ಮುನಿರಾಬಾದ್: ಕಲ್ಯಾಣ ಕರ್ನಾಟಕ ಭಾಗದ ಶಕ್ತಿಪೀಠ, ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರಿಗಾಗಿ ‘ವಿಶೇಷ ದಾಸೋಹ’ ವ್ಯವಸ್ಥೆಗೆ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಮಂಗಳವಾರ ಚಾಲನೆ ನೀಡಿದರು.

ದೇವಸ್ಥಾನದ ಶಾಶ್ವತ ದಾಸೋಹ ಭವನದ ಮುಂಭಾಗದಲ್ಲಿ ಆಕರ್ಷಕ ತಾತ್ಕಾಲಿಕ ಜರ್ಮನ್ ಶೆಡ್ ಅನ್ನು ಭಕ್ತರ ದಾಸೋಹಕ್ಕಾಗಿ ನಿರ್ಮಿಸಲಾಗಿದೆ. ಗೋವು ಪೂಜೆ, ಜೋಗತಿ ಪೂಜೆ ಮತ್ತು ಅನ್ನಪೂರ್ಣೇಶ್ವರಿ ಹಾಗೂ ಹುಲಿಗೆಮ್ಮ ದೇವಿಯ ಪೂಜೆಯ ನಂತರ ದಾಸೋಹಕ್ಕೆ ಚಾಲನೆ ದೊರೆಯಿತು.

ನಿತ್ಯ ದಾಸೋಹದಲ್ಲಿ ಗೋಧಿ ಪಾಯಸ ಮತ್ತು ಅನ್ನ ಸಾಂಬಾರ್ ಮಾತ್ರ ಬಡಿಸಲಾಗುತ್ತಿತ್ತು. ಆದರೆ ಜಾತ್ರೆಯ ಅಂಗವಾಗಿ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ದಾನಿಗಳ ನೆರವಿನಿಂದ ಈ ಬಾರಿ ಜಾತ್ರೆಗೆ ಬರುವ ಭಕ್ತರಿಗಾಗಿ ವಿಶೇಷ ಭಕ್ಷ್ಯ ಭೋಜ್ಯಗಳು ಭಕ್ತರನ್ನು ಆಕರ್ಷಿಸಲಿವೆ.

ಮಂಗಳವಾರ ಆರಂಭವಾದ ದಾಸೋಹ ಕಾರ್ಯದಲ್ಲಿ ಬೂಂದಿ ಲಾಡು, ಜಿಲೇಬಿ, ಮೈಸೂರು ಪಾಕ್, ಪಾಯಸ, ಅನ್ನ ಸಾಂಬಾರ್ ಹಾಗೂ ಮಜ್ಜಿಗೆ ನೀಡಲಾಯಿತು. ಮೊದಲ ದಿನ 3 ರಿಂದ 4 ಸಾವಿರ ಭಕ್ತರು ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿದರು.

ಬುಧವಾರದಿಂದ (ಮೇ 14) ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹಾಗೂ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಒಂದು ತಿಂಗಳ ಕಾಲ ದಾಸೋಹ ವ್ಯವಸ್ಥೆ ಇರುತ್ತದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್. ಪ್ರಕಾಶ ರಾವ್ ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಜಿ ಸಂಸದ ಸಂಗಣ್ಣ ಕರಡಿ, ಗಣ್ಯರಾದ ಬಾಲಚಂದ್ರನ್, ಪ್ರಭುರಾಜ್ ಪಾಟೀಲ್, ಪಾಲಾಕ್ಷಪ್ಪ ಗುಂಗಾಡಿ, ಈ.ಈರಣ್ಣ, ಈ.ಅನಿಲ್ ಕುಮಾರ, ಜಗನ್ನಾಥ, ವಿಜಯ ಕುಮಾರ ಶೆಟ್ಟಿ, ಶರಣಪ್ಪ, ಶಿವಕುಮಾರ, ಈ. ವೀರೇಶ್, ವೆಂಕಟೇಶ್ ಪಂಪ ಸಾಗರ, ವಿಶ್ವನಾಥ್ರಾಜು, ಗ್ರಾಮ ಪಂಚಾಯಿತಿ ಸದಸ್ಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ದಾನಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.