ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ನಿಯಮ ಪಾಲಿಸಿ ಅಪಘಾತ ತಪ್ಪಿಸಿ: ಆರ್.ಟಿ.ಒ ಮಲ್ಲಿಕಾರ್ಜುನ್

ರಸ್ತೆ ಸುರಕ್ಷತಾ ಜಾಗೃತಿ ಜಾಥಾದಲ್ಲಿ ಆರ್.ಟಿ.ಒ ಮಲ್ಲಿಕಾರ್ಜುನ್
Published 23 ಫೆಬ್ರುವರಿ 2024, 13:21 IST
Last Updated 23 ಫೆಬ್ರುವರಿ 2024, 13:21 IST
ಅಕ್ಷರ ಗಾತ್ರ

ನಾಗಮಂಗಲ: ವಾಹನ ಸವಾರರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅಪಘಾತಗಳನ್ನು ತಪ್ಪಿಸಿ, ಅಮೂಲ್ಯ ಜೀವಗಳನ್ನು ರಕ್ಷಣೆ ಮಾಡಿ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ಟಿ.ಬಿ.ಬಡಾವಣೆಯಲ್ಲಿ ಮಂಡ್ಯ ವೃತ್ತದ ವರೆಗೆ ಬುಧವಾರ ತಾಲ್ಲೂಕು ಆಡಳಿತ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಆಯೋಜಿಸಿದ್ದ  ರಸ್ತೆ ಸುರಕ್ಷತಾ ಸಪ್ತಾಹ, ಮಾಸಾಚರಣೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಸ್ತೆ ನಿಯಮಗಳನ್ನು ಪಾಲಿಸುವುದು,  ದ್ವಿಚಕ್ರ ವಾಹನ ಸವಾರರು ಮೂರು,ನಾಲ್ಕು ಜನರೊಂದಿಗೆ ಸವಾರಿ ಮಾಡದಿರುವುದು, ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ವಾಹನ ಚಾಲಕರು ಸೀಟ್ ಬೆಲ್ಟ್  ಧರಿಸಬೇಕು. ಅತಿವೇಗ , ನಿರ್ಲಕ್ಷ್ಯ ಬೇಡ  ಎಂದು ಜನರಿಗೆ ಮನವಿ ಮಾಡಿದರು.

 ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್ , ಸವಾರರು, ಚಾಲಕರು ಚಾಲನೆ ವೇಳೆ ಮೊಬೈಲ್ ಬಳಕೆ  ಕಡ್ಡಾಯವಾಗಿ ಬಿಡಬೇಕು. ಎಂದರು. ಮೋಟಾರು ವಾಹನ ನಿರೀಕ್ಷಕ ಸಿ.ಎಸ್.ಸತೀಶ್  ಮಾತನಾಡಿ, ವಾಹನ ಚಾಲಕರು ಮತ್ತು ಸಾರ್ವಜನಿಕರು ಸುರಕ್ಷತೆಯಿಂದ ಇರುವಂತೆ ಎಲ್ಲರೂ ನಿಯಮ ಪಾಲನೆ ಮಾಡಬೇಕು ಎಂದರು.

ಟಿ.ಬಿ.ಬಡಾವಣೆಯ ಚಾಮರಾಜನಗರ- ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರ್.ಟಿ.ಒ .ಕಚೇರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ಶಿಕ್ಷಣ ಸಂಸ್ಥೆಯ ಶಿಕ್ಷಕರು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿ ವಿದ್ಯಾರ್ಥಿಗಳು, ಶೀರಾಪಟ್ಟಣದ ವಿಸ್ಡಂ ಶಾಲೆಯ ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಭಾಗವಹಿಸಿದರು.

ಜಾಥಾದಲ್ಲಿ ತಾ.ಪಂ. ಇಒ ಚಂದ್ರಮೌಳಿ, ಬಿಇಒ ಕೆ.ಯೋಗೇಶ್, ಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಅಶೋಕ್ ಕುಮಾರ್, ಪಿಎಸ್ ಐ ಸತೀಶ್, ಆರ್.ಟಿ.ಇನ್‌ಸ್ಪೆಕ್ಟರ್ ಸಿ.ಎಸ್.ಸತೀಶ, ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ್, ಆರ್.ಎಫ್.ಒ ಮಂಜುನಾಥ್, ಆರ್.ಟಿ.ಒ ಕಚೇರಿ ಅಧೀಕ್ಷಕ ಸತೀಶ್, ಸಿಬ್ಬಂದಿಗಳಾದ ರಾಧಾಕೃಷ್ಣ, ಹುಮೂಯೂನ್ ಪಾಷ, ನೇಹಾ ಅಪ್ಸರ್, ಕರಡಹಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಚ್.ಎನ್.ಜಯಶಂಕರ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT