ಬುಧವಾರ, ಜನವರಿ 19, 2022
18 °C
10ರಿಂದ ಬಹುರೂಪಿ ನಾಟಕೋತ್ಸವ; ಸಮಾರೋಪಕ್ಕೆ ಆಹ್ವಾನ

ಬಹುರೂಪಿ ನಾಟಕೋತ್ಸವ; ಸಮಾರೋಪಕ್ಕೆ ಚಕ್ರವರ್ತಿ ಸೂಲಿಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಭಾಷಣವನ್ನು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ನಡೆಸಿಕೊಡಲಿದ್ದಾರೆ’ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದಾಗ, ಸುದ್ದಿಗಾರರು ‘ಆಹ್ವಾನ ಪತ್ರಿಕೆಯಲ್ಲಿ ಸೂಲಿಬೆಲೆ ಅವರಿಗೆ ಸಮಾಜ ಸೇವಕ ಎಂಬ ವಿಶೇಷಣ ಬಳಸಲಾಗಿದೆ. ಅವರ ಸಮಾಜಸೇವೆ ಏನು’ ಎಂದು ಪ್ರಶ್ನಿಸಿದರು. 

‘ಯಾರು ಏನೇ ಹೇಳಲಿ, ಸೂಲಿಬೆಲೆ ಸಮಾರೋಪ ಭಾಷಣ ಮಾಡಲಿದ್ದಾರೆ. ಅವರ ಭಾಷಣವನ್ನು ಕೇಳಿ, ಆ ಕುರಿತು ಏನು ಬೇಕಾದರೂ ಬರೆಯಿರಿ. ಅವರು ಯುವಜನರಲ್ಲಿ ದೇಶಪ್ರೇಮದ ಜಾಗೃತಿ ಮೂಡಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ’ ಎಂದು ಹೇಳಿದ ಕಾರ್ಯಪ್ಪ, ‘ಅವರನ್ನು ಏಕೆ ಕರೆಯಬಾರದು, ಅವರೇನು ದೇಶದ್ರೋಹಿಯೇ’ ಎಂದು ಮರು ಪ್ರಶ್ನೆ ಹಾಕಿದರು.

‘ಸೂಲಿಬೆಲೆ ಅವರನ್ನು ಮಾಧ್ಯಮದ ಎಲ್ಲರೂ ವಿರೋಧಿಸುತ್ತಿಲ್ಲ. ಮಾಧ್ಯಮದವರಲ್ಲೇ ಗುಂಪುಗಾರಿಕೆ ಇದೆ’ ಎಂದೂ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು