ಭಾನುವಾರ, ಜನವರಿ 19, 2020
20 °C

ಕೆಬ್ಬೆಕೊಪ್ಪಲು: ಎರಡು ವರ್ಷದ ಚಿರತೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹುಣಸೂರು: ಕೆಬ್ಬೆಕೊಪ್ಪಲು ಕೆರೆ ಏರಿ ಮೇಲೆ 2 ವರ್ಷದ ಚಿರತೆ ಅನುಮಾನಾಸ್ಪದವಾಗಿ ಮೃತಪಟ್ಟಿದೆ.

‌ಕೆರೆ ಏರಿ ಮೇಲೆ ಚಿರತೆ ಕಳೇಬರ ಇರುವುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಸ್ಥಳಕ್ಕೆ ಎಸಿಎಫ್‌ ಸೋಮಯ್ಯ ಮತ್ತು ಡಿಆರ್‌ಎಫ್‌ಒ ರಿಜ್ವಾನ್ ಭೇಟಿ ನೀಡಿ ಪರಿಶೀಲಿಸಿದರು. ಅರಣ್ಯ ಇಲಾಖೆ ಪಶುವೈದ್ಯಾಧಿಕಾರಿ ಡಾ.ಮುಜೀಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸಂಸ್ಕಾರ ಮಾಡಲಾಯಿತು.

ಚಿರತೆ ಮೇಲೆ ಗಾಯಗಳು ಗೋಚರಿಸಿದ್ದು, ಕಾಡುಹಂದಿಯೊಂದಿಗೆ ಕಾದಾಟ ನಡೆಸಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಸೋಮಯ್ಯ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು