ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಸಂಕ್ರಾಂತಿ; ರಾಸುಗಳ ಸಿಂಗಾರ, ರಾಶಿ ಪೂಜೆ

Published 15 ಜನವರಿ 2024, 13:55 IST
Last Updated 15 ಜನವರಿ 2024, 13:55 IST
ಅಕ್ಷರ ಗಾತ್ರ

ಮಂಡ್ಯ: ‘ಸಂಕ್ರಾಂತಿ ಹಬ್ಬವೆಂದರೆ ಅದು ಸುಗ್ಗಿಯ ಹಬ್ಬವಾಗಿದ್ದು ರೈತರ ಸಂಭ್ರಮದ ಹಬ್ಬವಾಗಿದೆ. ರಾಸುಗಳ ಸಿಂಗಾರ ಸೇರಿದಂತೆ ಅವುಗಳನ್ನು ಕಿಚ್ಚುಹಾಯಿಸುವ ಸಂದರ್ಭವು ರೈತರ ಸಂತೋಷ ಇಮ್ಮಡಿಗೊಳಿಸುತ್ತದೆ’ ಎಂದು ಜೆಡಿಎಸ್‌ ಮುಖಂಡ ಬಿ.ಆರ್‌.ರಾಮಚಂದ್ರ ಬಣ್ಣಿಸಿದರು.

ಇಲ್ಲಿನ ಕಾವೇರಿ ನಗರ ಬಡಾವಣೆಯ 2ನೇ ಹಂತದ ಬಸ್‌ ನಿಲ್ದಾಣ ಬಳಿ ಗೋ ರಕ್ಷಣಾ ಸಮಿತಿ ಸಹಯೋಗದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಸೋಮವಾರ ಆಯೋಜಿಸಿದ್ದ ನಾಲ್ಕನೇ ವರ್ಷದ ಗೋ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸ್ಥಳೀಯ ನಿವಾಸಿಗಳು ಒಗ್ಗೂಡಿ ಗೋಪೂಜೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ನಾವು ಚಿಕ್ಕವರಿದ್ದಾಗ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಣೆ ಮಾಡುವುದನ್ನು ನೋಡಿದ್ದೇವೆ. ಗ್ರಾಮೀಣ ಭಾಗದ ಕಣದಲ್ಲಿ ರಾಶಿಕಟ್ಟಿ ಪೂಜೆ ಮಾಡಿ, ಉತ್ಸವ ಮಾಡುತ್ತಿದ್ದರು, ನಂತರದ ದಿನಗಳಲ್ಲಿ ಇದೆಲ್ಲವೂ ಮರೆತೋ ಹೊಗಿತ್ತು. ನಗರ ಪ್ರದೇಶದಲ್ಲಿ ರಾಶಿ ಮತ್ತು ರಾಸು ಪೂಜೆ ಮಾಡುತ್ತಿರುವುದನ್ನು ನೋಡಿದರೆ ನಮ್ಮ ಸಂಸ್ಕೃತಿ ಇನ್ನೂ ಜೀವಂತಾಗಿರುವುದಕ್ಕೆ ಸಾಕ್ಷಿ ಎಂಬಂತಿದೆ’ ಎಂದರು.

ಬಿಜೆಪಿ ಮುಖಂಡ ಅಶೋಕ್‌ ಜಯರಾಂ ಮಾತನಾಡಿ ‘ಆಧುನಿಕ ಜೀವನ ಶೈಲಿಯಲ್ಲಿ ಸಂಕ್ರಾಂತಿಯ ಸಾಂಪ್ರದಾಯಿಕ ಸೊಗಡು ಮರೆಯಾಗುತ್ತಿದೆ, ಎಲ್ಲೋ ಒಂದು ಕಡೆ ನಾವೆಲ್ಲರೂ ಚಿಕ್ಕಂದಿನಲ್ಲಿ ನೋಡಿದ ವಿಜೃಂಬಣೆಯ ಸಂಕ್ರಾಂತಿ ವೈಭವ ಇಂದಿನ ಮಕ್ಕಳು ನೋಡಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಸಂಕ್ರಾಂತಿ ಸಂಭ್ರಮವು ಮತ್ತೆ ಮುನ್ನಲೆಗೆ ಬರುವಂತೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದರು.

ಗೋ ರಕ್ಷಣಾ ಸಮಿತಿ ಮುಖಂಡ ಎಚ್.ಆರ್.ಅಶೋಕ್‌ಕುಮಾರ್, ಮುಖಂಡರಾದ ಸಿದ್ದರಾಮಯ್ಯ, ಎಚ್.ಎಂ.ಬಸವರಾಜ್, ಅಪ್ಪಾಜಪ್ಪ, ಪ್ರಮೋದ್, ವೀರಭದ್ರ, ನಾರಾಯಣ್, ನಾರಾಯಣಸ್ವಾಮಿ, ನವೀನ್, ಜಯರಾಮ್, ಸಂದೇಶ್ ಇದ್ದರು.

ಇದೇ ಸಂದರ್ಭದಲ್ಲಿ ಕಾವೇರಿನಗರ, ದ್ವಾರಕನಗರ, ಶ್ರೀರಾಮನಗರ ಕೆಲವು ದಂಪತಿ ಮತ್ತು ನಿವಾಸಿಗಳು ಗೋ ಪೂಜೆ ನೆರವೇರಿಸಿ ನಮಿಸಿದರು. ಜೊತೆಗೆ ಭತ್ತ ರಾಗಿ ರಾಶಿಗೂ ಪೂಜೆ ಮಾಡಿದರು, ನಂತರ ಪೊಂಗಲ್ ಮತ್ತು ಸಿಹಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT