ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ: ಪಶು ಸಂಪತ್ತು ಸಂರಕ್ಷಿಸಲು ಮುಂದಾಗಿ

Published 11 ಆಗಸ್ಟ್ 2023, 4:28 IST
Last Updated 11 ಆಗಸ್ಟ್ 2023, 4:28 IST
ಅಕ್ಷರ ಗಾತ್ರ

ಯಲಬುರ್ಗಾ: ಪಶು ಸಂಪತ್ತು ಸಂರಕ್ಷಿಸಲು ಮುಂದಾಗಿ: ರೈತರ ಜೀವನಾಡಿಯಾಗಿರುವ ಪಶು ಸಂಪತ್ತು ಅಭಿವೃದ್ಧಿಯಾದರೆ ಮಾತ್ರ ರೈತರು ಮತ್ತು ದೇಶದ ಪ್ರಗತಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಜೀವಿನಿ ಪಶು ಸಖಿಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಜಾನುವಾರುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ರಕ್ಷಣೆಗೆ ಬೇಕಾಗ ಅಗತ್ಯ ಸೌಲಭ್ಯಗಳನ್ನು ಕಲ್ಲಿಸಿಕೊಡಲು ಇಲಾಖೆ ಮುಂದಾಗುವುದು ಮುಖ್ಯವಾಗಿದೆ. ಹಾಗೆಯೇ ಜಾನುವಾರುಗಳ ಸಂರಕ್ಷಣೆಗೆ ಬೇಕಾದ ಸೂಕ್ತ ಮಾರ್ಗದರ್ಶನದ ಅವಶ್ಯಕತೆಯನ್ನು ಈ ತರಬೇತಿ ಮೂಲಕ ಪೂರೈಸಲಾಗುತ್ತದೆ’ ಎಂದರು.

‘ತರಬೇತಿಯಲ್ಲಿ ಪಾಲ್ಗೊಂಡ ಪಶು ಸಖಿಯರು ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಾಗುತ್ತದೆ’ ಎಂದರು.

ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಕಾಶ ಚೂರಿ ಮಾತನಾಡಿದರು.
ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕಿನ 37 ಗ್ರಾ.ಪಂ ಪಶುಸಖಿಯರು ಭಾಗವಹಿಸಿದ್ದರು. ಕೂಕನೂರು ತಾಲೂಕಾ ಪಶು ಸಂಗೋಪನಾ ಇಲಾಖೆ ಎಡಿ ಡಾ. ಶಿವರಾಜ ಶೆಟ್ಟರ, ಎನ್‍ಆರ್‌ಎಲ್‍ಎಂ ಅಧಿಕಾರಿ ಉದಯಕುಮಾರ, ಡಾ.ಸುರೇಶ ಸರಗಣಾಚಾರ, ಡಾ.ವಿನೋದ್, ಡಾ.ಸವಿತಾ, ಡಾ.ಸಂಜಯ ಚಿತ್ರಗಾರ ಸೇರಿ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT