು ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಮತ್ತು ವಡ್ಡರಹಟ್ಟಿ ಕ್ಯಾಂಪ್ಗಳಲ್ಲಿ ಮೊದಲ ಹಂತದಲ್ಲಿ ಸಂಪರ್ಕ ಕಲ್ಪಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಐದು ಸಾವಿರ ಮನೆಗಳನ್ನು ತಲುಪುವ ಗುರಿಯಿದೆ’ ಎಂದರು.

‘ಸದ್ಯ ಬಳಸುತ್ತಿರುವ ಎಲ್ಪಿಜಿಗಿಂತಲೂ ಕಡಿಮೆ ದರದಲ್ಲಿ ಪಿಎನ್ಜಿ ಸೌಲಭ್ಯ ಲಭಿಸುತ್ತದೆ. ಇದರಿಂದ ಸಿಲಿಂಡರ್ ಮುಂಗಡವಾಗಿ ನೋಂದಣಿ ಮಾಡುವುದು, ಬರುವ ತನಕ ಕಾಯುವ ಅಗತ್ಯವಿಲ್ಲ. ಎಲ್ಪಿಜಿ ಮುಗಿದು ಹೋಗುತ್ತದೆ ಎನ್ನುವ ಆತಂಕ ಇಲ್ಲ. ಕೊಳವೆ ಮಾರ್ಗದ ಮೂಲಕ ಸರಬರಾಜು ಆಗುವ ಕಾರಣ ಅನಿಯಮಿತವಾಗಿ ಬಳಕೆ ಮಾಡಬಹುದು. ಮೊಬೈಲ್ನಲ್ಲಿಯೇ ಬಿಲ್ ಪಾವತಿಗೆ ಅವಕಾಶ, ವಸತಿ ಸಮಚ್ಛಯದಲ್ಲಿದ್ದರೆ ಎಲ್ಲಾ ಮನೆಗಳಿಗೂ ಪ್ರತ್ಯೇಕ ಮೀಟರ್ ಅಳವಡಿಕೆ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಸಾಕಷ್ಟು ಕಾರ್ಖಾನೆಗಳು ಇದ್ದು, ಅವುಗಳ ಮಾಲಿನ್ಯ ಜಾಸ್ತಿಯಾಗುತ್ತಿದೆ. ಪರಿಸರ ಸ್ನೇಹಿಯಾದ ಪಿಎನ್ಜಿ ಬಳಕೆ ಮಾಡಿದರೆ ಮಾಲಿನ್ಯದ ಪ್ರಮಾಣ ಕಡಿಮೆಯಾಗಲು ಅನುಕೂಲವಾಗುತ್ತದೆ. ಈಗಾಗಲೇ ಎರಡು ಕಾರ್ಖಾನೆಗಳಿಗೆ ಅಳವಡಿಸಲಾಗಿದೆ’ ಎಂದರು.

ಕಂಪನಿಯ ಪ್ರತಿನಿಧಿಗಳಾದ ಪ್ರಶಾಂತ್ ಚೌಗುಲೆ, ಸುಮಿತ್ ದತ್ ಹಾಗೂ ದತ್ತಾತ್ರೇಯ ಇದ್ದರು.

ರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದ್ದರಿಂದ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸೋಮವಾರ ಇಲ್ಲಿ ನೈಸರ್ಗಿಕ ಅನಿಲ ಸರಬರಾಜು ಪ್ರಸ್ತುತಿ ಕಾರ್ಯಕ್ರಮ ಜರುಗಿತು. ಎಲ್ಲಾ ವಾರ್ಡ್ಗಳ ಸದಸ್ಯರ ಅಭಿಪ್ರಾಯದ ಬಳಿಕ ಮಾತನಾಡಿದ ವಿಕಾಸ್ ಕಿಶೋರ್ ‘ಕಾಮಗಾರಿ ನಡೆಸುವ ಬಡಾವಣೆಯಲ್ಲಿ ಸೂಚನಾ ಫಲಕ, ಕೆಲಸ ಮಾಡುತ್ತಿರುವವರ ಹೆಸರು, ತುರ್ತು ಸಂಪರ್ಕಕ್ಕೆ ದೂರವಾಣಿ ಸಂಖ್ಯೆಯ ಮಾಹಿತಿ ನೀಡಬೇಕು. ಅವಘಡ ಸಂಭವಿಸಿ ಜೀವಕ್ಕೆ ಹಾನಿಯಾದರೆ ವಿಮೆ ಲಭಿಸುತ್ತದೆಯೇ ಎನ್ನುವ ಮಾಹಿತಿ ಕೊಡಬೇಕು‘ ಎಂದರು. ಇದಕ್ಕೂ ಮೊದಲು 11ನೇ ವಾರ್ಡ್ ಸದಸ್ಯ ಆಡೂರು ರಾಜಶೇಖರಗೌಡ ಮರೇಗೌಡ ‘ಕೊಳವೆ ಅಳವಡಿಸಲು ತೆಗ್ಗು ತೋಡಿದ ಜಾಗದಲ್ಲಿ ನಿಯಮದಿಂದ 25 ದಿನಗಳ ಒಳಗೆ ತೆಗ್ಗು ಮುಚ್ಚಬೇಕು‘ ಎಂದು ಆಗ್ರಹಿಸಿದರು. 15ನೇ ವಾರ್ಡ್ ಸದಸ್ಯ ಚೆನ್ನಬಸಪ್ಪ ಕೋಟ್ಯಾಳ ‘ಒಎಫ್ಸಿಯನ್ನು ಭೂಮಿಯಲ್ಲಿ 1.6 ಮೀಟರ್ ಆಳದಲ್ಲಿ ಹಾಕುತ್ತಾರೆ. ಆದರೆ, ಅಪಾಯಕಾರಿ ಪಿಎನ್ಜಿಯನ್ನು 1 ಮೀಟರ್ ಆಳದಲ್ಲಿ ಮಾತ್ರ ಹಾಕುತ್ತಿದ್ದಾರೆ. ಇದು ವೈಜ್ಞಾನಿಕವೇ‘ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.