‘ತಾಲ್ಲೂಕಿನ ಬಳ್ಳೇಕೆರೆ, ಹುಲಿಕೆರೆ ಇತರ ಶಾಲೆಗಳ ವಿದ್ಯಾರ್ಥಿಗಳನ್ನು ತರಕಾರಿ, ಇತರ ಸರಕು ಸರಂಜಾಮು ಸಾಗಿಸುವ ವಾಹನಗಳಲ್ಲಿ ಕರೆತರಲಾಗಿತ್ತು. 10 ಮಂದಿ ನಿಲ್ಲಬಹುದಾದ ಗೂಡ್ಸ್ ವಾಹನದಲ್ಲಿ ದುಪ್ಪಟ್ಟು ವಿದ್ಯಾರ್ಥಿಗಳನ್ನು ತುಂಬಲಾಗಿತ್ತು. ಬಳ್ಳೇಕೆರೆಯಿಂದ ವಿದ್ಯಾರ್ಥಿಗಳನ್ನು ಕರೆತಂದ ವಾಹನದಲ್ಲಿ ಮಿಸುಕಾಡಲೂ ಜಾಗ ಇರಲಿಲ್ಲ. ಇಂತಹ ವಾಹನಗಳಲ್ಲಿ ಬಾಲಕಿಯರು 15ರಿಂದ 20 ಕಿ.ಮೀ. ದೂರದಿಂದ ನಿಂತುಕೊಂಡೇ ಬಂದಿದ್ದರು’ ಎಂದು ಸ್ಥಳೀಯರು ದೂರಿದರು.