ಕುಷ್ಟಗಿ: ‘ಸಾಮಾಜಿಕ ವ್ಯವಸ್ಥೆ ಮನುಷ್ಯ ಮನುಷ್ಯರನ್ನು ಪ್ರೀತಿಸುವ, ಹೃದಯಗಳನ್ನು ಬೆಸೆಯುವಂತಿರಬೇಕು. ಅಂತಹ ಉದಾತ್ತ ಚಿಂತನೆಗಳೇ ಭಾರತೀಯ ಸಂಸ್ಕೃತಿಯಾಗಿವೆ. ಆದರೆ ಅಂತಹ ತತ್ವಗಳನ್ನು ಮರೆತು ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸುವ ಮೂಲಕ ಮನುಷ್ಯರ ನಡುವಿನ ಅಂತರ ಹೆಚ್ಚಿಸುವ ಯಾವುದೇ ಧರ್ಮಗಳಲ್ಲಿನ ಕುತಂತ್ರಿಗಳನ್ನು ನಿಯಂತ್ರಿಸುವ ಅಗತ್ಯವಿದೆ’ ಎಂದು ಪ್ರವಚನಕಾರ ಲಾಲ್ ಹುಸೇನ್ ಕಂದಗಲ್ ಹೇಳಿದರು.

ಶುಕ್ರವಾರ ಇಲ್ಲಿ ಮುಸ್ಲಿಂ ಯುವ ಸಮಿತಿ, ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡದಲ್ಲಿ ಕುರ್ ಆನ್ ಪ್ರವಚನ ಕಾರ್ಯಕ್ರಮದಲ್ಲಿ ‘ಮಾನವನ ಘನತೆ’ ವಿಷಯವಾಗಿ ಮಾತನಾಡಿದ ಅವರು, ‘ಎಲ್ಲರೂ ಒಂದೇ ತಾಯಿಯ ಮಕ್ಕಳಾಗಿದ್ದೇವೆ. ಆಚರಣೆಗಳು ಬೇರೆಯಾಗಿರಬಹುದು ಮನುಷ್ಯರನ್ನು ಪ್ರೀತಿಸದೇ ಯಾವುದೇ ಜಾತಿ ಸಮುದಾಯಗಳು ನಡೆಸುವ ಧಾರ್ಮಿಕ ಆಚರಣೆಗಳು, ಆರಾಧನೆಗಳಿಗೆ ಅರ್ಥವೇ ಇರುವುದಿಲ್ಲ’ ಎಂದರು.

‘ನನ್ನ ಧರ್ಮ ಶ್ರೇಷ್ಠ ಎಂದು ಹೇಳುವುದು ಹಕ್ಕು. ಆದರೆ ಬೇರೆ ಧರ್ಮವನ್ನೂ ಪ್ರೀತಿಸುವುದರ ಆಧಾರದ ಮೇಲೆ ಆಯಾ ಧರ್ಮಗಳ ಶ್ರೇಷ್ಠತೆಯನ್ನು ಅಳೆಯಲು ಸಾಧ್ಯ. ಪ್ರಾಣ ಉಳಿಸುವ, ಹೃದಯ ಬೆಸೆಯುವ ಮತ್ತು ಎಲ್ಲರೂ ನಮ್ಮವರೇ ಎಂಬ ತತ್ವದ ತಳಹದಿಯಲ್ಲಿ ಬದುಕು ರೂಪಿಸಿಕೊಂಡು ಮಾನವೀಯತೆಗೆ ಜೀವ ತುಂಬುವ ಮೂಲಕ ಮಾನವನ ಘನತೆ ಹೆಚ್ಚಿಸುವ ಪ್ರಯತ್ನಗಳು ಸಮಾಜದಲ್ಲಿ ನಡೆಯಬೇಕು. ಮನುಷ್ಯರು ಕೂಡಿ ಬಾಳುವುದೇ ಯಶಸ್ವಿ ಜೀವನದ ರಹಸ್ಯ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ‘ಜೀವನದ ತತ್ವ ಅರಿತು ಯುವಕರು ಸನ್ಮಾರ್ಗದತ್ತ ಮುನ್ನಡೆಯುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಉತ್ತಮ ಪ್ರೇರಣೆ ನೀಡಬಲ್ಲವು’ ಎಂದರು.

ಸಾನ್ನಿಧ್ಯ ವಹಿಸಿದ್ದ ಮದ್ದಾನಿ ಮಠದ ಕರಿಬಸವ ಸ್ವಾಮೀಜಿ, ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ, ಬ್ರಹ್ಮಕುಮಾರಿ, ಮಹ್ಮದ್ ಆಫ್ತಾಬ್ ಇತರರು ಮಾತನಾಡಿದರು. ಮೌಲಾನಾ ಹಾಫೀಜ್ ಫಜ್ಲೆ ಆಜೀಮ್ ಕುರ್ ಆನ್ ಪಠಿಸಿದರು.

ಪುರಸಭೆ ಅಧ್ಯಕ್ಷ ಮಹಾಂತೇಶ ಕಲಭಾವಿ, ಸದಸ್ಯ ವಸಂತ ಮೇಲಿನಮನಿ, ಹನುಮೇಶ ಗುಮಗೇರಿ, ಸಾಹಿತಿ ಹ.ಯ.ಈಟಿವರು, ವೀರೇಶ ಬಂಗಾರಶೆಟ್ಟರ, ನಜೀರ್ಸಾಬ್ ಮೂಲಿಮನಿ, ನಟರಾಜ ಸೋನಾರ ಸೇರಿದಂತೆ ಅನೇಕರು ಇದ್ದರು. ಜೀವನಸಾಬ್ ವಾಲೀಕಾರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.