ಸ್ಟಾಲಿನ್ ಸಭೆ ಬಹಿಷ್ಕರಿಸಿ: ವಾಟಾಳ್
ಮಾ.22ರಂದು ದಕ್ಷಿಣ ರಾಜ್ಯಗಳ ಸಭೆಯನ್ನು ಡಿಎಂಕೆ ಸ್ಟಾಲಿನ್ ಕರೆದಿದ್ದಾರೆ. ಅಲ್ಲಿ ನಮ್ಮ ಸರ್ಕಾರದವರೂ ಹೋಗುತ್ತಿದ್ದಾರೆ. ಮೇಕೆದಾಟು ಯೋಜನೆಗೆ ಅವಕಾಶ ಕೊಡಲಿಲ್ಲ. ಸ್ಟಾಲಿನ್ ಮುಂದೆ ಹೋಗಿ ಕುಳಿತುಕೊಳ್ಳುವುದಕ್ಕೆ ನಾಚಿಕೆ ಇಲ್ಲವೇ ಯಾವುದೇ ಕಾರಣಕ್ಕೂ ಸ್ಟಾಲಿನ್ ಸಭೆಗೆ ಹೋಗಬಾರದು. ಸಭೆಯನ್ನು ಬಹಿಷ್ಕರಿಸಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.