ಭಾರತೀನಗರ: ಸಮೀಪದ ಕಾರ್ಹಳ್ಳಿ ಬಳಿಯ ಹೆಬ್ಬಾಳದಲ್ಲಿ ಭಾನುವಾರ ರಾತ್ರಿ ಗಣೇಶ ವಿಸರ್ಜನೆ ಮಾಡುವಾಗ ರವಿಕುಮಾರ್ (40) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಹೆಬ್ಬಾಳ ನಾಲೆಯಲ್ಲಿ ಗಣೇಶ ವಿಸರ್ಜನೆ ಮಾಡಲು ತೆರಳಿದ್ದಾಗ ರವಿಕುಮಾರ್ ನೀರಿನ ಸೆಳೆತವಿದ್ದ ಇಳಿದಿದ್ದಾರೆ. ತಕ್ಷಣವೇ ನೀರಿನಲ್ಲಿ ಕೊಚ್ಚಿ ಹೋಗಿದ್ದು, ರಾತ್ರಿ ವೇಳೆಯಾಗಿದ್ದರಿಂದ ರವಿ ನೀರಿನಲ್ಲಿ ಮುಳುಗಿರುವುದು ಗೊತ್ತಾಗಿಲ್ಲ. ಆದರೆ ಸ್ಥಳದಲ್ಲಿದ್ದ ಹೋಂಗಾರ್ಡ್ಸ್ಗಳು ಈದನ್ನು ಗಮನಿಸಿದ್ದು, ಯಾರೋ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾರೆಂದು ಗ್ರಾಮದ ಬೇರೆ ಯುವಕರಿಗೆ ತಿಳಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಪೊಲೀಸರು ಸೋಮವಾರ ಬೆಳಿಗ್ಗಿನಿಂದ ಹುಡುಕಾಟ ನಡೆಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಮಂಗಳವಾರ ಮಧ್ಯಾಹ್ನದ ವೇಳೆಗೆ ಅರ್ಧ ಕಿ.ಮೀ ದೂರದಲ್ಲಿ ಗ್ರಾಮದ ಯುವಕರೇ ಶವವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಕೆ.ಎಂ.ದೊಡ್ಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವ ಪರೀಕ್ಷೆಯ ನಂತರ ವಾರಸುದಾರರಿಗೆ ಶವವನ್ನು ಒಪ್ಪಿಸಲಾಗಿದೆ.

ಕುಣಿಯುತ್ತಿದ್ದಾಗ ಕುಸಿದು ಸಾವು

ಸಂತೇಬಾಚಹಳ್ಳಿ: ಇಲ್ಲಿನ ಜೋತ್ತನಪುರ ಗ್ರಾಮದಲ್ಲಿ ಭಾನುವಾರ ಸಂಜೆ ಗೌರಿ ಗಣೇಶನ ಮೂರ್ತಿ ವಿಸರ್ಜನೆ ವೇಳೆ ನೃತ್ಯ ಮಾಡುತ್ತಿದ್ದ ಮಂಜುನಾಥ್ (55) ಕುಸಿದು ಬಿದ್ದು ಮೃತಪಟ್ಟರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.