ಕೆ.ಆರ್.ಪೇಟೆ: ಜೆಡಿಎಸ್ ಪಕ್ಷ ಸರ್ವಜನಾಂಗದ ಹಿತ ಬಯಸುವ ಪಕ್ಷ ವಾಗಿದ್ದು, ಪ್ರತಿಯೊಬ್ಬ ಮುಖಂಡರೂ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಹೊರಬೇಕೆಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಹೇಳಿದರು.

ತಾಲ್ಲೂಕು ಜೆಡಿಎಸ್ ಪಕ್ಷದ ವತಿಯಿಂದ ಪಟ್ಟಣದಲ್ಲಿ ಸೋಮವಾರ ನಡೆದ ಸದಸ್ಯತ್ವ ನೋಂದಣಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಜೆಡಿಎಸ್ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತರೇ ನಾಯಕರಾಗಿದ್ದು, ಪ್ರತಿಯೊಬ್ಬರೂ ಪಕ್ಷದ ಸಂಘಟನೆಗೆ ಆದ್ಯತೆ ನೀಡಬೇಕು. ಮುಂದಿನ ತಿಂಗಳ 2 ಅಥವಾ 3ನೇ ವಾರದಲ್ಲಿ ನಿಖಿಲ್ ಕುಮಾರಸ್ವಾಮಿ ತಾಲ್ಲೂಕಿಗೆ ಬರಲಿದ್ದು, ಯುವ ಸಂಘಟನೆಗೆ ಚಾಲನೆ ನೀಡಲಿದ್ದಾರೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮಾತನಾಡಿ, ತಾಲ್ಲೂ ಕಿನ ಪ್ರತಿ ಹೋಬಳಿಮಟ್ಟದಲ್ಲಿ ಕಾರ್ಯ ಕರ್ತರ ಸಭೆ ಕರೆದು ವಿವಿಧ ವರ್ಗಗಳ ಸಮಿತಿ ರಚಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಮನ್‌ಮುಲ್ ನಿರ್ದೇಶಕ ಎಚ್.ಟಿ.ಮಂಜು ಮಾತನಾಡಿ, ಜೆಡಿಎಸ್ ವಶದಲ್ಲಿರುವ ಮುರುಕನಹಳ್ಳಿ, ತೆಂಡೇಕೆರೆ, ಹರಳಹಳ್ಳಿ, ಸಿಂದಘಟ್ಟ ಗ್ರಾ.ಪಂ.ಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮ ಗಳಿಗೆ ಕಾಯಂ ಪಿಡಿಒ ನೇಮಕ ಮಾಡದೆ ಅಥವಾ ಪಿಡಿಒ ಮೂಲಕ ಬಿಜೆಪಿ ಅಭಿವೃದ್ಧಿಗೆ ತಡೆ ಮಾಡು ತ್ತಿದೆ. ಇದರ ವಿರುದ್ಧ ಪಕ್ಷದ ಕಾರ್ಯಕರ್ತರು ಬಹಿರಂಗ ಹೋರಾಟಕ್ಕೂ ಸಿದ್ಧರಾಗ ಬೇಕೆಂದು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ, ವಿಧಾನಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬೇಕಿದೆ. ಸಂಘಟನೆಗಾಗಿ ಮುಖಂಡರೊಬ್ಬರನ್ನು ಗುರುತಿಸುವ ಕೆಲಸವನ್ನು ಹೈಕಮಂಡ್ ಮಾಡಬೇಕು. ತಾಲ್ಲೂಕಿನಲ್ಲಿರುವ ಪಕ್ಷದ ಮುಖಂಡರು ಹೊಂದಾಣಿಕೆಯಿಂದ ಕೆಲಸಮಾ ಡಬೇಕು ಎಂದು ಕಾರ್ಯಕರ್ತರು ಸಲಹೆ ನೀಡಿದರು.

ಜೆಡಿಎಸ್ ಯುವ ಘಟಕದ ತಾ.ಅಧ್ಯಕ್ಷ ಸಂತೋಷ್ ಕುಮಾರ್, ಜಿ.ಪಂ ಮಾಜಿ ಅಧ್ಯಕ್ಷೆ ಗಾಯತ್ರಿ ರೇವಣ್ಣ, ಮಾಜಿ ಸದಸ್ಯ ರಾಮದಾಸ್, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಮುಖಂಡರಾದ ಅಕ್ಕಿಹೆಬ್ಬಾಳು ರಘು, ಬೋಳಮಾರನಹಳ್ಳಿ ಮಂಜುನಾಥ್, ಐನೋರಹಳ್ಳಿ ಮಲ್ಲೇಶ್, ಎಂ.ಪಿ.ಲೋಕೇಶ್, ಬಣ್ಣೆನಹಳ್ಳಿ ಧನಂಜಯ, ಕಾಯಿ ಮಂಜೇಗೌಡ, ಸಂಜೀವಪ್ಪ, ಮೋಹನ್, ರಾಮಚಂದ್ರು, ಸಂಗಾಪುರ ಶಶಿಧರ್, ದಡದಹಳ್ಳಿ ಅತೀಕ್, ಸಾಕ್ಷಿ ಬೀಡು ನವೀನ್ ಕುಮಾರ್, ಮಹಿಳಾ ಘಟಕದ ರೇಖಾ, ರಶ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.