ಗಂಗಾವತಿ: ಹೊಸವರ್ಷ ಆಚರಣೆಗೆ ಕೊಪ್ಪಳ ತಾಲ್ಲೂಕಿನ ಬಸಾಪುರ, ಹರ್ಲಾಪುರ, ಗಂಗಾವತಿ ತಾಲ್ಲೂಕಿನ ತಿರುಮಲಾಪುರ, ಸಾಣಾಪುರ, ಹನುಮನಹಳ್ಳಿ, ಜಂಗ್ಲಿ ಭಾಗದ ರೆಸಾರ್ಟ್ಗಳು ಪ್ರವಾಸಿಗರಿಗಾಗಿ ಡಿಜೆ ಪಾರ್ಟಿ, ರೇವ್ ಪಾರ್ಟಿ ಸೇರಿ ವಿವಿಧ ರೀತಿಯ ಮೋಜು-ಮಸ್ತಿ ಕಾರ್ಯಕ್ರಮಗಳು ರೂಪಿಸಿ, ಸಂಭ್ರಮಾಚರಣೆಗೆ ಸಜ್ಜಾಗಿವೆ.

ವಿರುಪಾಪುರಗಡ್ಡೆಯಲ್ಲಿನ ಅಕ್ರಮ ರೆಸಾರ್ಟ್ಗಳ ತೆರವಿನ ನಂತರ, ಈ ಸಂಪ್ರದಾಯ ಸಾಣಾಪುರ ಗ್ರಾಮಕ್ಕೆ ಕಾಲಿಟ್ಟಿದ್ದವು. ಇಲ್ಲಿ ತೆರವುಗೊಳಿಸಿದ ನಂತರ ರೆಸಾರ್ಟ್ ನಿರ್ಮಾಣ ಕಾರ್ಯ ಬಸಾಪುರ ಭಾಗದ ಕಂದಾಯ ಭೂಮಿಗಳಿಗೆ ಲಗ್ಗೆಯಿಟ್ಟು, 100ಕ್ಕೂ ಹೆಚ್ಚು ರೆಸಾರ್ಟ್ಗಳು ನಿರ್ಮಾಣವಾಗಿ, ವ್ಯಾಪಾರ ವಹಿವಾಟು ನಡೆಸುತ್ತಿವೆ.

ಮಾಲೀಕರು ರೆಸಾರ್ಟ್ ವ್ಯಾಪಾರವನ್ನೇ ದಂಧೆಯಾಗಿ ಮಾಡಿಕೊಂಡು, ರೆಸಾರ್ಟ್ಗಳಿಗೆ ಆಗಮಿಸುವ ಪ್ರವಾಸಿಗರಿಗೆ ರೂಮ್ ಬಾಡಿಗೆ, ವೀಕೆಂಡ್ ಪಾರ್ಟಿ, ಪ್ರಿವೆಡ್ಡಿಂಗ್ ಶೂಟ್, ಉಪಹಾರ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಅಧಿಕ ಹಣ ವಸೂಲಿ ಮಾಡಲಾಗುತ್ತದೆ. ಇಲ್ಲಿ ಕೆಲ ಚಟುವಟಿಕೆಗಳು ಕಾನೂನು ಬಾಹಿರವಾಗಿ ನಡೆಯುತ್ತಿದ್ದು, ಅದನ್ನು ತಡೆಯಬೇಕಾದ ಅಧಿಕಾರಿಗಳು ಜಾಣ ಕುರುಡುತನ ತೋರುತ್ತಿದ್ದಾರೆ.

ಸಿದ್ಧತೆ ಏನೇನು: ಹೊಸವರ್ಷ ಆಚರಣೆಗೆ ಪ್ರವಾಸಿಗರನ್ನು ಸೆಳೆಯಲು, ಕಳೆದ ಒಂದು ವಾರದಿಂದ ರೆಸಾರ್ಟ್ಗಳಲ್ಲಿ ಬೋನ್ ಫೈರ್, ಮದ್ಯ, ಡ್ಯಾನ್ಸ್ ಸ್ಟೇಜ್, ಬಫೆ ಸಿಸ್ಟಮ್, ಡಿಜೆ, ಮ್ಯೂಸಿಕ್ ಶೋ, ಲೈವ್ಬ್ಯಾಂಡ್, ವಿದ್ಯುತ್ ಅಲಂಕಾರ ಸೇರಿದಂತೆ ವಿವಿಧ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿಕೊಂಡು, ಆನ್ಲೈನ್ ಮೂಲಕ ಪ್ರವಾಸಿಗರಿಗೆ ಆಫರ್ ನೀಡಿ ಕಾರ್ಯಕ್ರಮಕ್ಕೆ ಬುಕ್ ಮಾಡಿಕೊಳ್ಳಲಾಗಿದೆ.

ಡಿಜೆ ಪಾರ್ಟಿಗೆ ಆಹ್ವಾನ: ಬಸಾಪುರ ಭಾಗದ ರೆಸಾರ್ಟ್ಗಳ ಕೆಲ ಮಾಲೀಕರು ಡಿ.31 ಸಂಜೆ 5.30 ರಿಂದ ಮಧ್ಯರಾತ್ರಿ 12.30ರವರೆಗೆ ಹಂಪಿ ಭಾಗದಲ್ಲೇ ಇದು ಅತ್ಯಂತ ದೊಡ್ಡ ಪಾರ್ಟಿ, ವೇದಿಕೆ ಪ್ರವೇಶಾತಿ ಒಬ್ಬರಿಗೆ ₹999, ಕಪಲ್ಸ್ಗೆ ₹1,799, ಸಸ್ಯಹಾರಿ ಮತ್ತು ಮಾಂಸಾಹಾರಿ ಊಟ ಫ್ರೀ ಎನ್ನುವ ಮಾಹಿತಿ ಒಳಗೊಂಡ ಫೋಟೋ ರಚಿಸಿ, ವಾಟ್ಸಾಪ್ಳಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಉಚಿತ ಪ್ರವೇಶವೆಂದು ಸಹ ಹಂಚಿಕೊಂಡಿದ್ದಾರೆ.

ಎಲ್ಲೆಲ್ಲಿಂದ ಪ್ರವಾಸಿಗರ ಆಗಮನ: ಸಾಣಾಪುರ, ಹಂಪಿ ಭಾಗದಲ್ಲಿ ಗಾಂಜಾ, ಸಿಂಥೆಟಿಕ್ ಸೇರಿದಂತೆ ನಶೆ ಏರಿಸುವ ಪದಾರ್ಥಗಳ ಮಾರಾಟ ಹೆಚ್ಚಿದ್ದು, ಹೊಸ ವರ್ಷದ ನೆಪದಲ್ಲಿ ಇವುಗಳ ಸೇವನೆಗೆ ಬೆಂಗಳೂರು, ಕೊಲ್ಕತ್ತಾ, ಚೆನ್ನೈ, ಹೈದರಾಬಾದ್, ದಿಲ್ಲಿ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಿಂದ ಐಟಿಬಿಟಿ ಯುವಕರು ಬಸಾಪುರ, ಸಾಣಾಪುರ ಭಾಗದ ರೆಸಾರ್ಟ್ಗಳಿಗೆ ಆಗಮಿಸುತ್ತಿದ್ದಾರೆ. ಇದೇ ನೆಪವಾಗಿಸಿಕೊಂಡ ಗಾಂಜಾ ಪೆಡ್ಲರ್ಗಳು ಬಸಾಪುರ ಭಾಗಗಳಲ್ಲಿ ನೆಲೆಯೂರಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರುತ್ತಿದೆ.

ಹೊಸವರ್ಷ ಆಚರಣೆ ನೆಪದಲ್ಲಿ ಬಸಾಪುರ ಗ್ರಾಮಕ್ಕೆ ಸಮೀಪವಿರುವ ರೆಸಾರ್ಟ್ಗಳಲ್ಲಿ ಪ್ರವಾಸಿಗರಿಂದ ಮೋಜಿ ಮಸ್ತಿ ಮಾಡಿಸುತ್ತಿದ್ದು ಪ್ರವಾಸಿಗರ ಕಿರುಚಾಟಕ್ಕೆ ಮ್ಯೂಸಿಕ್ಗೆ ಗ್ರಾಮಸ್ಥರಿಗೆ ನಿದ್ದೆ ಇಲ್ಲದಂತಾಗಿದೆ
ರಮೇಶ ಬಸಾಪುರ ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.