ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ | ವ್ಯಕ್ತಿಗೆ ಚೂರಿ ಚುಚ್ಚಿದ್ದ ಆರೋಪಿಗೆ 3 ವರ್ಷ ಜೈಲು

Published 20 ಫೆಬ್ರುವರಿ 2024, 15:12 IST
Last Updated 20 ಫೆಬ್ರುವರಿ 2024, 15:12 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದ ಆರೋಪಿಗೆ ಪಟ್ಟಣದ ಮೂರನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಸೋಮವಾರ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿದೆ.

ಪಟ್ಟಣ ವ್ಯಾಪ್ತಿಯ ಗಂಜಾಂನ ನಂಜುಂಡ ನಾಯಕ ಎಂಬವರ ಮಗ ನಿತೀಶ್‌ ಶಿಕ್ಷೆಗೆ ಗುರಿಯಾಗಿದ್ದಾರೆ. ನ್ಯಾಯಾಧೀಶರಾದ ಟಿ. ಗೋಪಾಲಕೃಷ್ಣ ರೈ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿ ತೀರ್ಪು ನೀಡಿದ್ದಾರೆ.

ತಾಲ್ಲೂಕಿನ ಕಿರಂಗೂರು ಗ್ರಾಮದ ಜಾನ್‌ಸನ್‌ ಪ್ರಭು ಎಂಬವರನ್ನು ನಿತಿನ್‌ 2013ರ ಜ.27ರಂದು ಅಪಹರಿಸಿ, ಮಂಡ್ಯ ತಾಲ್ಲೂಕಿನ ಹೊಡಾಘಟ್ಟ ಬಳಿಗೆ ಕರೆದೊಯ್ದು ಚೂರಿಯಿಂದ ಇರಿದಿದ್ದನು. ಅಂದಿನ ಎಸ್‌ಐ ಬಿ.ಜಿ. ಕುಮಾರ್‌ ಆರೋಪಿಯನ್ನು ಬಂಧಿಸಿದ್ದರು. ಪ್ರಕರಣ ಕುರಿತು ಅಂದಿನ ತನಿಖಾಧಿಕಾರಿ ವಂಕಟರಾಮಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಎಂ.ಕೆ. ಪ್ರಪುಲ್ಲಾ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT