ಮಂಗಳವಾರ, ಜೂನ್ 2, 2020
27 °C

ದೀಪದ ಶಾಖಕ್ಕೆ ವೈರಸ್‌ ಸಾಯುತ್ತವೆ: ಶಾಸಕ ರಾಮದಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ದೀಪ ಹಚ್ಚುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ವೈರಸ್‌ಗಳು ಎಲ್ಲೇ ಇದ್ದರೂ ದೀಪದ ಬೆಳಕಿನ ಬಳಿ ಬಂದು, ಶಾಖ ತಡೆಯಲಾರದೆ ಸಾಯುತ್ತವೆ’ ಎಂದು ಬಿಜೆಪಿ ಶಾಸಕ ಎಸ್‌.ಎ.ರಾಮದಾಸ್‌ ಶನಿವಾರ ಇಲ್ಲಿ ಹೇಳಿದರು.

ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಹಚ್ಚಲು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದರಿಂದ ರಾಮದಾಸ್‌ ಮೈಸೂರು ನಗರದಲ್ಲಿ ಮೈಕ್‌ ಹಿಡಿದು ಪ್ರಚಾರದಲ್ಲಿ ತೊಡಗಿದ್ದಾರೆ.  

ದಸರಾ ವಸ್ತು ಪ್ರದರ್ಶನದ ಮಾರುಕಟ್ಟೆಯಲ್ಲಿ ಮೇಣದ ಬತ್ತಿ ಮತ್ತು ಮಾಸ್ಕ್‌ಗಳನ್ನು ವಿತರಣೆ ಮಾಡಿದರು. ಈ ವೇಳೆ  ಜನರು ಗುಂಪಾಗಿ ಬಂದು, ಮುಗಿಬಿದ್ದ ಘಟನೆಯೂ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು