ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ತಾಯಿಯ ವಿರುದ್ಧ ಮಗಳ ಗೆಲುವು, ತಮ್ಮಂದಿರನ್ನು ಸೋಲಿಸಿದ ಅಣ್ಣಂದಿರು

Last Updated 30 ಡಿಸೆಂಬರ್ 2020, 13:19 IST
ಅಕ್ಷರ ಗಾತ್ರ

ಮಂಡ್ಯ: ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿ ಗ್ರಾಮ ಪಂಚಾಯಿತಿ ವಾರ್ಡ್‌ 1ರಲ್ಲಿ ತಾಯಿಯ ವಿರುದ್ಧ ಸ್ಪರ್ಧಿಸಿದ್ದ ಮಗಳು ಜಯಗಳಿಸಿದ್ದಾರೆ.

ತಾಯಿ ನಾಗಮ್ಮ, ಮಗಳು ಮಮತಾ ಸ್ಪರ್ಧಿಸಿದ್ದರು. ಮಮತಾ 96 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಗೆದ್ದ ಸೊಸೆ: ಚಾಮನಹಳ್ಳಿ ಗ್ರಾ.ಪಂ ಕ್ಷೇತ್ರದಲ್ಲಿ ಅತ್ತೆ ಲಕ್ಷ್ಮಮ್ಮ, ಸೊಸೆ ಗೌರಮ್ಮ ಸ್ಪರ್ಧಿಸಿದ್ದರು. ಗೌರಮ್ಮ 33 ಮತಗಳ ಅಂತದಿಂದ ಗೆಲುವು ಸಾಧಿಸಿದ್ದಾರೆ.

ತಮ್ಮಂದಿರನ್ನು ಸೋಲಿಸಿದ ಅಣ್ಣಂದಿರು: ಪಾಂಡವಪುರ ತಾಲ್ಲೂಕು, ಸುಂಕಾತೊಣ್ಣೂರು ಗ್ರಾ. ಪಂ ವ್ಯಾಪ್ತಿಯ ಅತ್ತಿಗಾನಹಳ್ಳಿ ಹಾಗೂ ಹರವು ಗ್ರಾ.ಪಂನಲ್ಲಿ ತಮ್ಮಂದಿರನ್ನು ಅಣ್ಣಂದಿರು ಸೋಲಿಸಿದ್ದಾರೆ.

ಅತ್ತಿಗಾನಹಳ್ಳಿಯಲ್ಲಿ ಅಣ್ಣ ಸಿ.ನಾಗರಾಜು, ಸಹೋದರ (ತಮ್ಮ) ಸಿ.ಚಂದ್ರು ಅವರನ್ನು 125 ಮತಗಳಿಂದ ಸೋಲಿಸಿದ್ದಾರೆ. ಹರವು ಗ್ರಾಮದಲ್ಲಿ ಎಚ್‌.ಕೆ.ಜಗದೀಶ್‌ ಸಹೋದರ (ತಮ್ಮ) ಎಚ್‌.ಕೆ.ಸತೀಶ್‌ ಅವರನ್ನು 15 ಮತಗಳಿಂದ ಸೋಲಿಸಿದ್ದಾರೆ.

ಸೋಲುಂಡ ಪತಿ, ಪತ್ನಿ, ಪುತ್ರ: ತಾಲ್ಲೂಕಿನ ಕೆನ್ನಾಳು ಗ್ರಾಮ ಪಂಚಾಯಿತಿಯ ಹರಳಹಳ್ಳಿ ಗ್ರಾಮದ ವಿವಿಧ ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ ಪತಿ, ಪತ್ನಿ, ಪುತ್ರ ಸೋಲು ಕಂಡಿದ್ದಾರೆ. ಸುಬ್ರಹ್ಮಣ್ಯ, ಪತ್ನಿ ಸುಮಿತ್ರಾ, ಪುತ್ರ ಅಭಿಷೇಕ ಸೋಲು ಕಂಡವರು.

ಮಾವ, ಸೊಸೆ, ನಾದಿನಿ ಸೋಲು: ಚಿನಕುರಳಿಯ ವಿವಿಧ ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ ಪ್ರಕಾಶ್, ಸೊಸೆ ಮೇಘನಾ, ನಾದಿನಿ ಸೋಲು ಕಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT