ಶ್ರೀರಂಗಪಟ್ಟಣ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಸಾರ್ವಭೌಮನಾಗಿದ್ದು, ಸಮರ್ಥ ಹಾಗೂ ಪ್ರಾಮಾಣಿಕೆ ವ್ಯಕ್ತಿಯನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿಕೊಳ್ಳಬೇಕು’ ಎಂದು ಗಾಂಧಿವಾದಿ ಡಾ.ಬಿ.ಸುಜಯಕುಮಾರ್ ಹೇಳಿದರು.

ಪಟ್ಟಣದಲ್ಲಿ ಪ್ರಜ್ಞಾವಂತರ ವೇದಿಕೆ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಜ್ಞಾವಂತ ಮತದಾರ ಪ್ರಶಸ್ತಿ ಪ್ರದಾನ ಸಮಾರಂಭ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ನಾಯಕರನ್ನು ಬದಲಾಯಿಸುವ ಪರಮೋಚ್ಛ ಶಕ್ತಿ ಮತದಾರನಿಗೆ ಇದೆ. ತನಗಿರುವ ಮತದಾನ ಎಂಬ ಶಕ್ತಿಯುತವಾದ ಅಸ್ತ್ರವನ್ನು ಚುನಾವಣೆ ಸಂದರ್ಭದಲ್ಲಿ ವಿವೇಚನೆಯಿಂದ ಬಳಸಬೇಕು. ಕಟ್ಟಕಡೆಯ ವ್ಯಕ್ತಿಯ ಕಲ್ಯಾಣವನ್ನು ಮರೆತವರನ್ನು ತಿರಸ್ಕರಿಸಬೇಕು. ಮಾಹಿತಿ ಹಕ್ಕು ಕಾಯಿದೆ– 2005 ಜನ ಸಾಮಾನ್ಯರಿಗೆ ವರದಾನವಾಗಿದೆ. ಆದರೆ ಇದು ದುರ್ಬಳಕೆ ಆಗಬಾರದು’ ಎಂದು ಅಭಿಪ್ರಾಯಪಟ್ಟರು.

ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಾ ಕಾರ್ಯಕ್ರಮ ಉದ್ಘಾಟಿಸಿದರು. ‘ಸಾಕಷ್ಟು ಕಡೆ ಜನ ಸಾಮಾನ್ಯರ ಸ್ಥಿತಿ ನಾಯಿಪಾಡಾಗಿದೆ. ಅಧಿಕಾರಸ್ಥರ ಹಿಂದೆ ಅಲೆಯುವಂತಾಗಿದೆ. ಓಟು ಮಾರಿಕೊಂಡರೆ ಪ್ರಶ್ನಿಸುವ ನೈತಿಕತೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರು ಸಮಾಜಕಂಟರು. ವ್ಯಕ್ತಿಗಿಂತ ಕಾನೂನು ದೊಡ್ಡದು ಎಂಬುದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಾಬೀತಾಗಿದೆ. ಮತದಾರರು ನಿಜವಾದ ಜನ ಸೇವಕರನ್ನು ತಮ್ಮ ಪ್ರತಿನಿಧಿಗಳಾಗಿ ಆರಿಸಿಕೊಳ್ಳದಿದ್ದರೆ ಪಶ್ಚಾತ್ತಾಪ ಪಡೆಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪ್ರಜ್ಞಾವಂತರ ವೇದಿಕೆ ಸಂಚಾಲಕ ಹಾಗೂ ವಕೀಲ ಸಿ.ಎಸ್. ವೆಂಕಟೇಶ್ ಪ್ರಾಸ್ತಾವಿಕ ಮಾತುಗಳಾಡಿದರು. ‘ಜನರಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ಪ್ರಜ್ಞಾವಂತರ ವೇದಿಕೆ ಹಲವು ವರ್ಷಗಳಿಂದ ಜಾಗೃತಿ ಮೂಡಿಸುತ್ತಿದೆ. ಚುನಾವಣೆಗಳಲ್ಲಿ ಆಸೆ, ಆಮಿಷಗಳನ್ನು ತಿರಸ್ಕರಿಸುವ ಪ್ರಮಾಣಿಕ ಮತದಾರರನ್ನು ಗುರುತಿಸಿ ಪ್ರಜ್ಞಾವಂತ ಮತದಾರ ಪ್ರಶಸ್ತಿ ನೀಡುತ್ತಿದೆ’ ಎಂದು ಹೇಳಿದರು.

ಪ್ರೊ.ಇಲ್ಯಾಸ್ ಅಹಮದ್ಖಾನ್, ಕ್ಯಾತನಹಳ್ಳಿ ಚಂದ್ರಣ್ಣ, ಸಿಂಧುವಳ್ಳಿ ಅಕ್ಬರ್ ಮಾತನಾಡಿದರು. ಪಟ್ಟಣದ ಪರಿಸರ ಪ್ರೇಮಿ ನಾರಾಯಣಗೌಡ ಮತ್ತು ತಾಲ್ಲೂಕಿನ ಚಂದಗಾಲು ಗ್ರಾಮದ ಅಜಯ್ ಸಿ.ವಿ ಅವರಿಗೆ ‘ಪ್ರಜ್ಞಾವಂತ ಮತದಾರ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಮಂಜುಳಾ ಆಲದಹಳ್ಳಿ, ಗೋವಿಂದರಾಜು ಜಾಗೃತಿ ಗೀತೆಗಳನ್ನು ಹಾಡಿದರು. ಕೆ.ಟಿ. ರಂಗಯ್ಯ, ಕಡತನಾಳು ಜಯಶಂಕರ್, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಚಿಕ್ಕತಮ್ಮೇಗೌಡ, ಕೆ.ಸಿ. ಮಾದೇಶ್, ಸುಜಾತ ಅರಸ್, ಸದಾನಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.