ಭಾನುವಾರ, ಜುಲೈ 3, 2022
24 °C

ಮೈಸೂರು ವಿ.ವಿಯಿಂದ ಕೋವಿಡ್ ರ್‍ಯಾಪಿಡ್ ಟೆಸ್ಟ್ ಕಿಟ್ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ನೇತೃತ್ವದಲ್ಲಿ ಕೋವಿಡ್ ರ್‍ಯಾಪಿಡ್ ಟೆಸ್ಟ್ ಕಿಟ್ ಅಭಿವೃದ್ಧಿಪಡಿಸಲಾಗಿದೆ.

ಈಗಾಗಲೇ ನೂರಾರು ಮಂದಿ ಮೇಲೆ ಪ್ರಯೋಗ ನಡೆಸಿದ್ದು, ಶೇ. 90ರಷ್ಟು ಯಶಸ್ಸು ಲಭಿಸಿದೆ. ಐಸಿಎಂಆರ್‌ಗೆ ಕಳುಹಿಸುತ್ತಿದ್ದು, ಅನುಮೋದನೆ ಸಿಕ್ಕಿದ ತಕ್ಷಣ ಮಾರುಕಟ್ಟೆಗೆ ಬಿಡಲಾಗುವುದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೈದರಾಬಾದ್‌ನ ಲಾರ್ವೆನ್ ಬಯೋಲಾಜಿಕ್ಸ್ ಕಂಪನಿ ಜೊತೆಗೂಡಿ ವಿಶ್ವವಿದ್ಯಾಲಯದ ಮೂವರು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದೇವೆ. ಇದಕ್ಕೆ ₹ 100 ದರ ನಿಗದಿಪಡಿಸಲಾಗುವುದು ಎಂದರು.

ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದ ಸಂಚಾಲಕ ಡಾ.ಎಸ್.ಚಂದ್ರ ನಾಯಕ್ ಹಾಗೂ ಮಾಲಿಕ್ಯೂಲರ್ ಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಡಿ.ಮೋಹನ್ ನೇತೃತ್ವದಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನೆಗೆ  ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಸಹಕಾರ ಹಾಗೂ ಅಗತ್ಯ ನೆರವು ನೀಡಿದ್ದಾರೆ ಎಂದು ಪ್ರೊ.ರಂಗಪ್ಪ ತಿಳಿಸಿದರು.

'ವರ್ಷದಿಂದ ಈ ಸಂಶೋಧನೆ ನಡೆಸಿದ್ದೇವೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಸಂಶೋಧನೆಗೆ ಮುಂದಾದೆವು. ಈ ಕಿಟ್ ಬಳಕೆ ಮೂಲಕ ಕೊರೊನಾ ರೂಪಾಂತರಿ ವೈರಸ್‌ಗಳನ್ನು ಸುಲಭ ಹಾಗೂ ನಿಖರವಾಗಿ ಪತ್ತೆ ಹಚ್ಚಬಹುದು. ಸದ್ಯ ಕೋವಿಡ್ ಪರೀಕ್ಷೆಗೆ ಬಳಸುತ್ತಿರುವ ಸಾಧನಗಳ ಮೂಲಕ ಶೇ 40 ರಿಂದ 60 ರಷ್ಟು ಮಾತ್ರ ಖಚಿತ ಫಲಿತಾಂಶ ದೊರಕುವಂತಾಗಿದೆ' ಎಂದು ಹೇಳಿದರು.

'ನಾವು ವಿನ್ಯಾಸಗೊಳಿಸಿರುವ ಸಾಧನಗಳ ಬಳಸಿ ಗಂಟಲು ದ್ರವ ಹಾಗೂ ಮೂಗಿನ ದ್ರವವನ್ನು ತೆಗೆದು ಮನೆಯಲ್ಲೇ ಪರೀಕ್ಷೆ ಮಾಡಬಹುದಾಗಿದೆ. ಈ ಕಿಟ್‌ನಲ್ಲಿ ಅಗತ್ಯ ಸಾಧನಗಳು ಇವೆ. ಕೋವಿಡ್ ಇದೆಯೋ, ಇಲ್ಲವೋ ಎಂಬುದನ್ನು 10 ನಿಮಿಷಗಳಲ್ಲಿ ಕಂಡುಕೊಳ್ಳಬಹುದಾಗಿದೆʼ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು