ಈ ಬಾರಿ ನೋಯಿಡಾ, ವಾರಾಣಸಿ, ದೆಹಲಿಗೆ ಪ್ರವಾಸ | ಕಳೆದ ವರ್ಷ ₹25 ಲಕ್ಷ ವೆಚ್ಚದಲ್ಲಿ ಚಂಡೀಗಡಕ್ಕೆ ಪ್ರವಾಸ | ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿ: ಸಾರ್ವಜನಿಕರ ಆಗ್ರಹ
ಮಂಡ್ಯವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿಗೊಳಿಸಲು ಉತ್ತಮ ಪ್ರದೇಶ ಮತ್ತು ದೆಹಲಿಯ ಮಹಾನಗರ ಪಾಲಿಕೆಗಳಿಗೆ ಸದಸ್ಯರು ಮತ್ತು ಅಧಿಕಾರಿಗಳು ‘ಅಧ್ಯಯನ ಪ್ರವಾಸ’ ಕೈಗೊಂಡಿದ್ದಾರೆ
ಪಂಪಾಶ್ರೀ ಪೌರಾಯುಕ್ತರು ಮಂಡ್ಯ ನಗರಸಭೆ
ನಗರಸಭೆ ಸದಸ್ಯರು ಕಳೆದ ವರ್ಷ ಫೆಬ್ರುವರಿಯಲ್ಲೂ ₹25 ಲಕ್ಷ ವೆಚ್ಚದಲ್ಲಿ ‘ಚಂಡೀಗಡ ಅಧ್ಯಯನ ಪ್ರವಾಸ’ ಮಾಡಿದ್ದರು. ಅದರಿಂದ ಮಂಡ್ಯ ನಗರಕ್ಕೆ ಏನು ಪ್ರಯೋಜನವಾಗಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಈ ಬಾರಿ ಅಧಿಕಾರವಧಿ ಕೇವಲ 3 ತಿಂಗಳು ಮಾತ್ರ ಉಳಿದಿದ್ದು ಕಡೇ ಗಳಿಗೆಯಲ್ಲಿ ಪ್ರವಾಸ ಮಾಡಿ ಅಲ್ಲಿ ಕಲಿತದ್ದನ್ನು ಕಡಿಮೆ ಅವಧಿಯಲ್ಲಿ ಇಲ್ಲಿ ಅನುಷ್ಠಾನ ಮಾಡಲು ಹೇಗೆ ಸಾಧ್ಯ? ಈ ದುಂದು ವೆಚ್ಚಕ್ಕೆ ಕಡಿವಾಣ ಬೀಳಬೇಕು.
ಎಂ.ಬಿ.ನಾಗಣ್ಣಗೌಡ ಕರುನಾಡ ಸೇವಕರು ಸಂಘಟನೆಯ ಮುಖಂಡ
ಮಂಡ್ಯ ನಗರದಲ್ಲಿ ರಸ್ತೆಗಳು ಹಳ್ಳ ಹಿಡಿದಿವೆ ರಸ್ತೆಬದಿ ಕಸದ ರಾಶಿ ಗಬ್ಬು ನಾರುತ್ತಿದೆ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ ನಿರ್ವಹಣೆ ಕೊರತೆಯಿಂದ ಪಾರ್ಕ್ ಪಾಳುಬಿದ್ದಿವೆ.. ಹೀಗೆ ಮೂಲಸೌಕರ್ಯದಿಂದ ಮಂಡ್ಯ ನಗರ ಬಳಲುತ್ತಿದೆ. ಪ್ರತಿ ವರ್ಷ ನಗರಸಭೆ ಸದಸ್ಯರು ಕೈಗೊಳ್ಳುವ ‘ಅಧ್ಯಯನ ಪ್ರವಾಸ’ದಿಂದ ನಗರಕ್ಕೆ ಯಾವ ಪ್ರಯೋಜನವೂ ಆಗಿಲ್ಲ. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುವ ಬದಲು ₹30 ಲಕ್ಷವನ್ನು ಮಂಡ್ಯ ನಗರ ಅಭಿವೃದ್ಧಿಗೆ ಬಳಸಬೇಕಿತ್ತು.
ಎಚ್.ಸಿ.ಮಂಜುನಾಥ್ ಜಿಲ್ಲಾ ಘಟಕದ ಅಧ್ಯಕ್ಷ ಕನ್ನಡಸೇನೆ
ಅಧ್ಯಯನ ಪ್ರವಾಸ ಮಾಡುವುದು ತಪ್ಪಲ್ಲ. ಆದರೆ ಕಡೇ ಗಳಿಗೆಯಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಪ್ರವಾಸ ಮಾಡುವುದು ಸಮಂಜಸವಲ್ಲ. ಇದರಿಂದ ಮಂಡ್ಯ ನಗರಕ್ಕೆ ಏನು ಅನುಕೂಲ ಎಂಬುದನ್ನು ಜನಪ್ರತಿನಿಧಿಗಳಾದವರು ಪ್ರಶ್ನಿಸಿಕೊಂಡು ನಿರ್ಧಾರ ಕೈಗೊಳ್ಳಬೇಕಿತ್ತು. ಈ ಪ್ರವಾಸ ಔಚಿತ್ಯವೇ? ಅನಿವಾರ್ಯವೇ?